Tuesday 3 November 2015

ಕನ್ನಡ ಕವನಗಳು - ಭಾಗ 1 - ತಾಯಿ & ಶುಭರಾತ್ರಿ !!!!!!

Hi friends .... started writing kannada poems also . Will post  2 poems in every post. Hope you all will like it. I posted first hindi poem about mother. Will do the same here also.  

ತಾಯಿ 


೧.  ನವಮಾಸ ತು0ಬಿ ಹೆತ್ತವಳು ತಾಯಿ 
       ಅತ್ತಾಗ ಎದೆಹಾಲು ಉಣಿಸಿದವಳು ತಾಯಿ
       ಹಸಿವೆ0ದಾಗ ಕೈತುತ್ತು ನೀಡಿದವಳು ತಾಯಿ
       ಬಿದ್ದಾಗ ಎತ್ತಿ ಸಮಾಧಾನ ಮಾಡಿದವಳು ತಾಯಿ
       ಸೋತಾಗ ಸ0ತೈಸಿದವಳು ತಾಯಿ
       ಜಯಗಳಿಸಿದಾಗ ಖುಷಿ ಪಟ್ಟವಳು ತಾಯಿ
       ಉತ್ತಮ ಗುಣನಡತೆ ಕಲಿಸಿದವಳು ತಾಯಿ
       ಜಗತ್ತನ್ನು ಎದುರಿಸಲು ಶಕ್ತಿ ನೀಡಿದವಳು ತಾಯಿ
       ತಾಯಿಗಿ0ತ ಉತ್ತಮವಾದ ಬ0ಧುವಿಲ್ಲ
       ಮಾತೃ ಋಣ ತೀರಿಸಲು ನೂರು ಜನ್ಮವೂ ಸಾಲುವುದಿಲ್ಲ

ಶುಭರಾತ್ರಿ 


೨, ಸುತ್ತಲೂ ಹರಡಿರುವ ಕತ್ತಲು
     ಮೇಲೆ ಚ0ದಿರನು ನಗುತಿರಲು
     ದೂರದಲ್ಲಿ ಉಗಿಬ0ಡಿ ಕೂಗಲು
     ಬಾವಲಿ ಸುತ್ತಮುತ್ತ ಹಾರಲು
     ತಾಯಿ ಜೋಗುಳ ಹಾಡಲು
     ಕ0ದ ಕಣ್ಮುಚ್ಚಿ ಮಲಗಲು
     ನೀವೂ ಚೆನ್ನಾಗಿ ನಿದ್ರಿಸಿ
     ಬೆಳಿಗ್ಗೆ ಎದ್ದು ನನ್ನನ್ನು ಎಬ್ಬಿಸಿ
     ಶುಭರಾತ್ರಿ ನಿಮಗಿದೋ ಸಿಹಿಗನಸು ಬೀಳಲಿ
     ಬೆಳಿಗ್ಗೆ ಎದ್ದಾಗ ಆ ಕನಸು ನನಸಾಗಲಿ

-ರೇವಿನಾ 

No comments:

Post a Comment