Saturday, 21 November 2015

ಕನ್ನಡ ಚುಟುಕುಗಳು - 21


101. ಹಿ0ದಿನ ಕಾಲದಲ್ಲಿ... 
        ಹೆಣ್ಣು ಸ0ಸಾರದ ಕಣ್ಣು 
        ಈಗಿನ ಕಾಲದಲ್ಲಿ...
        ಹೆಣ್ಣು ಸಸಾರದ ಹುಣ್ಣು 
       😔😔😔😔😔😔

102. ಯಾರಿಗೆ ಬೇಕು ಈ ರಾಜಕಾರಣ 

        ವಾದ ಯಾಕೆ ವಿನಾಕಾರಣ ?
        ಸುಮ್ಮನೆ ಒ0ದು ಕಾಲಹರಣ 
        ಎಲ್ಲರಲ್ಲೂ ಇರುತ್ತೆ ಗುಣ ಅವಗುಣ 
       😝😝😝😝😝😝😝😝😝

103. ತಲೆಗೆ ಬಳಿದ ಬಣ್ಣ 
        ಮೋಸದಿ0ದ ಮಾಡಿದ ಹಣ 
        ಲ0ಚ ಕೊಟ್ಟು ಪಡೆದ ಜ್ನಾನ 
        ಹೆಚ್ಚು ಕಾಲ ಬಾಳದು ಅಣ್ಣ

104. ಮಾತು ಆಡಿದರೆ ಹೋಯ್ತು 

        ಮುತ್ತು ಒಡೆದರೆ ಹೋಯ್ತು 
        ಮನಸ್ಸು ಮುರಿದರೆ ಹೋಯ್ತು 

105. ಹಿ೦ದೆ 

        ಹಿತ್ತಲ ಗಿಡ ಮದ್ದಲ್ಲ 
        ಈಗ 
        ಹಿತ್ತಲಲ್ಲಿ ಗಿಡವಿಲ್ಲ 

- ರೇವಿನಾ 


ಕವನ ಭಾಗ - 12 - ಹೋಟೆಲ್ ಮೆನು & ಅಮ್ಮ


             ಹೋಟೆಲ್ ಮೆನು
-----------------------------------------

ಏನೆ0ದು ಹೇಳಲಿ ಹೋಟೆಲ್ ಮೆನು
ಸಿಗಲಾರದು ಇಲ್ಲಿ ಮೀನು
ಸಿಗುವುದು ವಿಧ ವಿಧ ತಿ0ಡಿ
ತಿ0ದು ಹೊಟ್ಟೆಯಾಗಬೇಕು ಬ0ಡಿ
ಇಡ್ಲಿ ಚಪಾತಿ ಪೂರಿ ಶೀರ
ಉ0ಡಿ ಶಾವಿಗೆ ಅವಲಕ್ಕಿ ಖಾರ
ಸಜ್ಜಿಗೆ ಕಟ್ಲೆಟ್ ತರಹೆವಾರಿ ದೋಸೆ
ಮುಟ್ಟಿದರೆ ಹಿಡಿಯಬೇಕು ತುಪ್ಪದ ಪಸೆ
ಪರಿಮಳ ಭರಿತ ಕಾಫಿ ಚಹಾ
ಹೇಳುವಿರಾ ಅದೇನು ಮಹಾ
ಒಮ್ಮೆ ಬ0ದು ಕುಡಿದು ನೋಡಿ
ತಿರುಗಿ ಬರುವಿರಿ ಓಡಿ ಓಡಿ
ಒಮ್ಮೆ ನಮ್ಮ ಹೋಟೆಲಿಗೆ ಬ0ದು ನೋಡಿ
ಪುನ: ಬರದಿದ್ದರೆ ನನ್ನ ಕೇಳಿ
ಶುಚಿ ರುಚಿಗೆ ತಕ್ಕ ದರ
ಪ್ರೀತಿಪೂರ್ವಕ ಆದರ ಸತ್ಕಾರ
🙏🙏🙏🙏🙏🙏🙏🙏
        

               ಅಮ್ಮ  😘🙏
----------------------------------------
ಅಮ್ಮಾ ನೀ ಹಾಡಿದ ಜೋಗುಳ
ಇನ್ನೂ ಕಿವಿಯಲ್ಲಿ ಗುಣು ಗುಣಿಸುತ್ತಿದೆ
ಅಮ್ಮಾ ನೀ ನೀಡಿದ ಕೈ ತುತ್ತು
ಇನ್ನೂ ನಾಲಗೆ ತುದಿಯಲ್ಲಿ ಇದೆ
ಅಮ್ಮಾ ನೀ ಮಾಡಿಸಿದ ಬಿಸಿನೀರ ಸ್ನಾನ
ಇನ್ನೂ ಮೈಮನವನ್ನು ಉಲ್ಲಾಸ ಗೊಳಿಸುತ್ತಿವೆ
ಅಮ್ಮಾ ನೀ ತಲೆಗೆ ಹಚ್ಚಿದ ಎಣ್ಣೆ
ಇನ್ನೂ ನೆತ್ತಿಯನ್ನು ತ0ಪು ಮಾಡುತ್ತಿದೆ
ಅಮ್ಮಾ ನೀ ಕಲಿಸಿದ ಮೊದಲ  ಪದ್ಯ
ಇನ್ನೂ ಮನದಲ್ಲಿ ಕ0ಠಪಾಠವಾಗಿದೆ
ಅಮ್ಮಾ ನೀ ಕಲಿಸಿದ ರೀತಿ ನೀತಿ
ನಾ ಮುನ್ನಡೆಯಲು ಸಹಾಯಕವಾಗಿವೆ
ಅಮ್ಮಾ ನೀ ನೀಡಿದ ಮಾರ್ಗದರ್ಶನ
ಸಮಾಜದಲ್ಲಿ ನನಗೆ ಸ್ಥಾನಮಾನ ನೀಡಿದೆ
ನನ್ನ ಬಾಲ್ಯವನ್ನು ಸುಮಧುರ ಮಾಡಿದಕ್ಕೆ
ನಿನಗೆ ಸಾವಿರ ಸಿಹಿಮುತ್ತುಗಳು ಅಮ್ಮ
ನನ್ನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿದಕ್ಕೆ
ನಿನಗೆ ಕೋಟಿ ಕೋಟಿ ಪ್ರಣಾಮ ಅಮ್ಮ
😘😘😘😘😘😘😘😘
🙏🙏🙏🙏🙏🙏🙏🙏

-.ರೇವಿನಾ

ಕನ್ನಡ ಚುಟುಕುಗಳು - 20


96. ಮನೆ ನೋಡಲು ಚೆನ್ನಾಗಿದ್ದರೆ 
      ಕಣ್ಣಿಗೆ ತ0ಪು 
      ಜೊತೆಗೆ ಮನೆಯವರೂ ಚೆನ್ನಾಗಿದ್ದರೆ 
      ಮನಸ್ಸಿಗೂ ತ0ಪು 
     🏡🏡🏡🏡🏡🏡

97. ಅ0ದವನ್ನು ಹೆಚ್ಚ್ಚಿಸುತ್ತದೆ ಮನೆಯ ನೋಟ 
      ಇರಲು ಎದುರುಗಡೆ ಸು0ದರ ಕೈತೋಟ 
      ಸೇರುವುದು ಹೊಟ್ಟೆಗೆ ಹೆಚ್ಚು ನಾಕು ತುತ್ತು 
      ಕೇಳಿದಾಗ ಮನದೊಡತಿಯ ಮುದ್ದು ಮಾತು

98. ಮನೆ ಕಟ್ಟಿ ನೋಡು 
      ಮದುವೆ ಮಾಡಿ ನೋಡು 
      ಮನೆ ಕಟ್ಟುವವನ ಪಾಡು 
      ಮದುವೆ ಆದವನ ಕೇಳು

99. ಇಟ್ಟಿಗೆ ಇಟ್ಟಿಗೆ ಸೇರಿದರೆ 
      ಅದು ಕಟ್ಟಡ ಆಗುವುದು 
      ಮನಸ್ಸು ಒಟ್ಟಿಗೆ ಸೇರಿದರೆ 
      ಅದು ಮನೆ ಆಗುವುದು

100. ಮನಸ್ಸಿದ್ದರೆ ಮಾರ್ಗ 
        ಮನಸ್ಸಿದ್ದರೆ ಮಾರ್ಗ 
        ಮನೆ ಸು0ದರವಾಗಿದ್ದರೆ ಸ್ವರ್ಗ 
      🏠🏠🏠🏠🏠🏠🏠

 - ರೇವಿನಾ