Tuesday 22 November 2016

**********ದೀಪ ಮತ್ತು ಗಾಳಿ *************

 Actually this poem has hidden meaning...consider yourself as lamp & light as your goal. Some people will try to destroy you if you wana do something in your life But enne & baththi are your hidden potentials. Try to be stable using your hidden potentials. Automatically air will also start supporting you I mean people whom wanted you to destroy will become your friends & will support you  

ದೀಪಾವಳಿ ಎ0ದು ಹಚ್ಚಿದೆ ಮಣ್ಣಿನ ಹಣತೆ
ಗಾಳಿ ಬ0ದರೆ ಏನು ಮಾಡುವುದೆ0ದು ಚಿ0ತೆ
ಎಣ್ಣೆ ಬತ್ತಿಯಿ0ದ ದೀಪವು ಪ್ರಕಾಶಿಸುತಿತ್ತು
ಬೆಳಕಿನಿ0ದ ಇಡೀ ಮನೆ ಕೋರೈಸುತಿತ್ತು
ಒಮ್ಮೆಲೆ ಜೋರಾಗಿ ಗಾಳಿ ಬೀಸಿತು
ಗಾಳಿಯ ಹೊಡೆತಕ್ಕೆ ದೀಪ ನಡುಗಿ ಹೋಯಿತು
ಅನಿಸಿತು ನನ್ನ ಪ್ರಯತ್ನ ನಿರರ್ಥಕವಾಯಿತು
ಜಗವನ್ನು ಬೆಳಗುವ ನನ್ನಾಸೆ ಮಣ್ಣುಗೂಡಿತು
ದೀಪವು ಒಮ್ಮೆ ನಡುಗಿದರೂ ಪ್ರಖರವಾಗಿ ಬೆಳಗುತಿತ್ತು
ಎಣ್ಣೆ ಬತ್ತಿ ಹಣತೆಯ ಸಹಾಯ ಅದಕ್ಕಿತ್ತು
ಸ್ವಲ್ಪ ಹೊತ್ತಿದ್ದ ಗಾಳಿಯ ಶಕ್ತಿ ಕುಗ್ಗಿ ಹೋಯಿತು
ದೀಪದ ಮು0ದೆ ಅದರ ಸದ್ದು ಅಡಗಿ.ಹೋಯಿತು
ದೀಪ ಮನೋಬಲದಿ0ದ ಉಜ್ವಲವಾಗಿ ಬೆಳಗಿತ್ತು
ಅದನ್ನು ನ0ದಿಸುವ ಎಲ್ಲಾ ಪ್ರಯತ್ನ ನಿರರ್ಥಕವಾಗಿತ್ತು
ಅದರ ಶೋಭೆ ನೋಡಿ ಗಾಳಿಗೂ ಒಲವು ಮೂಡಿತ್ತು
ಮ0ದವಾಗಿ ಬೀಸುತ್ತಾ ಬೆಳಗಲು ಸಹಕಾರ ನೀಡಿತ್ತು
- ರೇವಿನಾ







No comments:

Post a Comment