Monday 9 November 2015

ಕನ್ನಡ ಚುಟುಕುಗಳು 13

೬೧. ಬ0ತು ಹಬ್ಬಗಳ ರಾಜ ದೀಪಾವಳಿ 
       ಉಳ್ಳವರು ಖರೀದಿಸುವರು   ಪಟಾಕಿ ಜವುಳಿ 
       ಬಡವರ ಮನೆ ಮನಸ್ಸು ಎರಡೂ ಖಾಲಿ ಖಾಲಿ

೬೨. ನೀರು ಬರುವುದು ಅದೇ ಕಣ್ಣಿ0ದ 
       ಸ0ತೋಷದಿ0ದ ಅತ್ತರೆ ಅದು ಪನ್ನೀರು 
       ದು:ಖದಿ0ದ  ಅತ್ತರೆ ಅದು ಕಣ್ಣೀರು

೬೩. ಏನು ಬೇಕೆ0ದು ಕೇಳಿದ ಗ0ಡ   ದೀಪಾವಳಿಗೆ 
       ಮುತ್ತಿನ ಹಾರ ಎ0ದು ಹೇಳಿದಳು ಹೆ0ಡತಿ  ಮೆಲ್ಲಗೆ 
       ಮುಖದ ಮೇಲೆ ಮುತ್ತಿನ ಮಳೆ ಸುರಿಸಿದ ಒಮ್ಮೆಗೆ 
       ಸಾಕಾ ಇನ್ನೂ ಬೇಕಾ? ಎ0ದ ತಣ್ಣಗೆ 
     😜😜😜😜😜😜😜😜

೬೪.  ಹಬ್ಬದ0ದು ಮಾಡುವೆವು ಸಿಹಿತಿನಿಸು 
        ಎಲ್ಲರೂ ತಿ0ದು ಹೊಗಳಿದರೆ ಸೊಗಸು 
        ಇಲ್ಲದಿದ್ದರೆ ಬರುವುದು ಅವರ ಮೇಲೆ ಮುನಿಸು 
      😝😝😝😝😝😝😝😝

೬೫. ಹಿ0ದೆ ಹಬ್ಬಕ್ಕಾಗಿ ಮಾಡುತ್ತಿದ್ದರು ಸಾಲ 
        ಮಾಡುತ್ತಿದ್ದರು ಹಬ್ಬ ಆಚರಿಸಲು
        ಕರಿಗಡಬು ಸಿಹಿ ಹಾಕಿ ಕಾಯಿ ಬೆಲ್ಲ 
        ಆದರೀಗ ಬದಲಾಗಿದೆ ಕಾಲ 
        ಹಬ್ಬ ಮಾಡಲು ಸಮಯ ಬೇಕಲ್ಲಾ 
        ಹಬ್ಬದ0ದೇ ಕೆಲಸ ಮಾಡುವರು ತೀರಿಸಲು 
        ಐಷಾರಾಮಿ ವಸ್ತು ಕೊಳ್ಳಲು ಹಿ0ದೆ ಮಾಡಿದ ಸಾಲ

- ರೇವಿನಾ

No comments:

Post a Comment