Sunday, 21 February 2016

ಕನ್ನಡ ಕವನಗಳು ಭಾಗ 15 - ಅವಳು

               ಅವಳು
------------------------------------

ಅವಳನ್ನು ನಾನು ಮನಸಾರೆ ಪ್ರೀತಿಸಿದೆ
ಅವಳಿಗಾಗಿ ....
ಎಲ್ಲಾ ದುರಭ್ಯಾಸ ತ್ಯಜಿಸಿದೆ
ಜವಾಬ್ದಾರಿ ಅರಿತುಕೊ0ಡೆ
ಒಬ್ಬ ಒಳ್ಳೆಯ ಮನುಷ್ಯನಾದೆ
ಅವಳನ್ನು....
ಪ್ರಾಣಕ್ಕಿ0ತ ಮಿಗಿಲಾಗಿ ಪ್ರೀತಿಸಿದೆ
ಎಲ್ಲರಿಗಿ0ತ ಹೆಚ್ಚಾಗಿ ಕ0ಡೆ
ನನ್ನ ಜೀವ ಎ0ದುಕೊ0ಡೆ
ಅವಳಿಗೋಸ್ಕರ ...
ಇನ್ನೂ ಚೆನ್ನಾಗಿ ಕಲಿತೆ
ಒಳ್ಳೆಯ ಉದ್ಯೋಗ ಪಡೆದೆ
ಉನ್ನತ ಸಜ್ಜನ ವ್ಯಕ್ತಿಯಾದೆ
ಅವಳು ಸಿಕ್ಕರೆ ....
ಜೀವನ ಸಾರ್ಥಕವೆನಿಸಿತು
ಬಾಳು ಬ0ಗಾರ ಎನಿಸಿತು
ಜಗವನ್ನೇ ಗೆದ್ದ0ತೆ ಎನಿಸಿತು
ಅವಳು ಸಿಗದೆ ಹೋದರೆ ...
ಜೀವನ ವ್ಯರ್ಥ ಎನಿಸಿತು
ಬದುಕಿಗೆ ಅರ್ಥವಿಲ್ಲ ಎನಿಸಿತು
ಸರ್ವಸ್ವ ಕಳೆದುಕೊ0ಡ0ತೆ ಅನಿಸಿತು
ಕೊನೆಗೂ ಅವಳು ...
ನನ್ನ ಮನಸ್ಸನ್ನು ಅರಿಯದೆ ಹೋದಳು
ನನ್ನಾಸೆ ಪೂರೈಸದೆ ಹೋದಳು
ಇನ್ನೊಬ್ಬನ ಮದುವೆ ಆದಳು
ಅವಳಿ0ದಾಗಿ ...
ಹಸಿವು ಇ0ಗಿ ಹೋಯಿತು
ನಿದ್ದೆ ಹಾರಿ ಹೋಯಿತು
ನೆಮ್ಮದಿ ಹಾಳಾಗಿ ಹೋಯಿತು
😭😭😭😭😭😭😭😭

-   ರೇವಿನಾ


No comments:

Post a Comment