Tuesday 3 November 2015

ಕನ್ನಡ ಕವನ - ಭಾಗ 8 - ನಗು ೧ & ನಗು ೨ !!!!!!

Here is the eight set of ಕನ್ನಡ poems . 

  ನಗು ೧

೧೪. ಮುಗುಳು ನಗು ಅಟ್ಟಹಾಸದ ನಗು 
       ಸ0ತಸದ ನಗು ಸ0ಕಟದ ನಗು 
      ಸುಖದ ನಗು ದು:ಖದ ನಗು  
       ಸ್ನೇಹದ ನಗು ಸೇಡಿನ ನಗು
       ಗೆಲುವಿನ ನಗು ಹತಾಶೆಯ ನಗು
       ಮುಗ್ಧ ನಗು ಕುಹಕದ  ನಗು
       ಸ0ತೃಪ್ತಿಯ ನಗು ಅತೃಪ್ತಿಯ ನಗು
       ಈ ನಗುವಿನಲ್ಲಿ ಎಷ್ಟು ಬಗೆ
       ಅನಿಸುತ್ತದೆ ಕೆಲವೊಮ್ಮೆ ಯಾಕೆ ಹೀಗೆ?
       ಸಾಕಾಗುವುದಿಲ್ಲವೇ ಮುಖದಲ್ಲಿ ಒ0ದು ನಗು
       ಎಲ್ಲರ ಮನಸ್ಸನ್ನು ಗೆಲ್ಲಬಲ್ಲ ಸಿಹಿನಗು
    

ನಗು ೨

                       
೧೫. ಹೆಚ್ಚುವುದು ಮುಖದ ಸೌ0ದರ್ಯ ಇದರಿ0ದ
       ಒ0ದೇ ಒ0ದು ಮುಗುಳ್ನಗುವಿನಿ0ದ
       ಮನಸ್ಸು ತಿಳಿಯಾಗುವುದು ಇದರಿ0ದ
       ಹೊಟ್ಟೆ ನೋವಾಗುವವರೆಗೆ ನಗುವುದರಿ0ದ
       ಯವ್ವನ ಮರಳುವುದು ಇದರಿ0ದ
       ಮುಖದ ಮೇಲಿನ ಮಾಸದ ನಗುವಿನಿ0ದ
       ಅಪರಿಚಿತರು ಸ್ನೇಹಿತರು ಆಗುವರು ಇದರಿ0ದ
       ಒ0ದೇ ಒ0ದು ಪರಿಚಯದ ನಗುವಿನಿ0ದ
       ವೈರಿಗಳ ಮನಸ್ಸನ್ನೂ ಗೆಲ್ಲಬಹುದು ಇದರಿ0ದ
       ಒ0ದೇ ಒ0ದು ಸಿಹಿ ನಗುವಿನಿ0ದ
       ನಗುವು ಮುಖದ ಮೇಲಿನ ಒ0ದು ಆಭರಣ
       ನಗಲೂ ಬೇಕೇ ಒ0ದು ಕಾರಣ ?
       ಮನ:ಪೂರ್ವಕವಾಗಿ ನಗುವುದರಲ್ಲಿದೆ ಜಾಣತನ
       ಅದರಲ್ಲೂ ಯಾಕೆ ತೋರಿಸುತ್ತೀರ ಜಿಪುಣತನ
                       
   - ರೇವಿನಾ

No comments:

Post a Comment