Sunday 21 February 2016

ಕನ್ನಡ ಕವನಗಳು ಭಾಗ 16 - ಯಾವುದು ಉತ್ತಮ & ಹಳ್ಳಿ ಹುಡುಗಿಯರು - ಪೇಟೆ ಬೆಡಗಿಯರು

 ಯಾವುದು ಉತ್ತಮ
----------------------

ಮನೆ ಬಿಟ್ಟು ಬೀದಿ ಸುತ್ತು
ಬೀದಿ ಬಿಟ್ಟು ಊರು ಸುತ್ತು
ಊರು ಬಿಟ್ಟು ದೇಶ ಸುತ್ತು
ದೇಶ ಬಿಟ್ಟು  ಪ್ರಪ0ಚ ಸುತ್ತು
ಎ0ದು ಯಾರೋ ಹೇಳಿದರು
ಹೇಳಿದ ಹಾಗೆ ಎಲ್ಲಾ ಸುತ್ತಿದೆ
ಈಗ ಎಲ್ಲಕ್ಕಿ0ತ ಮನೆಯೇ ಉತ್ತಮ
ಎ0ದು ಮನಸ್ಸು ಹೇಳುತಿದೆ

ಹಳ್ಳಿ ಹುಡುಗಿಯರು - ಪೇಟೆ ಬೆಡಗಿಯರು
-------------------------------------------

ಹಳ್ಳಿ ಹುಡುಗಿಯರು...
ಹಣೆಯಲ್ಲಿ ಬೊಟ್ಟು ಕಣ್ಣಿಗೆ ಕಾಡಿಗೆ
ನೆಲ ನೋಡಿಕೊ0ಡೇ ನಡೆವರು ಮೆಲ್ಲಗೆ
ಉದ್ದ ಲ0ಗ ದಾವಣಿ ನೀಳ ಜಡೆ
ಕಾಲ್ಗಳಿಗೆ ಗೆಜ್ಜೆ ಕೈ ತು0ಬಾ ಬಳೆ
ಪೇಟೆ ಬೆಡಗಿಯರು...
ಬೋಳು ಹಣೆ ತುಟಿಗೆ ಕೆ0ಪು
ಮುಖದ ತು0ಬಾ ಮಾಡಿದೆ ಮೇಕಪ್ಪು
ತು0ಡು ಲ0ಗ ತು0ಡು ಕೂದಲು
ಕೈ ಕಾಲೆಲ್ಲಾ ಬೋಳು ಬೋಳು
ಇವರೊಳಗೆ ಯಾರು ಉತ್ತಮರು
ತಿಳಿದುಕೊ0ಡವರೇ ಜಾಣರು
😛😛😛😛😛😛😛😛😛
  
- ರೇವಿನಾ

No comments:

Post a Comment