೧೨೧. ಎಲ್ಲರೂ ಹೇಳುತ್ತಿರುತ್ತಾರೆ
ಹಾಗಾಗಿದ್ದರೆ ಹೀಗಾಗಿದ್ದರೆ
ನನ್ನ ಪ್ರಕಾರ 'ರೆ' ಎ0ದು ಹೇಳುವ ಬದಲು
ಮಾಡಲು ಸ್ವಲ್ಪ ಆಸಕ್ತಿ ತೋರಿಸಿದ್ದರೆ
೧೨೨. ಯಾವ ಕಾಲಕ್ಕೆ ಏನು ಮಾಡಬೇಕೊ
ಅದೇ ಮಾಡಿದರೆ ಚೆನ್ನ
ಎಲ್ಲಾ ಸಮಯಕ್ಕೂ ಸರಿಯಲ್ಲ
ಹಾಕುವುದು ಚಿನ್ನ
೧೨೩. ಮನಸ್ಸಿದ್ದಲ್ಲಿ ಮಾರ್ಗ
ಮನಸ್ಸಿದ್ದಲ್ಲಿ ಮಾರ್ಗ
ಮನಸ್ಸು ಮಾಡಿದರೆ
ಮಾಡಬಹುದು ಮನೆಯನ್ನೇ ಸ್ವರ್ಗ
೧೨೪. ಒಮ್ಮೆ ಒಬ್ಬರು ಕೇಳಿದರು
ಹೇಳಿದ್ದು ತಿಳಿಯಲಿಲ್ಲ್ವಾ?
ಇದೆಯಾ ತಲೆಯಲ್ಲಿ ಮೆದುಳು?
ನಾ ತಣ್ಣಗೆ ಪ್ರತಿಕ್ರಿಯಿಸಿದೆ
ಇತ್ತು ಆದರೆ ನಾ ದೊಡ್ಡವಳಾದ0ತೆ
ತು0ಬಿದರು ಅದರಲ್ಲಿ ಎಲ್ಲರೂ ಹಾಳುಮೂಳು
೧೨೫. ಜೀವನ ಒ0ದು ಸ0ಪೂರ್ಣ ನಶೆ
ಬಾಲ್ಯದಲ್ಲಿ ಕಲಿಯುವ ನಶೆ
ಹದಿಹರೆಯದಲ್ಲಿ ಪ್ರೇಮದ ನಶೆ
ಯೌವ್ವನದಲ್ಲಿ ದುಡಿಯುವ ನಶೆ
ಇಳಿಪ್ರಾಯದಲ್ಲಿ ನಿದ್ದೆ ಬಾರದೆ
ತೆಗೆದುಕೊಳ್ಳುವ ಮಾತ್ರೆಯ ನಶೆ
- ರೇವಿನಾ
No comments:
Post a Comment