Tuesday, 17 November 2015

ಕನ್ನಡ ಚುಟುಕುಗಳು - 16


೭೬.  ಒಮ್ಮೆ ಚುಟುಕು ಬರೆಯುವ ಅನಿಸಿತು 
        ಮಾತೊ0ದು ಮನಸ್ಸನ್ನು ಕುಟುಕಿತು 
        ಬರೆವ ತಾಕತ್ತಿದೆಯಾ? ಮನ ಕೆಣಕಿತು 
        ಓದುವರ್ಯಾರು ಅದನ್ನು ಎ0ದು ನಕ್ಕಿತು 
      😜😜😜😜😜😜😜😜

೭೭. ಹೇಳಿದ ಪತ್ನಿಪೀಡಕ ಪತಿ 
       ನಿನ್ನದಾಯ್ತು ಇನ್ನು ಅತಿ 
       ಹೀಗೇ ಮು0ದುವರಿದರೆ ನಿನ್ನ ಕೃತಿ 
       ಹಿ0ದಿರುಗಿಸುವೆ ವಿವಾಹ ದಾಖಲೆಯ ಪ್ರತಿ 
      😝😝😝😝😝😝😝

೭೮.  ಸ0ಸಾರದಲ್ಲಿ ಇರಬೇಕು ಸಾರ 
        ಸ0ಸಾರದಲ್ಲಿ ಇರಬೇಕು ಸಾರ 
        ಸಾರಿನಲ್ಲಿ ಇರಬೇಕು ಖಾರ 
      😛😛😛😛😛😛😛

೭೯. ಓ ಬಾಲ್ಯವೇ ನೀ ಮರಳಿ ಬಾ 
       ನನ್ನೆಡೆಗೊಮ್ಮೆ ಹೊರಳಿ ಬಾ 
       ಜೀವನದ ಅರ್ಥ ತಿಳಿಯುವುದರಲ್ಲಿ 
       ನೀನು ಕಳೆದು ಹೋದೆ 
       ಮಾಡಿದ ತಪ್ಪು ಸರಿ ಮಾಡಲಾಗದೆ 
       ನಾ ಉಳಿದು ಹೋದೆ


೮೦.  ದೇವರೇ ಮಕ್ಕಳು ಅನ್ನುತ್ತಾರೆ ಕೆಲವರು 
        ದೇವರಿಗೂ ಆಲಿಸದು ನಮ್ಮ  ಮೊರೆ 
        ಮಕ್ಕಳಿಗೆ ಕೂಗಿದರೂ ಕೇಳಿಸದು ನಮ್ಮ ಕರೆ 
       😝😝😝😝😝😝


 -ರೇವಿನಾ

No comments:

Post a Comment