೧೧೬. ಕೋಟಿ ಕೋಟಿ ಕೊಟ್ಟರೂ
ಕೊಳ್ಳಲಾಗದ ಸ0ಪತ್ತು
ಮನಸ್ಸಿನ ನೆಮ್ಮದಿ ಮತ್ತು
ಸುಖ ನಿದ್ರೆಯ ಜಗತ್ತು
೧೧೭. ಆರೋಗ್ಯವೇ ಭಾಗ್ಯ
ಆರೋಗ್ಯವೇ ಭಾಗ್ಯ
ಎ0ದು ಅರ್ಥ ಮಾಡಿಕೊಳ್ಳದವನು
ಎ0ಥಹ ಅಯೋಗ್ಯ
೧೧೮. ಚಿಕ್ಕವರಿದ್ದಾಗ ಕಲಿಯುತ್ತೇವೆ
ಶಾಲೆಯಲ್ಲಿ ಅರ್ಥವಾಗದ ಪಾಠ
ದೊಡ್ದವರಾದಾಗ ಕಲಿಯುತ್ತೇವೆ
ಜೀವನದಲ್ಲಿ ಅನುಭವದ ಪಾಠ
೧೧೯. ಬಾಲ್ಯದಲ್ಲಿ ರುಚಿ ಎನಿಸುತಿತ್ತು
ಅಮ್ಮ ನೀಡಿದ ಕೈತುತ್ತು
ಯೌವ್ವನದಲ್ಲಿ ರುಚಿ ಎನಿಸುತ್ತಿದೆ
ಬೆವರು ಸುರಿಸಿ ದುಡಿದ ತುತ್ತು
೧೨೦. ಎಲ್ಲರೂ ಹೇಳುತ್ತಾರೆ
ಹಣವೆ0ದರೆ ಹೆಣ ಬಾಯ್ಬಿಡುವುದು
ಆದರೆ ನಾನು ಹೇಳುತ್ತೇನೆ
ಹಣದಿ0ದ ಸುಖ ಸ0ತೋಷ ಕೊಳ್ಳಲಾಗದು
- ರೇವಿನಾ
No comments:
Post a Comment