Tuesday, 3 November 2015

ಕನ್ನಡ ಚುಟುಕುಗಳು - 6

Here is the sixth set of chutukus. 

೨೬. ಆಗಿಯೇ ಇರಬಹುದು ನೀವು ಚಿನ್ನದ ಗಣಿ 
       ಆಗಿಯೇ ಇರಬಹುದು ನೀವು ಚಿನ್ನದ ಗಣಿ 
       ಜನರು ಮಾಡುವುದನ್ನು ಬಿಡುವುದಿಲ್ಲ 
       ನಿಮ್ಮ ಮೇಲೆ ಟೀಕೆ ಟಿಪ್ಪಣಿ

೨೭. ತಲೆಗೆ ಹೋಗುವ ಪಾಠ 
       ನಾಲಗೆಗೆ ರುಚಿಸುವ ಊಟ 
       ಕಣ್ಣಿಗೆ ತ0ಪನ್ನು ನೀಡುವ ತೋಟ 
       ಅದರಲ್ಲಿ ತಿ0ದದ್ದು ಜೀರ್ಣಿಸಲು ಸಣ್ಣ ಓಟ 
       ಇಲ್ಲದಿರಲು ನೆ0ಟರ ಕಾಟ 
       ಸ್ವರ್ಗಕ್ಕೆ ಕಿಚ್ಚು ಹಚ್ಚೆ0ದ ಸರ್ವಜ್ನ

೨೮.  ಎಲ್ಲರೂ ಮಾಡುವುದು ಹೊಟ್ಟೆಗಾಗಿ 
        ಎಲ್ಲರೂ ಮಾಡುವುದು ಹೊಟ್ಟೆಗಾಗಿ 
        ಆದರೆ ನಾನು ಓಡುತ್ತೇನೆ 
        ಬ0ದ ಹೊಟ್ಟೆ ಕರಗಿಸುವುದಕ್ಕಾಗಿ

೨೯.  ಹೆ0ಡತಿ ಮಾಡಿದ ಪಾಕ 
        ಹೆ0ಡತಿ ಮಾಡಿದ ಪಾಕ 
        ಸರಿಯಿಲ್ಲ ಎ0ದರೆ 
        ಆಗುವುದು ಜೀವನ ನರಕ

೩೦.  ಹಿ0ದೆ ಹೇಳುತಿದ್ದರು 
        ಎಲ್ಲದಕ್ಕೂ ಗಾದೆ 
        ಈಗ ತೆಗೆಯುತ್ತಾರೆ 
        ಎಲ್ಲದಕ್ಕೂ ತಗಾದೆ

- ರೇವಿನಾ 

No comments:

Post a Comment