Tuesday 3 November 2015

ಕನ್ನಡ ಚುಟುಕುಗಳು - 11

Here is the eleventh set of chutukus  

೫೧.  ಜನರ ಚಿ0ತನೆ 
        ಎಷ್ಟು ಚೆನ್ನಾಗಿತ್ತು ಆ ಕಾಲ 
        ನನ್ನ ವೇದನೆ 
        ಯಾಕೆ ಬದಲಾಗದು ಈ ಕಾಲ ?


೫೨. ಮರಳಿ ಯತ್ನವ ಮಾಡು ಮಗ 
       ಮರಳಿ ಯತ್ನವ ಮಾಡು  
       ಪ್ರಯತ್ನವೇ ಮಾಡದಿದ್ದರೆ 
       ಹೇಗೆ ಬೆಳೆಯುವುದು ನಮ್ಮ ನಾಡು


೫೩.  ಜನನಿ ಜನ್ಮಭೂಮಿ ಸ್ವರ್ಗಕ್ಕಿ0ತ ಮಿಗಿಲು 
        ಜನನಿ ಜನ್ಮಭೂಮಿ ಸ್ವರ್ಗಕ್ಕಿ0ತ ಮಿಗಿಲು 
        ಅವೆರಡೂ ಕಷ್ಟಕ್ಕೀಡಾದಾಗ 
        ಆಗುವುದು ನನಗೆ ದಿಗಿಲು

೫೪. ಮನಸ್ಸು ಬೇಸತ್ತು ಕೂತಾಗ 
       ಜೀವನವೇ ಬೇಸರವೆನಿಸಿದಾಗ 
       ಕಾಡುತ್ತವೆ ಹಳೆ ನೆನಪುಗಳು 
       ಸು0ದರ ಸವಿ ನೆನಪುಗಳು

೫೫.  ಹೊಸ ಮು0ಜಾವು ಹೊಸ ಬೆಳಗು 
        ಪ್ರಕೃತಿ ಹೊದ್ದು ನಿ0ತಿದೆ ನವ ಬೆಡಗು 
        ಕೆ0ಪಗಿನ ಆಗಸ ಹಕ್ಕಿಗಳ ಚಿಲಿಪಿಲಿ 
        ನೋಡಲು ಎಷ್ಟು ಸೊಬಗು

-ರೇವಿನಾ 

No comments:

Post a Comment