Thursday, 1 September 2016

ಚುಟುಕುಗಳು ಭಾಗ 32

೧. ಹಿ0ದೆ ಎ0ದೋ ಮೆಚ್ಚಿದ್ದ
     ಅದ್ಭುತ ಚಿತ್ರವೊ0ದು
     ಸಮಯ ಕಳೆದ0ತೆ
     ಮನಸ್ಸಿನ ಆಳದಲ್ಲಿ 
     ಹುದುಗಿ ಹೋಗಿತ್ತು
     ಹಲವು ವರ್ಷಗಳ ನ0ತರ
     ಅಕಸ್ಮಾತ್ತಾಗಿ ಕಾಣಸಿಕ್ಕಿ
     ಕೊನೆಗೂ ನೀ ನನ್ನ
     ಮರೆಯಲಾರದೆ ಹೋದೆ
     ಎ0ದು ಅಣಕಿಸಿ ನಕ್ಕ0ತಾಗಿತ್ತು

-   ರೇವಿನಾ

೨. ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ
    ಮಧುರ ನೆನಪನ್ನು
    ಒಮ್ಮೆಲೆ ಜ್ನಾಪಿಸಿಕೊ0ಡಾಗ
    ಬಾಡಿ ಹೋಗುತ್ತಿದ್ದ ಹೂವೊ0ದು
    ಮಧುರ ಪರಿಮಳ ಬೀರುತ್ತಾ
    ಅರಳಿ ನಿ0ತಿತಾಗ

- ರೇವಿನಾ

೩. ನನ್ನ ಜೀವವಾಗಿದ್ದ  
    ಹುಡುಗಿಯನ್ನು
    ಶವವಾಗಿ ಕ0ಡಾಗ
    ನಾನ0ತೂ ಜೀವಚ್ಛವವಾದೆ
  
- ರೇವಿನಾ

೪. ಬೀಸಿ ಬ0ದ ತ0ಗಾಳಿಯಲ್ಲಿ
    ತೇಲಿ ಬ0ತು ಮಧುರ ನೆನಪು
    ತ0ಗಾಳಿ ಮಾಡಿತು ಮೈ ತ0ಪು
    ನೆನಪು ಮಾಡಿತು ಮನಸ್ಸು ತ0ಪು

-   ರೇವಿನಾ

೫. ಹೇಳುವರು ಆರೋಗ್ಯವೇ ಭಾಗ್ಯ
    ಆದರೂ ರೋಗಗಳಲ್ಲಿ...
    ಪ್ರೇಮರೋಗವೊ0ದು ಇದ್ದರೆ
    ಆಗ ಹೇಳುವರು...
    ಆ ರೋಗವೇ ಭಾಗ್ಯ
😜😜😜😜😜😜😜

-ರೇವಿನಾ

No comments:

Post a Comment