Sunday 21 February 2016

ಕನ್ನಡ ಕವನಗಳು ಭಾಗ 13 - ಒ೦ದೇ ಸಮಾನ & ಬಲ್ಲವರ ವಚನ

                ಒ೦ದೇ  ಸಮಾನ   
-------------------------------------------

ಶ್ರೀಮ0ತ ನಡೆವನು ತೂಕ ಇಳಿಸಲು 
ಬಡವ ನಡೆವನು ಹಣ ಉಳಿಸಲು 
ಶ್ರೀಮ0ತ ಮಾಡುವ ಒಪ್ಪೊತ್ತು ಉಪವಾಸ 
ಮೈ ಭಾರ ಇಳಿಸಿಕೊಳ್ಳಲು 
ಬಡವ ಮಾಡುವ ಒಪ್ಪೊತ್ತು ಉಪವಾಸ 
ದುಡಿದ ಹಣ ಸಾಲದಿರಲು 
ಶ್ರೀಮ0ತ ಧರಿಸುವನು ತು0ಡುಬಟ್ಟೆ 
ಫ್ಯಾಷನ್ ಎ0ದು ತಿಳಿದು 
ಬಡವ ಧರಿಸುವನು ತು0ಡು ಬಟ್ಟೆ 
ಯಾರೊ ದಾನ ಮಾಡಿದ್ದು 
ಇಬ್ಬರೂ ಅನುಸರಿಸುವ ರೀತಿ ಒ0ದೇ 
ಆದರೆ ಬೇರೆ ಬೇರೆ ಕಾರಣ 
ದೇವರಿಗೆ ಎಲ್ಲರೂ ಒ0ದೇ ಸಮಾನ 
ಎ0ದು ಇದನ್ನು ನೋಡಿ ಒಪ್ಪೋಣ

                ಬಲ್ಲವರ ವಚನ
------------------------------------------

   ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ 
   ಇದೇ ಅ0ತರ0ಗ ಶುಧ್ಧಿ ಇದೇ ಬಹಿರ0ಗ ಶುಧ್ಧಿ 
   ಇದೇ ಕೂಡಲಸ0ಗಮನನ್ನು ಒಲಿಸುವ ಪರಿ 
   ಇದು ಬಸವಣ್ಣನವರ ವಚನ 
    ಫೇಸ್ಬುಕ್ಕಲ್ಲಿ ಬಣ್ಣಿಸಬೇಡ ವಾಟ್ಸೆಪ್ನಲ್ಲಿ ಹಳಿಯಬೇಡ 
    ಇದೇ ಅ0ತರ0ಗ ಶುಧ್ಧಿ ಇದೇ ಬಹಿರ0ಗ ಶುಧ್ಧಿ 
    ಇದೇ ಕಲಿಯುಗದ ಜನರ ಒಲಿಸುವ ಪರಿ 
    ಇದು ಬಲ್ಲವರ ವಚನ 
   😀😀😀😀😀😀😀😀😀

- ರೇವಿನಾ 

No comments:

Post a Comment