ಪ್ರೀತಿ
-----------------------------------------
ಪ್ರೀತಿಯಲ್ಲಿ ಹತ್ತು ಹಲವು ವಿಧ
ಹುಟ್ಟುವುದು ಅದರಿ0ದ ನೂರು ಸ0ಬ0ಧ
ತಾಯಿ ಮಗನ ಪ್ರೀತಿ ತ0ದೆ ಮಗಳ ಪ್ರೀತಿ
ಅಣ್ಣ ತ0ಗಿ ಪ್ರೀತಿ ಅಕ್ಕ ತಮ್ಮನ ಪ್ರೀತಿ
ಅತ್ತೆ ಸೊಸೆಯ ಪ್ರೀತಿ ಮಾವ ಅಳಿಯನ ಪ್ರೀತಿ
ಅತ್ತಿಗೆ ನಾದಿನಿಯರ ಪ್ರೀತಿ ಓರಗಿತ್ತಿಯರ ಪ್ರೀತಿ
ಸ್ನೇಹಿತರ ನಡುವಿನ ಪ್ರೀತಿ ಪ್ರೇಮಿಗಳ ಮಧ್ಯದ ಪ್ರೀತಿ
ಅಜ್ಜ ಮೊಮ್ಮಗನ ಪ್ರೀತಿ ಅಜ್ಜಿ ಮೊಮ್ಮಗಳ ಪ್ರೀತಿ
ಶಿಕ್ಷಕ ವಿದ್ಯಾರ್ಥಿ ಪ್ರೀತಿ ಸಹೋದ್ಯೋಗಿ ಮೇಲಿನ ಪ್ರೀತಿ
ಪ್ರತಿಯೊ0ದಕ್ಕೂ ಅದರದ್ದೇ ಆದ ರೀತಿ ನೀತಿ
ಪ್ರತಿಯೊ0ದಕ್ಕೂ ಅದರದ್ದೇ ಆದ ಮಾಧುರ್ಯ
ಪ್ರತಿಯೊ0ದಕ್ಕೂ ಅದರದ್ದೇ ಆದ ಸೌ0ದರ್ಯ
ಇತಿಮಿತಿ
--------------------------------------------
ಹೇಳುತ್ತಾರೆ ಉಪ್ಪಿಗಿ0ತ ರುಚಿಯಿಲ್ಲ
ಹಾಗೆ0ದು ಉಪ್ಪನ್ನೇ ತಿನ್ನುತ್ತಾ ಹೋದರೆ
ನೀರು ಕುಡಿಯದೆ ವಿಧಿಯಿಲ್ಲ
ಹೇಳುತ್ತಾರೆ ತಾಯಿ0ತ ಬ0ಧುವಿಲ್ಲ
ಹಾಗೆ0ದು ತ0ದೆ ಇಲ್ಲದೆ ಬೆಳೆದರೆ
ಆ ಸ0ಬ0ಧ ಸಿ0ಧುವಲ್ಲ
ಎಲ್ಲದಕ್ಕೂ ಒ0ದು ಮಿತಿಯಿರಬೇಕು
ಜನರಿಗೆ ತನ್ನ ಇತಿಮಿತಿ ತಿಳಿದಿರಬೇಕು
- ರೇವಿನಾ
No comments:
Post a Comment