Tuesday, 3 November 2015

ಕನ್ನಡ ಚುಟುಕುಗಳು - 9

Here is the ninth set of chutukus. 

೪೧.  ಜೀವನದಲ್ಲಿ ಬೆ0ಕಿಯ ಬಲೆ 
        ಈ ಸ0ಬ0ಧಗಳೆ0ಬ ಸ0ಕೋಲೆ 
        ಬಾಳಲಿಕ್ಕೂ ಇಲ್ಲ ಬಿಡಿಸಲಿಕ್ಕೂ ಇಲ್ಲ 
        ಆಡಲಿಕ್ಕೂ ಇಲ್ಲ ಅನುಭವಿಸಲಿಕ್ಕೂ ಇಲ್ಲ

೪೨. ಆಗಿಯೇ ಇರು ನೀನು 
       ಆಚಾರಿ ಶೆಟ್ಟಿ ಅಡಿಗ 
       ಆದರೆ ಮರೆಯದಿರು ಎ0ದಿಗೂ 
       ಮೊದಲು ನೀನು ಕನ್ನಡಿಗ 
     😛😛😛😛😛😛

೪೩. ಬದುಕೆ0ಬುದು ಖಾಲಿ ಪುಸ್ತಕ 
       ನೀನೇ ಅದರ ಲೇಖಕ 
       ನಿಧಾನವಾಗಿ ಸು0ದರವಾಗಿ ಬರಿ 
       ಆಗುವುದು ಅದು ಉತ್ತಮ ಕಾದ0ಬರಿ

೪೪. ಹೇಳುತ್ತಾರೆ ತಾಳಿಭಾಗ್ಯ ಮಹಾಭಾಗ್ಯ 
       ಹೇಳುತ್ತಾರೆ ತಾಳಿಭಾಗ್ಯ ಮಹಾಭಾಗ್ಯ 
       ಆ ಭಾಗ್ಯ ಅನುಭವಿಸಲು  
       ಸಿಗಬೇಕು ವರ ಯೋಗ್ಯ


೪೫.  ಹುಟ್ಟಿದರೆ ವರುಷದೊಳಗೆ ಮಗು 
        ಹುಟ್ಟಿದರೆ ವರುಷದೊಳಗೆ ಮಗು 
        ಹೆಚ್ಹ್ಚುವುದು ಸ0ಸಾರದ ಸೊಬಗು

- ರೇವಿನಾ 

No comments:

Post a Comment