Wednesday 2 December 2015

ಕನ್ನಡ ಚುಟುಕುಗಳು - ಭಾಗ 22


೧೦೬.  ಜಗತ್ತೊ0ದು ಹುಚ್ಚರ ಸ0ತೆ
          ಜನರು ಮಾಡುವರು ಅ0ತೆಕ0ತೆ
          ಅದನ್ನು ನಾವು ನ0ಬಿ ಕೂತರೆ
          ನಾವೂ ಹುಚ್ಚರಾಗುವೆವು ಅವರ0ತೆ
        😛😛😛😛😛😛😛😛


೧೦೭. ಸ0ತೋಷವನ್ನು ಪರರಲ್ಲಿ ಹುಡುಕುವುದಕ್ಕಿ0ತ
         ಪರರನ್ನು ಸ0ತೋಷ ಪಡಿಸು
         ತನ್ನವರಾರು ಎ0ದು ಹುಡುಕುವುದಕ್ಕಿ0ತ
         ಎಲ್ಲರೂ ತನ್ನವರೆ0ದು ಪರಿಗಣಿಸು

೧೦೮.  ನೀರು ಎ0ದಿಗೂ ಅಶುಧ್ಧವಾಗಿ ಇರುವುದಿಲ್ಲ
          ಕೊಳಚೆ ಕಸಕಡ್ಡಿ ತ್ಯಾಜ್ಯಗಳನ್ನು ಹಾಕಿ
          ಜನರು ಅದನ್ನು ಅಶುಧ್ಧಗೊಳಿಸುತ್ತಾರೆ
          ಸ0ಬ0ಧಗಳು ಯಾವತ್ತೂ ಅಪವಿತ್ರ ಆಗಿರುವುದಿಲ್ಲ
          ದ್ವೇಷ ಅಸೂಯೆ ವೈರತ್ವ ತು0ಬಿ
          ಜನರು ಅದನ್ನು ಅಪವಿತ್ರಗೊಳಿಸುತ್ತಾರೆ

೧೦೯.  ಬಿಸಿನೀರು ಕುಡಿಯಲು ಹಿತವಲ್ಲ
          ಆದರೆ ಆರೋಗ್ಯಕ್ಕೆ ಒಳ್ಳೆಯದು
          ಐಸ್ ನೀರು ಕುಡಿಯಲು ಹಿತಕರ
          ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ
          ಹಾಗೆಯೇ....
          ಕಹಿಸತ್ಯ ಕೇಳಲು ಹಿತವಲ್ಲ
          ಆದರೆ ಜೀವನಕ್ಕೆ ಒಳ್ಳೆಯದು
          ಹಸಿಸುಳ್ಳು ಕೇಳುವುದಕ್ಕೆ ಹಿತಕರ
          ಆದರೆ ಜೀವನಕ್ಕೆ ಒಳ್ಳೆಯದಲ್ಲ

೧೧೦.  ಐಸ್ ನೀರು...
          ಸೆಕೆಗಾಲದಲ್ಲಿ ಕುಡಿಯಲು ಹಿತ
          ಚಳಿಗಾಲದಲ್ಲಿ ಕುಡಿಯಲು ಅಹಿತ
          ಜೋಕುಗಳು...
          ಮನಸ್ಥಿತಿ ಚೆನ್ನಾಗಿದ್ದರೆ ಕೇಳಲು ಹಿತ
          ಮನಸ್ಥಿತಿ ಚೆನ್ನಾಗಿರದಿದ್ದಾಗ ಕೇಳಲು ಅಹಿತ

 - ರೇವಿನಾ

No comments:

Post a Comment