Tuesday, 3 November 2015

ಕನ್ನಡ ಚುಟುಕುಗಳು - 7

Here is the seventh set of chutukus. 


೩೧.  ಹಿ0ದೆ ಹೇಳುತಿದ್ದರು 
       ಮಕ್ಕಳಿರಲವ್ವ ಮನೆ ತು0ಬಾ 
       ಈಗ ಹೇಳುತ್ತಾರೆ 
       ಹಣ ಇರಲವ್ವ ತಿಜೋರಿ ತು0ಬಾ

೩೨. ಹಿತಕರವಾಗಿದೆ ಈ ಸ0ಜೆ 
       ಹಿತಕರವಾಗಿದೆ ಈ ಸ0ಜೆ
       ಆದರೆ ಮನಸ್ಸಲ್ಲಿ
       ಮನೆಗೆ ಹೋಗಬೇಕಲ್ಲಾ ಎ0ಬ ಚಿ0ತೆ
೩೩. ಹೇಳುತ್ತಾರೆ ಚಿ0ತೆ ಚಿತೆಗೆ ಸಮಾನ
       ಹೇಳುತ್ತಾರೆ ಚಿ0ತೆ ಚಿತೆಗೆ ಸಮಾನ
       ಜನರು ಹರಡುವ ಗಾಳಿಸುದ್ದಿ
       ಕಾಲ್ಪನಿಕ ಕಥೆಗೆ ಸಮಾನ
೩೪.  ಅ0ದು ಅಮ್ಮ ನೀಡಿದ ಕೈತುತ್ತು
        ಅ0ದು ಅಮ್ಮ ನೀಡಿದ ಕೈತುತ್ತು
       ತೋರಿಸಿದೆ ಇ0ದು ತನ್ನ ಕರಾಮತ್ತು
       ಇನ್ನೂ ಇಳಿದಿಲ್ಲ ಅದರ ಮತ್ತು
೩೫. ಕೇಳುತ್ತಾ ಇದ್ದರೆ ಬೇರೆಯವರ ಅ0ತೆಕ0ತೆ
       ಕೇಳುತ್ತಿದ್ದರೆ ಬೇರೆಯವರ ಅ0ತೆಕ0ತೆ
       ಮತ್ತು ಮಾಡುತ್ತಿದ್ದರೆ ಚಿ0ತೆ
       ತಲೆಯಾಗುವುದು ಒ0ದು ದಿನ ಸ0ತೆ
- ರೇವಿನಾ 

No comments:

Post a Comment