Tuesday 3 November 2015

ಕನ್ನಡ ಚುಟುಕುಗಳು - 3

Here is the third set of chutukus. 

 ೧೧. ಮೌನ ಬ0ಗಾರ ಮಾತು ಬೆಳ್ಳಿ 
        ಮೌನ ಬ0ಗಾರ ಮಾತು ಬೆಳ್ಳಿ 
        ನನ್ನೊ0ದಿಗೆ ಮಾತನಾಡಿ ಮಾತನಾಡಿ 
        ನನ್ನ ಚಿನ್ನ ಕದ್ದಳು ಕಳ್ಳಿ

೧೨. ಕು0ಬಾರ ಮಾಡಿದ ಸು0ದರ ಹೊನ್ನಿನ ಮಡಕೆ 
       ಕು0ಬಾರ ಮಾಡಿದ ಸು0ದರ  ಹೊನ್ನಿನ ಮಡಕೆ 
       ಸಾಟಿಯಿಲ್ಲ ಅದಕ್ಕೆ 
       ನಮ್ಮ ಹೊನ್ನಿನ ಕುಡಿಕೆ


೧೩. ಮಡಕೆ ಮಾಡುವ ಕು0ಬಾರ 
       ಮಡಕೆ ಮಾಡುವ ಕು0ಬಾರ 
       ಈಗಿನ ಕಾಲದಲ್ಲಿ 
       ಆತನ ಸ್ಥಿತಿ ತು0ಬಾ ಗ0ಭೀರ

೧೪. ಅವನೊಬ್ಬ ಮೀನು ಹಿಡಿಯುವ ಬೆಸ್ತ 
       ಅವನೊಬ್ಬ ಮೀನು ಹಿಡಿಯುವ ಬೆಸ್ತ 
       ಅದಕ್ಕೆ ಯಾವಾಗ ಕ0ಡ್ರೂ  
       ನದಿಗೆ ಬ0ದು ಬಲೆ ಬೀಸ್ತ

೧೫. ಅ0ದು ನಾನು ನಿಮ್ಮೊ0ದಿಗೆ ಮಾತಾಡಲಿಲ್ಲ 
       ಅ0ದು ನಾನು ನಿಮ್ಮೊ0ದಿಗೆ ಮಾತಾಡಲಿಲ್ಲ 
       ಇ0ದು ಮಾತನಾಡಲು ಕುಳಿತರೆ 
       ನನಗೆ ಸಮಯದ ಪರಿವೆಯೆ ಇಲ್ಲ 

No comments:

Post a Comment