Tuesday 17 November 2015

ಕನ್ನಡ ಚುಟುಕುಗಳು - 18


೮೬. ಜ್ನಾನ ಬಾಳೆ ಹಣ್ಣಿನ0ತೆ
       ಸಿಪ್ಪೆ ಸುಲಿದು ಬಾಳೆಹಣ್ಣು ತಿನ್ನಬೇಕು
       ವಿಷಯ ಅರಿತು ಜ್ನಾನ ಅರಗಿಸಿಕೊಳ್ಳಬೇಕು
೮೭. ಗಾಳಿ ಒ0ದೇ ರೂಪ ಎರಡು
       ಹಿತವಾಗಿ ಬೀಸಿದಾಗ ತ0ಗಾಳಿ
       ಲೋಕ ಆಗ ಮೆಚ್ಚುವುದು
       ಜೋರಾಗಿ ಬೀಸಿದಾಗ ಬಿರುಗಾಳಿ
       ಲೋಕ ಆಗ ಬೆಚ್ಚುವುದು
       ನಾವಾಡುವ ಮಾತು ಕೂಡ ಗಾಳಿಯ0ತೆ
       ಹಿತವಾಗಿದ್ದರೆ ಲೋಕ ಮೆಚ್ಚುವುದು
       ಜೋರಾಗಿದ್ದರೆ ಲೋಕ ಬೆಚ್ಚುವುದು
೮೮. ನಾಯಿ ಬಾಲ ಡೊ0ಕು
       ಜನರ ಮಾತು ಕೊ0ಕು
       ನಿಲ್ಲಿಸುವೆ ಬರೆಯುವುದನ್ನು
       ಖಾಲಿ ಆಯ್ತು ಪೆನ್ನಿನ ಇ0ಕು
      😛😛😛😛😛😛😛
೮೯. ಅಕಾಲಿಕ ಮಳೆ ಬಿರುಗಾಳಿ 
       ಎಲ್ಲೆಡೆ ಅನಾಹುತಗಳ ಸುಳಿ 
       ಏನಿದರ ನಿಗೂಢ ಅರ್ಥ? 
       ಪ್ರಕೃತಿ ಏನು ನೀಡುತ್ತಿದೆ ಸುಳಿವು ?
       ನನ್ನ ನಾಶ ಮಾಡಲು ಹೊರಟಿರಾ? 
       ನಿಮಗಿಲ್ಲ ಇನ್ನು ಉಳಿವು

೯೦. ನೀ ಮನುಜನಾಗಿ ಹುಟ್ಟಿರುವೆ 
       ಎಲ್ಲದಕ್ಕೂ ನೀ ನೆಪಮಾತ್ರ 
       ವಿಧಿಯೇ ಎಲ್ಲವನ್ನೂ ನಿರ್ಣಯಿಸಿದೆ 
       ಅದೇ ನಿರ್ಧರಿಸಿದೆ ನಿನ್ನ ಗೋತ್ರ

 -ರೇವಿನಾ

No comments:

Post a Comment