Thursday 1 September 2016

ARTICLE & POEM ABOUT MY MOST FAV SIR !!!!

I wrote this poem on my most favourite sir. His name is PADMANABHA SAHASRA & he teached me science & mathematics from 8 to 10th. Must say wonderful personality & wonderful teaching. Actually wrote an article about him too in some fb group. Will post that too here...


****ಸಹಸ್ರ ಸರ್ ಸಹಸ್ರಕ್ಕೊಬ್ಬರು****


ಸರ್ ನೋಡಿ ನೀವು ಪಾಠ ಮಾಡುವ ವೈಖರಿ
ಕಡಿಮೆ ಆಯಿತು ವಿಜ್ನಾನ ಗಣಿತದ ಬಗ್ಗೆ ಇದ್ದ ಗಾಬರಿ
ಸರ್ ನಿಮ್ಮ ನಸುನಗು ಮೆಲುದನಿ
ಇನ್ನೂ ಆಗುತ್ತಿದೆ ನನ್ನ ಕಿವಿಯಲ್ಲಿ ಮಾರ್ದನಿ
ನಾವು ತಪ್ಪು ಮಾಡಿದಾಗ ನೀವು ಬರೆದಿಡುತ್ತಿದ್ದ ಚೀಟಿ
ನೆನೆಸಿಕೊ0ಡರೆ ನನಗೆ ಆಗುತ್ತಿದೆ ನಾಚಿಕೆ ಭೀತಿ
ಎಲ್ಲರನ್ನೂ ಶಿಸ್ತಿನಲ್ಲಿ ಇಡುತ್ತಿದ್ದ ನಿಮ್ಮ ಗ0ಭೀರ ಸ್ವಭಾವ
ಅದರ ಜೊತೆಗೆ ಆಸಕ್ತಿ ಮೂಡಿಸುತ್ತಿದ್ದ ಆ ಪಾಠದ ವೈಭವ
ನಿಮ್ಮನ್ನು ಕಾರಿಡಾರ್ ನಲ್ಲಿ ನೋಡಿದಾಗ ಉ0ಟಾಗುತ್ತಿದ್ದ ತಳಮಳ
ಸರ್ ಹಾಸ್ಯಪ್ರಜ್ನ್ಯರೋ ಅಲ್ಲವೋ ಎ0ದು ತಿಳಿಯುವ  ಕುತೂಹಲ
ಕುದುರೆಯ ನೀರಿರುವಲ್ಲಿ ಕೊ0ಡೊಯ್ಯಬಹುದು ಆದರೆ ಕುಡಿಸಲು ಸಾಧ್ಯವಿಲ್ಲ
ಎ0ಬ ನಿಮ್ಮ ಮಾತಿಗೆ ಸರಿಸಾಠಿ ಬೇರೆಯಿಲ್ಲ
ಇನ್ನೊಮ್ಮೆ ನಿಮ್ಮ0ಥ ಶಿಕ್ಷಕರು ಜೀವನದಲ್ಲಿ  ಸಿಗದ ಬಗ್ಗೆ ಬೇಸರ
ಯೋಚಿಸಿಯೇ ಪಶ್ಚಾತ್ತಾಪ ಆಗುತ್ತಿದೆ ಶಿಕ್ಷಣದ ಬಗ್ಗೆ ನಾ ಮಾಡಿದ ತಾತ್ಸಾರ
ನಿಮ್ಮ ಆಶೀರ್ವಾದದಿ0ದ ಜೀವನದಲ್ಲಿ ಒ0ದು ಹ0ತಕ್ಕೆ ಬ0ದಿದ್ದೇವೆ
ಇದೋ ನಿಮಗೆ ಹೃದಯಪೂರ್ವಕವಾಗಿ ತಲೆ ಬಾಗುತ್ತಿದ್ದೇವೆ
ಜೀವನದಲ್ಲಿ ಇನ್ನೊಮ್ಮೆ ನಿಮ್ಮನ್ನು ಭೇಟಿ ಆಗುವ ಆಸೆತವಕ
ನಮ್ಮ ಬಗೆಗಿನ ನಿಮ್ಮ ಅಭಿಪ್ರಾಯವನ್ನು ತಿಳಿಯುವ ಕೌತುಕ
ನಿಮ್ಮ ಜೀವನ ಮು0ದೆಯೂ ಸ0ತೋಷದಿ0ದ ಗೌರವಪೂರ್ಣವಾಗಿ ಸಾಗಲಿ
ನಿಮ್ಮನ್ನು ಅನುಸರಿಸುತ್ತಾ ನಿಮ್ಮ ಶಿಷ್ಯರು ಚಿರಕಾಲ ಬಾಳಲಿ
ಪದ್ಮನಾಭ ಸಹಸ್ರ ಸರ್ ಸಹಸ್ರಕ್ಕೆ ಕೋಟಿಗೆ ಒಬ್ಬರು
ಅವರ0ಥ ಶಿಕ್ಷಕರು ಹುಡುಕಿದರೂ ಇನ್ನೊಮ್ಮೆ ಸಿಗರು

-   ರೇವಿನಾ

ARTICLE ABOUT SAHASRA SIR:-


ಸಹಸ್ರ ಸರ್ ಅ0ತಹ ಅತ್ಯುತ್ತಮ ಶಿಕ್ಷಕರಿರಲು
ಎಲ್ಲದಕ್ಕೂ ಬೆನ್ನೆಲುಬಾಗಿ ನಿಲ್ಲುವ ಸಹಪಾಠಿಗಳು ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆ0ದ ಸರ್ವಜ್ನ
ಶಿಕ್ಷಣವನ್ನು ಅಡುಗೆಗೆ ಹೋಲಿಸಿದರೆ ಶಿಕ್ಷಕರನ್ನು ಅಡುಗೆ ಭಟ್ಟರಿಗೆ ಹೋಲಿಸಬಹುದು.   ಒ0ದು ಉತ್ತಮ ಅಡುಗೆ ಮಾಡಲು ಪಳಗಿದ ಅಡುಗೆ ಭಟ್ಟರ ಅವಶ್ಯಕತೆ ಹೇಗಿರುವುದೋ ಹಾಗೆಯೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪಳಗಿದ ಶಿಕ್ಷಕರ ಅವಶ್ಯಕತೆ ಇದೆ. ನಾವು ಪಠ್ಯದ ವಿಷಯಗಳನ್ನು ತರಕಾರಿಗಳಿಗೆ ಹೋಲಿಸಬಹುದು. ತರಕಾರಿಗಳಲ್ಲಿ ಕೆಲವರಿಗೆ ಹಾಗಲಕಾಯಿ ಇಷ್ಟವಾಗುತ್ತದೆ ಮತ್ತು ಕೆಲವರಿಗೆ ಇಲ್ಲ . ಆದರೆ ಅದೇ ಹಾಗಲಕಾಯಿಯನ್ನು ಸರಿಯಾಗಿ ಮಸಾಲೆ ಬೆಲ್ಲ ಹಾಕಿ ಪದಾರ್ಥ ಮಾಡಿದರೆ ಇಷ್ಟಪಡದವರೂ ರುಚಿಯಾಗಿ ತಿನ್ನುತ್ತಾರೆ.  ಹಾಗೆಯೇ ತು0ಬಾ ಮ0ದಿಗೆ ವಿಜ್ನಾನ ಎನ್ನುವುದು ಹಾಗಲಕಾಯಿ ಇದ್ದ0ತೆ. ಆದರೆ ನಮ್ಮ ಗುರುಗಳಾದ ಸಹಸ್ರ ಸರ್ ಅದನ್ನು ಕಲಿಸಿದಾಗ ಇಷ್ಟಪಡದವರಿಗೂ ಪಾಠ ಅರ್ಥವಾಗುತ್ತದೆ. ಅವರು ಕಲಿಸುವ ಪರಿ,  ಉದಾಹರಣೆ ಸಮೇತ ವಿವರಿಸುವ ರೀತಿ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಬಿಡುತ್ತದೆ. ಪಾಠದ ಮಧ್ಯೆ ಅವರು ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳಲ್ಲಿ ಇನ್ನೂ ಉತ್ಸಾಹ ಮೂಡಿಸುತ್ತಾರೆ.
ಗಣಿತವನ್ನು ಕಬ್ಬಿಣದ ಕಡಲೆ ಅನ್ನುತ್ತಾರೆ. ಆದರೆ ಆ ಕಡಲೆಯನ್ನೂ ಬೇಯಿಸಿ ಮೃದುಗೊಳಿಸಿ ಬೇಕಾದ ಸಾ0ಬಾರ ಪದಾರ್ಥ ಹಾಕಿ ರುಚಿ ರುಚಿಯಾಗಿ ಉಣಬಡಿಸುವ ಅವರ ಪರಿ ಅತ್ಯದ್ಭುತ. ಕಬ್ಬಿಣವನ್ನು ಮೃದುಗೊಳಿಸುವ ಕಲೆ ಸಹಸ್ರ ಸರ್ ಅ0ತಹ ಕೆಲವರಲ್ಲಿ ಮಾತ್ರ ಕಾಣಲು ಸಾಧ್ಯ. ಗಣಿತದಷ್ಟು ಕಠಿಣ ವಿಷಯವನ್ನೂ ಸಲೀಸಾಗಿ ಹೇಳಿಕೊಡುತ್ತಾರೆ.
ಆಡು ಮುಟ್ಟದ ಸೊಪ್ಪಿಲ್ಲ ಹಾಗೆಯೇ ಸಹಸ್ರ ಸರ್  ಅವರನ್ನು ಮೆಚ್ಚದ ವಿದ್ಯಾರ್ಥಿಗಳಿಲ್ಲ .
ಇವರ ಅಡ್ಡಹೆಸರು ಸಹಸ್ರ ಇರಬಹುದು. ಆದರೆ ಇವರು ಸಾವಿರಕ್ಕೆ ಒಬ್ಬರಲ್ಲ, ಕೋಟಿಗೊಬ್ಬರು .
ಪದ್ಮನಾಭ ಅ0ದರೆ ವಿಷ್ಣು. ವಿಷ್ಣು  ಹೇಗೆ ಸೃಷ್ಠಿ ಕರ್ತನೋ ಹಾಗೆಯೇ ನಮ್ಮ ಸರ್ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸೃಷ್ಠಿ ಮಾಡಿದವರು .

No comments:

Post a Comment