Thursday 1 September 2016

ARTICLE & POEM ABOUT MY 1ST STD TEACHER !!!!!

I still remember my 1st std teacher very well. Her name is GRETTA GONSALVESE. She was very loving, caring & supportive too. I got an opportunity to write about her in some fb group. I was very delighted by this opportunity & i wrote a poem about her too.

ARTICLE:-


ಕಟ್ಟಡದ ಭದ್ರತೆಗೆ ಉತ್ತಮ ಅಡಿಪಾಯ ಹೇಗೆ ಅವಶ್ಯವೋ ಹಾಗೆಯೇ ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅಷ್ಟೇ ಅಗತ್ಯ. ಆ ಅಡಿಪಾಯ ಈಗ  ಇ0ದ ಸಿಕ್ಕರೆ ಮೊದಲು ಒ0ದನೇ ತರಗತಿಯ ಶಿಕ್ಷಕಿಯರ ಕೆಲಸವಾಗಿತ್ತು. ಈಗಿನ ಕಾಲದಲ್ಲಿ  LKG ಇ0ದ A B C D ಕಲಿಸಿದರೆ ನಮ್ಮ ಕಾಲದಲ್ಲಿ ಒ0ದನೇ ತರಗತಿಯಿ0ದಲೇ ಅ ಆ ಇ ಈ ಕಲಿಸುತ್ತಿದ್ದರು. ಅನುಭವಿಗಳನ್ನು ತರಬೇತು ಗೊಳಿಸುವುದು ಅಷ್ಟೊ0ದು ಕಷ್ಟದ ಕೆಲಸವೇನಲ್ಲ. ಆದರೆ ಅನನುಭವಿಗಳಿಗೆ ಕಲಿಸುವುದು ಒ0ದು ಸಾಹಸವೇ ಸರಿ.   ಅದರಲ್ಲೂ ಏನೂ ಅರಿಯದ ಒ0ದನೇ ತರಗತಿಯ ಮುಗ್ಧ ಮಕ್ಕಳಿಗೆ ಪ್ರಥಮ ಅಕ್ಷರಗಳನ್ನು ಕಲಿಸುವುದು ಕಷ್ಟದ ಕೆಲಸ ಎ0ದರೆ ತಪ್ಪಾಗದು. ಇ0ತಹ ಮುಗ್ಧ ಮಕ್ಕಳಿಗೆ ತಾಳ್ಮೆಯಿ0ದ ಕೈ ಹಿಡಿದು ಅಕ್ಷರ ತಿದ್ದಿ ಕಲಿಸಿದವರಲ್ಲಿ ಒಬ್ಬರು ನಮ್ಮ ಮೆರಿನೋಲ್ ಹಯರ್ ಪ್ರೈಮರಿ ಶಾಲೆಯ ಶಿಕ್ಷಕಿ ಗ್ರೆಟ್ಟಾ ಟೀಚರ್. ಅವರು ಅ ಆ ಇ ಈ ಬರೆದು ಕೊಟ್ಟದ್ದನ್ನು ತಿದ್ದುವಾಗ ಆದ ಸ0ತಸ ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ.  ಅದನ್ನು ಮನೆಯಲ್ಲಿ ತ0ದು ಅಜ್ಜಿ ಅಮ್ಮ ಅಪ್ಪನಿಗೆ ತೋರಿಸಿದಾಗ ಅವರ ಮುಖದಲ್ಲಿ ಮೂಡಿದ ಹೆಮ್ಮೆ ಮರೆಯಲು ಸಾಧ್ಯವಿಲ್ಲ.   ತಮ್ಮ ಮಕ್ಕಳು ಎವರೆಸ್ಟ್ ಪರ್ವತ ಏರಿ ಏನೋ ಸಾಧಿಸಿದ0ತೆ ಹೆಮ್ಮೆ ಅವರ ಮುಖದಲ್ಲಿ.  ಇ0ತಹ ಎಷ್ಟೋ ಅಪ್ಪ ಅಮ್ಮ0ದಿರ ಮುಖದಲ್ಲಿ ಹೆಮ್ಮೆಯ ನಗು ಮೂಡಿಸಿದವರು ನಮ್ಮ ಆದರಣೀಯ ಗ್ರೆಟ್ಟಾ ಟೀಚರ್.   ಸ್ಲೇಟಿನಲ್ಲಿ ಮೂಡಿದ ಅವರ ಸು0ದರ ಕೈ ಬರಹ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮಕ್ಕಳ ಮನಸ್ಸು    ಫಲವತ್ತಾದ ಖಾಲಿ ಭೂಮಿಯ0ತೆ . ನಾವು ಏನು ಬಿತ್ತುತ್ತೇವೋ ಅದೇ ಅವರ ಮನಸ್ಸಲ್ಲಿ ಉಳಿದು ಬಿಡುತ್ತದೆ. ಮು0ದೆ ಹೆಮ್ಮರವಾಗಿ ಬೆಳೆದು ಬಿಡುತ್ತದೆ.   ಈ ಚಿಕ್ಕ ಮಕ್ಕಳು ಹೆಚ್ಚಾಗಿ ತಮ್ಮ ಅಮ್ಮ ಅಥವಾ ಶಿಕ್ಷಕಿಯನ್ನು ಅನುಸರಿಸುತ್ತಾರೆ. ಈ ಚಿಕ್ಕ ಮಕ್ಕಳಿಗೆ ಮಾದರಿಯಾಗಿ ನಡೆದವರು ನಮ್ಮ ಗ್ರೆಟ್ಟಾ ಟೀಚರ್.   ಶೈಕ್ಷಣಿಕ ಮಾತ್ರವಲ್ಲದೇ ಶಾಲೆಯ ಸಾ0ಸ್ಕೃತಿಕ ಚಟುವಟಿಕೆಗಳಲ್ಲೂ  ಸಕ್ರೀಯವಾಗಿದ್ದರು. ಶಾಲಾ ಸಮಾರ0ಭಗಳಲ್ಲಿ ಮಕ್ಕಳನ್ನು ನೃತ್ಯಕ್ಕಾಗಿ ತರಬೇತಿಗೊಳಿಸುವುದು ಮತ್ತು ಅವರು ನರ್ತಿಸುವಾಗ     ಹಿನ್ನೆಲೆ ಗಾಯನ ಇತ್ಯಾದಿಗಳನ್ನು ಉತ್ಸಾಹದಿ0ದ ಮಾಡುತ್ತಿದ್ದರು. ಇಷ್ಟೇ ಅಲ್ಲದೇ ಮಕ್ಕಳಲ್ಲಿರುವ ವಿಶೇಷ ಆಸಕ್ತಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಉದಾಹರಣೆಗೆ ವೈಯರ್ ನಲ್ಲಿ ಬುಟ್ಟಿ , ವಾಜ್ ಮಾಡುವುದನ್ನು ಕಲಿಸುವುದು ಇತ್ಯಾದಿ.   ಹೆಣ್ಣು ಶಕ್ತಿ ಸ್ವರೂಪಿಣಿ ಎನ್ನುತ್ತಾರೆ. ಈ ಮಾತಿಗೆ ತಕ್ಕ0ತೆ ಮನೆಯನ್ನೂ  ಉದ್ಯೋಗವನ್ನು ಸಮದೂಗಿಸಿಕೊ0ಡು ಹೋದವರಿವರು.  ಇವರ ಇನ್ನೊ0ದು ವಿಶೇಷತೆ ಏನೆ0ದರೆ ಮಕ್ಕಳಷ್ಟೇ ಮುಗ್ಧ ಮುಖದ ಮೇಲಿನ ಮಾಸದ ಮುಗುಳ್ನಗು.

POEM ABOUT HER :-

No comments:

Post a Comment