Sunday, 21 February 2016

ಕನ್ನಡ ಚುಟುಕುಗಳು ಭಾಗ - 27


೧೩೧. ತನ್ನ ಬಗ್ಗೆ ಹೇಳಿಕೊ0ಡರೆ 
           ಅನ್ನುವರು ಜನರು ಬಡಾಯಿ 
           ಅದೇ ಜನರನ್ನು ಹೊಗಳಿದರೆ 
           ಹಾಕುವರು ಹಾರ ತುರಾಯಿ 
         😜😜😜😜😜

೧೩೨.  ಹಣವ0ತರು ನಡೆದರೆ 
           ಅದು ವಾಯುವಿಹಾರ 
           ಅದೇ ಬಡವ ನಡೆದರೆ 
           ಆತ ಕಸಕ್ಕಿ0ತ ಸಸಾರ

೧೩೩. ಶ್ರೀಮ0ತ ತೂಕ ಇಳಿಸಿಕೊ0ಡರೆ 
          ಅನ್ನುವರು ಆತ ಮಾಡಿದ ಪಥ್ಯ 
          ಅದೇ ಬಡವ ತೂಕ ಇಳಿಸಿಕೊ0ಡರೆ 
          ಅನ್ನುವರು ಹೊಟ್ಟೆಗಿಲ್ಲದೆ ಬಡವಾದ ಕತ್ತೆ

೧೩೪. ಆಕೆ ನನ್ನತ್ತ ನೋಡಿ ನಕ್ಕಾಗ 
         ನನ್ನ ಜೀವ ಹಾರಿಹೋಗಿತ್ತು 
         ನಾನೂ ನಗಲೆ0ದು ತಿರುಗಿದಾಗ
         ಸಮಯ ಜಾರಿ ಹೋಗಿತ್ತು 
         ಒ0ದು ಘಳಿಗೆ ತಡವಾದ ಕಾರಣ  
         ಹಕ್ಕಿ ಹಾರಿ ಹೋಗಿತ್ತು 
        😜😜😜😜😜😜

೧೩೫. ಮರಿಯಾಗಿದ್ದಾಗ ಹಟ ಮಾಡುವರು 
          ಅಮ್ಮ ನೀನಿರು ನನ್ನ ಪಕ್ಕ 
          ಅಮ್ಮನ್ನನ್ನೇ ಮರೆಯುವರು 
          ಬಲಿತ ಮೇಲೆ ರೆಕ್ಕೆಪುಕ್ಕ

- ರೇವಿನಾ 

No comments:

Post a Comment