೧೨೬. ಸರಿಯಿದ್ದರೆ ನನ್ನ ಮೂಡು
ಬರೆಯಬಲ್ಲೆ ಕವನ ನೂರಾರು
ಮೂಡು ಸರಿ ಇಲ್ಲದಿದ್ದರೆ
ಮನಸ್ಸು ಕೆಟ್ಟು ಹೋದ ಕಾರು
೧೨೭. ಹೆಣ್ಣಿನ ಕಡೆಯವರು ಕೇಳಿದರು
ಹೇಗೆ ಹುಡುಗ? ಹೇಗೆ ಹುಡುಗನ ಕಾರುಬಾರು?
ಇವರು ಉತ್ತರಿಸಿದರು...
ಹುಡುಗನಿಗಿದೆ ಕಾರು ನಡೆಸುತ್ತಿದ್ದಾನೆ ಬಾರು
೧೨೮. ವೇದ ಸುಳ್ಳಾದರೂ ಗಾದೆ ಸುಳ್ಳಾಗದು
ವೇದ ಸುಳ್ಳಾದರೂ ಗಾದೆ ಸುಳ್ಳಾಗದು
ಗಾದೆ ಸುಳ್ಳಾದರೆ ತಗಾದೆ ನಿಲ್ಲದು
೧೨೯. ಹುಡುಕುತ್ತಿರುತಾರೆ ಜನರು
ಬೇರೆಯವರಲ್ಲಿ ಸರಿತಪ್ಪು
ಎಲ್ಲರಿಗೂ ಅನಿಸುತ್ತದೆ
ತನ್ನದೇ ಸರಿ ಬೇರೆಯವರದ್ದೇ ತಪ್ಪು
೧೩೦. ಬ0ದರೆ ಬರಲಿ ಬಿಡಿ
ಭೀಕರ ಮಳೆ ಬಿರುಗಾಳಿ
ಹೆದರದೆ ಎಲ್ಲರಿಗೂ ತೋರಿಸುವೆವು
ಚೆನ್ನಾಗಿ ಬದುಕಿ ಬಾಳಿ
- ರೇವಿನಾ
No comments:
Post a Comment