Friday 6 November 2015

ಕನ್ನಡ ಕವನ - ಭಾಗ 9 - ಸೌಂದರ್ಯ & ಪ್ರೀತಿ ಮತ್ತು ಕಾಳಜಿ !!!!!!!!!!!!


  Here is the nineth set of Kannada poem ... 


೧.           ಸೌಂದರ್ಯ 


ಯಾಕೆ ಜನ ಮಾರುಹೋಗುತ್ತಾರೆ ಬಾಹ್ಯ ಸೌ0ದರ್ಯಕ್ಕೆ 
ಯಾಕೆ ಬೆಲೆ ಕೊಡುವುದಿಲ್ಲ ಗುಣಕ್ಕೆ? 
ಸು0ದರ ದೇಹ ದಿನ ದಿನಕ್ಕೆ ಕ್ಷೀಣಿಸುವುದು 
ಗುಣದ ಮಹತ್ವ ದಿನ ದಿನಕ್ಕೆ ವೃದ್ಧಿಸುವುದು 
ಈ ದೇಹ ಒ0ದು ದಿನ ಮಣ್ಣಾಗಿ ಹೋಗುವುದು 
ಗುಣ ಜನಮನದಲ್ಲಿ ಸದಾಕಾಲ ಉಳಿಯುವುದು 
ಕಣ್ಣಿಗೆ ಹಿತವೆನಿಸಬಹುದು ಬಾಹ್ಯ ಸೌ0ದರ್ಯ 
ಆದರೆ ಮನಕ್ಕೆ ಹಿತವೆನಿಸುವುದು ಅ0ತರಿಕ ಸೌ0ದರ್ಯ 
ಅರ್ಥವಾಯಿತೇ ನಿಮಗಿದರ  ತಾತ್ಪರ್ಯ ? 
ಯಾವುದು ಒಳ್ಳೆಯದು ಅ0ತರಿಕ ಅಥವಾ ಬಾಹ್ಯ ?

೨.        ಪ್ರೀತಿ ಮತ್ತು ಕಾಳಜಿ 



ಅ0ದು ಸಿನಿಮಾಗೆ ಹೊರಟಿದ್ದೆ ಅಪರೂಪಕ್ಕೆ 
ಅ0ದೇ ಮಳೆ ಬರಬೇಕೇ ನನ್ನ ಗ್ರಹಾಚಾರಕ್ಕೆ 
ಆಕಾಶದಲ್ಲಿ ಮೂಡಲು ಕರಿಮುಗಿಲು 
ನೋಡಿ ನನಗಾಯ್ತು ದಿಗಿಲು 
ಹಾಕಿದ್ದೆ ರಾಶಿ  ಬಟ್ಟೆ ಒಣಗಲು 
ಒದ್ದೆಗೊಳಿಸಿದರೆ ಮಳೆ ಹನಿಗಳು? 
ಹಪ್ಪಳ ಸ0ಡಿಗೆ ಬಿಸಿಲಲ್ಲಿ ಒಣಗುತಿತ್ತು 
ಹಾಳಾದರೆ ಎ0ದು ಮನ ಕೊರಗುತಿತ್ತು 
ಅ0ತು ಇ0ತು ಸಿನಿಮಾ ಮುಗಿಯಿತು 
ಮರುಕ್ಷಣವೇ ಮನೆಗೆ ಮರಳಿದ್ದಾಯಿತು 
ನೋಡಿದಾಗ ಬ0ತು ಹೋದ ಉಸಿರು 
ಜೋಕಾಲಿಯಲ್ಲಿ ಕುಳಿತ್ತಿದ್ದರು ನನ್ನವರು 
ನೋಡಿ ನನ್ನೆಡೆ ಮುಗುಳ್ನಗೆ ಬೀರಿದರು 
ಹೆದರಬೇಡ ನಾನಿದ್ದೇನೆ ಅ0ದರು 
ಬಟ್ಟೆ ಹಪ್ಪಳ ಒಳಗೆ ತ0ದಿದ್ದಾಗಿತ್ತು 
ಕಾಫಿ ತಿ0ಡಿ ಕೂಡ ರೆಡಿಯಾಗಿತ್ತು 
ಮನಸ್ಸಲ್ಲೇ ಧನ್ಯವಾದ ಅರ್ಪಿಸಿದೆ ದೇವರಿಗೆ 
ಪತಿಯ ಬಗ್ಗೆ ಹೆಮ್ಮೆಯಾಯಿತು ಒಳಗೊಳಗೆ 
ಪ್ರೀತಿ ಕಾಳಜಿ ಎನ್ನುವುದು ಆಡಿ ತೋರಿಸುವುದರಲ್ಲಿಲ್ಲ 
ಸಮಯ ಬ0ದಾಗ ಮಾಡಿ ತೋರಿಸುವುದರಲ್ಲಿದೆ 
ಎ0ದು ಮನವರಿಕೆ ಆಯಿತು ಆ ಕ್ಷಣ
ಅದರ0ತೆ ನಡೆಯುವೆ ಎ0ದುಕೊ0ಡೆ ಮರುಕ್ಷಣ

                                      - ರೇವಿನಾ       

No comments:

Post a Comment