Sunday 21 February 2016

ಕನ್ನಡ ಚುಟುಕುಗಳು ಭಾಗ 28

೧೩೬. ಜೀವನ ಒ0ದು ರೇಸು
         ಕೈಯ್ಯಲ್ಲಿದ್ದರೆ ನಾಕು ಕಾಸು
         ಕೆಲಸಕ್ಕೆ ನೀವೇ ಆಗಿದ್ದರೆ ಬಾಸು 
         ಬದುಕು ಎನಿಸುವುದು ಸಲೀಸು 
         ಇಲ್ಲದೇ ಹೋದರೆ ...
         ಬದುಕು ಕಿತ್ತು ಹೋದ ಲೇಸು


೧೩೭. ಗೆಳೆಯರು ಅತ್ತರಿನ0ತೆ
          ಅವರ ಇರುವಿಕೆಯಿ0ದ
          ನಮ್ಮ ಮನಸ್ಸು 
          ಉಲ್ಲಾಸಗೊಳ್ಳುತ್ತದೆ


೧೩೮. ಬದುಕು ಎವರೆಸ್ಟ್ ಪರ್ವತ ಏರಿದ ಹಾಗೆ
         ಎಷ್ಟೇ ತೊ0ದರೆ ತಾಪತ್ರಯಗಳು ಬ0ದರೂ
         ಎಲ್ಲವನ್ನೂ ಎದುರಿಸಿ ಮೇಲೇರಿ ನಿ0ತಾಗ
         ಆಗುವ ಅನುಭವ ವರ್ಣನಾತೀತ


೧೩೯. ಅತ್ತರಿನ ವಾಸನೆ ಎಲ್ಲರಿಗೂ ಹಿಡಿಸುತ್ತದೆ
         ಮೀನಿನ ವಾಸನೆ ಕೆಲವರಿಗೆ ಮಾತ್ರ ಹಿಡಿಸುತ್ತದೆ
         ಹಾಗೇ ಒಳ್ಳೇ ಗುಣ ಎಲ್ಲರಿಗೂ ಇಷ್ಟವಾಗುತ್ತದೆ
         ಕೆಟ್ಟ ಚಾಳಿ ಕೆಲವರಿಗೆ ಮಾತ್ರ ಇಷ್ಟವಾಗುತ್ತದೆ


೧೪೦. ಸಜ್ಜನರು ಸುವಾಸನೆಯ ಹಾಗೆ
         ತಮ್ಮ ಸನ್ನಡತೆಯಿ0ದ
         ಲೋಕವನ್ನು ಸ್ವರ್ಗ ಮಾಡುತ್ತಾರೆ
         ದುರ್ಜನರು ದುರ್ವಾಸನೆಯ ಹಾಗೆ
         ತಮ್ಮ ದುರ್ನಡತೆಯಿ0ದ 
         ಲೋಕವನ್ನು ನರಕ ಮಾಡುತ್ತಾರೆ


 -  ರೇವಿನಾ

No comments:

Post a Comment