Tuesday, 17 November 2015

ಕನ್ನಡ ಚುಟುಕುಗಳು - 14


೬೬. ಧೋ ಎ0ದು ಸುರಿಯುವ ಮಳೆ 
       ನೀರನ್ನೇ ಹೊದ್ದು ನಿ0ತ ಇಳೆ 
       ತ0ಪಗಿನ ಆಹ್ಲಾದಕರ ವಾತಾವರಣ 
       ಬೇಕೇ ಈರುಳ್ಳಿ ಬಜೆ ತಿನ್ನಲು ಕಾರಣ 
       ಜೊತೆಯಲ್ಲಿ ಇರಲು ಒ0ದು ಕಪ್ ಚಹಾ 
       ಬಜೆ ತಿನ್ನುವುದು ಏನು ಮಹಾ??? 
     😀😀😀😀😀😀😀😀

೬೭. ಒ0ದೇ ಸವನೆ ಸುರಿಯಲು ಜಲಧಾರೆ 
       ಆಕಾಶದಲ್ಲಿ ಕಾಣಲು ಚ0ದ್ರ ತಾರೆ 
       ಚ0ದ್ರನ ಮಧ್ಯೆ ಕಾಣಲು ನಿನ್ನ ಮೋರೆ 
       ಅನಿಸಿತು ಮರುಕ್ಷಣ ಜೊತೆ ನೀನಿರೆ

೬೮. ಬರೆಯುತ್ತಾ ಇದ್ದರೆ ಹೀಗೆ ಕವನ ಗಿವನ 
       ಮಾಡಲೂ ಬಹುದು ಜನರು ಸನ್ಮಾನ 
       ಕೊಡಲೂ ಬಹುದು ಬಿರುದು ಪ್ರಶಸ್ತಿ 
       ಆದ್ರೆ ಸ್ನೇಹಿತರ ಪ್ರೋತ್ಸಾಹವೇ ನಿಜವಾದ ಆಸ್ತಿ 
     🏆🏆🏆🏆🏆🏆🏆🏆

೬೯. ಮಳೆ ಸುರಿಯುತ್ತಿತ್ತು ಒ0ದೇ ಸವನೆ 
       ಹತ್ತಿಕ್ಕಲಾರದೆ ಹೋದೆ ನನ್ನ ಭಾವನೆ 
       ಮೂಡಿತು ಮನದಲ್ಲಿ ಒ0ದು ಕಲ್ಪನೆ 
       ಆಗಲಾರದು ಅನ್ನಿಸಿ ಆದೆ ಸುಮ್ಮನೆ 
     😝😝😝😝😝😝😝

೭೦. ನೂರೊ0ದು ನೆನಪು ಎದೆಯಾಳದಿ0ದ 
       ಹಾಡಾಗಿ ಬ0ತು ಆನ0ದದಿ0ದ 
       ತೆಗೆದೆ ಆಗ ಸಿಕ್ಕಿದ ಮೀನನ್ನು ಗಾಳದಿ0ದ 
       ಸಿಕ್ಕಿತ್ತು ಗಾಳಕ್ಕೆ ನದಿಯ ಆಳದಿ0ದ 
      🐠🐟🐬🐳🐋🐠🐟🐳🐬

- ರೇವಿನಾ 

No comments:

Post a Comment