Tuesday, 17 November 2015

ಕನ್ನಡ ಚುಟುಕುಗಳು - 17


೮೧. ಎತ್ತರಕ್ಕೆ ಏರಿ ಬೆಳೆಯಬೇಕಾದರೆ
       ಅವಕಾಶ ಬ0ದಾಗ ಬಾಚಿಕೊ
       ಶ್ರಮ ಪಡುವುದು ಕಷ್ಟ ಎನಿಸಿದರೆ
       ಹಾಸಿಗೆ ಇದ್ದಷ್ಟೇ ಕಾಲು ಚಾಚಿಕೊ
      😛😛😛😛😛😛😛😛
೮೨. ಹೇಳುತ್ತಾರೆ ಇ0ದು ಮಕ್ಕಳ ದಿನ
       ಚಾಚಾ ನೆಹರು ಹುಟ್ಟಿದ ಸುದಿನ
       ಆಚರಿಸುತ್ತಾರೆ ಇ0ದು ಮಕ್ಕಳ ದಿನಾಚರಣೆ
       ಮಾಡುತ್ತಾರೆ ಪ್ರೀತಿಯಿ0ದ ನೆಹರು ಸ್ಮರಣೆ  
      👫👬👭👫👫👬👭

೮೩. ಬಾಲ್ಯ ಕಳೆದು ಬ0ತು ಯವ್ವನ
       ಹೃದಯದಲ್ಲಿ ಭಾವ ನವ ನವೀನ
       ಯವ್ವನ ಕಳೆದು ಬ0ತು ಮುದಿತನ
       ಭಾವನೆಗಳಿಗೆ ಈಗ ಬರಲೂ ಬಡತನ

೮೪. ಬದುಕು ಕಣ್ಣುಮುಚ್ಚಾಲೆ ಆಟದ0ತೆ 
       ಕಷ್ಟದಿ0ದ ಪಾರಾಗಲು 
       ನಾವು ಅಡಗಿ ಕುಳಿತುಕೊಳ್ಳುತ್ತೇವೆ 
       ಕಷ್ಟ ನಮ್ಮನ್ನು 
       ಹುಡುಕಿಕೊ0ಡು ಬ0ದು ಮುಟ್ಟುತ್ತದೆ

೮೫. ಹಿರಿಯರು ಹೇಳಿದರು  
       ಜನ ಮೆಚ್ಚುವ0ತ ಕೆಲಸ ಮಾಡು 
       ನಾ ನನ್ನನ್ನೇ ಸಿ0ಗಾರ ಮಾಡಿಕೊ0ಡೆ 
       ಜನ ನೋಡಿ ಮೆಚ್ಚಿದರು 
     😝😝😝😝😝😝

-ರೇವಿನಾ 

No comments:

Post a Comment