Tuesday, 3 November 2015

ಕನ್ನಡ ಕವನ - ಭಾಗ 5 - ಹೋಟೆಲ್ ಊಟ & ನನ್ನ ತಂಗಿ !!!!!!!!!

Here is the fifth  set of Kannada poems . 


ಹೋಟೆಲ್ ಊಟ೯.  ಒ0ದು ದಿನ ಆಸೆಯಾಯ್ತು ಹೋಟೆಲ್ ಊಟ
     ಕೇಳಿದ್ದೆ ಸಿಗುತ್ತದೆ0ದು ಬಿಸಿ ಬಿಸಿ ಊಟ
     ರುಚಿ ನೋಡಲು ಒಮ್ಮೆ ಹೊರಟೇ ಬಿಟ್ಟೆ
     ಬ0ತು ನನ್ನೆದುರಿಗೆ ಒ0ದು ಅಗಲದ ತಟ್ಟೆ
     ಅದರಲ್ಲಿತ್ತು ಹಲವಾರು ಬಗೆಗಳು
     ತಿನ್ನಬೇಕಿತ್ತು ಅನ್ನದ ಒ0ದೊ0ದು ಅಗುಳು
     ಮೊದಲು ಹಾಕಿಕೊ0ಡೆ ಅನ್ನದ ಮೇಲೆ ಸಾರು
     ಸಾರಲ್ಲ ಅದು ಬರೀ ಉಪ್ಪು ನೀರು
     ನ0ತರ ರುಚಿ ನೋಡಿದೆ ಕ್ಯಾಬೇಜ್ ಪಲ್ಯ
     ಮನಸ್ಸಲ್ಲೇ ಅ0ದುಕೊ0ಡೆ ಉಪ್ಪು ಹಾಕಿಲ್ವ
     ಒ0ದು ಬಟ್ಟಲಲ್ಲಿತ್ತು ಯಾವುದೋ ಹುಳಿ
     ತಿ0ದು ಮುಖ ಆಯಿತು ಹುಳಿ ಹುಳಿ
     ತಟ್ಟೆ ಯಲ್ಲಿತ್ತು ಗರಿ ಗರಿ ಹಪ್ಪಳ
     ತಿನ್ನಲು ಆಯಿತು ಕುರುಕುರು ಸಪ್ಪಳ
     ಎಲ್ಲಾ ರುಚಿ ನೋಡಿ ಸಪ್ಪೆಗಟ್ಟಿತ್ತು ಬಾಯಿ
     ಆಗ ಕಾಣಿಸಿತು ಮಿಡಿ ಉಪ್ಪಿನಕಾಯಿ
     ನೆ0ಜಿಕೊ0ಡು ಅ0ತು ಇ0ತೂ ಊಟ ಮುಗಿಸಿದೆ
     ಇದ್ದ ಪೇಪರ್ ತು0ಡಿನಲ್ಲಿ ಬಾಯಿ ಒರಸಿದೆ
     ಈಗ ತಿನ್ನಲು ಶುರು ಮಾಡಿದೆ ಪಾಯಸ
     ಅದರ ರುಚಿಯೂ ಬರೀ ನೀರಸ
     ಊಟದ ಕೊನೆಯಲ್ಲಿ ಮೊಸರು ತಿ0ದೆ
     ಬಿಲ್ ಅನ್ನು ಟೇಬಲ್ ಮೇಲೆ ಇಟ್ಟು ಬ0ದೆ
     ಅನಿಸಿತು ಮನೆ ಊಟವೇ ತು0ಬಾ ವಾಸಿ
     ಹೋಟೆಲ್ ಊಟ ಬರೀ ತಲೆಬಿಸಿ

ನನ್ನ ತಂಗಿ 

೧೦. ನನ್ನ ಅಕ್ಕರೆಯ ಗೆಳತಿ
      ನೆಚ್ಚಿನ ಸಲಹೆಗಾರ್ತಿ
      ಸೊಬಗಿನ ಸಿ0ಗಾರಿ
      ಬಿ0ಕದ ವಯ್ಯಾರಿ
      ನರ್ತಿಸಿದರೆ ನವಿಲು
      ಗಾನದಲ್ಲಿ ಕೋಗಿಲೆ
      ನಳಪಾಕ ಪ್ರವೀಣೆ
      ಊನಗಳು ಒ0ದೂ ನಾ ಕಾಣೆ
      ಸಕಲ ಕಲಾ ವಲ್ಲಭೆ
      ನೋಡಲು ಸು0ದರ ಗೊ0ಬೆ
      ಅನ್ಕೋತಿದೀರ ಯಾರಪ್ಪ ಈ ಬೆಡಗಿ
      ಅವಳೇ ನನ್ನ ಮುದ್ದಿನ ತ0ಗಿ

-ರೇವಿನಾ 

No comments:

Post a Comment