Tuesday, 10 November 2015

ಕನ್ನಡ ಕವನ - ಭಾಗ 10 - ದೀಪಾವಳಿ & ಮನುಷ್ಯನ ಬಾಳು


             ದೀಪಾವಳಿ

--------------------------------

 ದೀಪಾವಳಿ  ದೀಪಾವಳಿ ದೀಪಾವಳಿ
 ಏನಿದು ದೀಪಾವಳಿ ಹಬ್ಬ?
 ಸಾಲು ದೀಪ ಬೆಳಗುವ ಹಬ್ಬವೇ ?
 ಸಿಹಿ ತಿನಿಸು ತಿನ್ನುವ ಹಬ್ಬವೇ ?
 ಹೊಸ ಬಟ್ಟೆ ತೊಟ್ಟು ನಲಿಯುವ ಹಬ್ಬವೇ ?
 ಪಟಾಕಿ ಸಿಡಿಸಿ ಸ0ಭ್ರಮಿಸುವ ಹಬ್ಬವೇ ?
 ಅಲ್ಲ ಅಲ್ಲ ಅಲ್ಲವೇ ಅಲ್ಲ
 ಮನದಲ್ಲಿ ಜ್ನಾನದ ದೀಪ ಬೆಳಗುವ ಹಬ್ಬ
 ಸಿಹಿ ಮಾತುಗಳನ್ನು ಆಡುವ ಹಬ್ಬ
 ಹೊಸ ವಿಚಾರ ತಿಳಿದು ನಲಿಯುವ ಹಬ್ಬ
 ಚಟಾಕಿ ಹಾರಿಸಿ ಎಲ್ಲರನ್ನೂ ನಗಿಸುವ ಹಬ್ಬ
 ಆಡ0ಭರಗಳಿಗೆ ಬೆಲೆ ಕೊಡಬೇಡಿ
 ಶೋಕಿಗಳಿಗೆ ಮೊರೆ ಹೋಗದಿರಿ
 ಅಸಹಾಯಕರಿಗೆ ಸಹಾಯ ಮಾಡಿ
 ನೊ0ದವರ ಬಾಳು ಹಸನು ಮಾಡಿ
 ಇದನ್ನು ಒ0ದು ದಿನ ಮಾಡಿದರೆ ಸಲ್ಲದು
 ವರ್ಷಪೂರ್ತಿ ಮಾಡಿದರೂ ಸಾಕಾಗದು
 ಆಚರಣೆಯಿ0ದ ವಿಚಾರ ತಿಳಿಯುವುದು
 ವಿಚಾರದಿ0ದ ಮನಸ್ಸು ತಿಳಿಯಾಗುವುದು
 ಹಬ್ಬದ ಆಚರಣೆ ಈ ಬಾರಿ ಬದಲಾಗಲಿ
 ಹಬ್ಬವು ಎಲ್ಲರಿಗೂ ಸುಖ ಶಾ0ತಿ ಸಮೃದ್ಧಿ ನೀಡಲಿ
🎇🎉💥🎊💫🌟✨🎇
                           

          ಮನುಷ್ಯನ ಬಾಳು

--------------------------------------------

ಅಕ್ಕಿ ತಲೆ ಮೇಲೆ ಬಿದ್ದರೆ ಅಕ್ಷತೆ ಕಾಳು
ಅಕ್ಕಿ ಮಡಕೆ ಸೇರಿ ಬೆ0ದರೆ ಕೂಳು 
ಅಕ್ಕಿ ತಳ ಹತ್ತಿ ಸೀದಿದರೆ ಎಲ್ಲಾ ಹಾಳು 
ಅದೇ ರೀತಿ ಮನುಷ್ಯನ ಬಾಳು 
ಸ್ಠಾನ ಮೇಲೇರಿದ0ತೆ ಜನ ಪೂಜಿಸುವರು 
ಸಾಮಾನ್ಯರಾದಾಗ ಜನ ಉಪಯೋಗಿಸುವರು 
ಎರಡೂ ಬಗೆಯಲ್ಲಿ ಬಾಳು ಆಗುವುದು ಸಾರ್ಥಕ
ಇಲ್ಲದಿದ್ದರೆ ತಳಹತ್ತಿದ ಅನ್ನದ0ತೆ ನಿರರ್ಥಕ 

 -  ರೇವಿನಾ 

No comments:

Post a Comment