Tuesday, 17 November 2015

ಕನ್ನಡ ಚುಟುಕುಗಳು - 15


೭೧.  ಒಮ್ಮೆ ಹೊಳೆಯಿತು ನನ್ನ ತಲೆಗೆ 
        ಹೀಗೆ ಮಳೆಯೇ ಇಲ್ಲವಾದರೆ ಕೊನೆಗೆ 
        ಯಾರೂ ಬೆ0ಕಿಯೇ ಹಚ್ಚುವುದಿಲ್ಲ ಒಲೆಗೆ 
        ಇಡಲು ನೀರೇ ಇರುವುದಿಲ್ಲ ಸಾರಿಗೆ 
       😞😞😞😞😞😞😞😞

೭೨.  ಕುಹೂ ಕುಹೂ ಎ0ದಿತು ಕೋಗಿಲೆ 
        ಕೇಳಿದೆ ನಾನೂ ಜೊತೆಗೆ ಹಾಡಲೆ? 
        ಆಯಿತು ಹಾಡು ಎ0ದಿತು ಕೂಡಲೆ 
        ಶುರು ಮಾಡಿದೆ ನನ್ನ ರಾಗಮಾಲೆ 
        ಕಿಸಕ್ ಎ0ದು ನಕ್ಕು ಹೇಳಿತು ಒಮ್ಮೆಲೆ 
        ಹೋಗಿ ಸೇರು ಒಳ್ಳೆಯ ಸ0ಗೀತ ಶಾಲೆ 
      😜😜😜😜😜😜😜😜

೭೩.  ಕಣ್ಣೀರ ಧಾರೆ ಇದೇಕೆ ಇದೇಕೆ ?
        ಕಣ್ಣೀರು ಒರೆಸಲು ಕರವಸ್ತ್ರ ಬೇಕೆ ? 
        ಒ0ದೇ ಸಾಕೆ ಅಥವಾ ಇನ್ನೂ ಬೇಕೆ ? 
       😝😝😝😝😝😝😝😝

೭೪. ನಿನ್ನೊಲುಮೆ ನಮಗಿರಲಿ ತ0ದೆ 
       ಯಾಕೆ ಇಣುಕಿ ನೋಡುವೆ ಪರದೆ ಹಿ0ದೆ 
       ಒಮ್ಮೆ ಧರೆಗೆ ಬ0ದು ನೋಡಬಾರದೆ 
       ನಿನ್ನ ಭಕ್ತರ ಮೊರೆಯನ್ನು ಕೇಳಬಾರದೆ 
      🙏🙏🙏🙏🙏🙏🙏🙏

೭೫. ಹಿ0ದೆ ಓದುತ್ತಿದ್ದೆ ಪತ್ತೆದಾರಿ ಕಾದ0ಬರಿ 
       ಈಗ ಮಾಡುತ್ತೇನೆ ನಾನೇ ಪತ್ತೆದಾರಿ 
       ಪತ್ತೆ ಹಚ್ಚುತ್ತೇನೆ ಇಲಿ ಹೋದ ದಾರಿ 
       ಹುಡುಕಿ ಕೊಲ್ಲುತ್ತೇನೆ ಪ್ರತೀ ಬಾರಿ 
     🔨🔨🔨🔨🔨🔨🔨🔨🔨

- ರೇವಿನಾ 

No comments:

Post a Comment