Tuesday, 22 November 2016

AWARENESS ABOUT SOCIAL MEDIA !!!!!

     ನಾನು ಒ0ದೊಮ್ಮೆ ಒ0ದು ಸಾಮಾಜಿಕ ಜಾಲತಾಣದಲ್ಲಿ  ಒಬ್ಬ ಹದಿ ವಯಸ್ಸಿನ ಹುಡುಗಿಯೊ0ದಿಗೆ  ಚಾಟ್ ಮಾಡ್ತಿದ್ದೆ. ಒಮ್ಮೆ ಮಾತನಾಡುವಾಗ ಆಕೆ ಹೇಳಿದಳು "ಆ0ಟಿ ಒಬ್ಬ ಗ0ಡಸಿಗೆ ನನ್ನೊ0ದಿಗೆ ದೈಹಿಕ ಸಹವಾಸ ಮಾಡುವ ಆಸೆಯ0ತೆ. ಅವನು ನನ್ನ ಆನ್ ಲೈನ್ ಫ್ರೆ0ಡ್, ಚಾಟ್ ಮಾಡುವಾಗ ಹೇಳಿದ " ಅ0ದಳು. ಕೇಳಿ ತು0ಬಾನೆ ಆಶ್ಚರ್ಯವಾಯಿತು. ಅವಳಿಗೆ ಬುದ್ಧಿವಾದ ಹೇಳಿ ಆತನೊ0ದಿಗೆ ಚಾಟ್ ಮಾಡುವುದನ್ನು ನಿಲ್ಲಿಸುವ0ತೆ ಕೇಳಿಕೊ0ಡೆ.  ಆಗ ಆಲೋಚಿಸಿದೆ ಈ ಸಾಮಾಜಿಕ ತಾಣಗಳು ಅಮಾಯಕ ಹುಡುಗಿಯನ್ನು ಬಲೆಗೆ  ಬೀಳಿಸುವುದರಲ್ಲಿ ಇ0ತವರಿಗೆ ಸಹಾಯ ಮಾಡುತ್ತವೆ ಎ0ದುಕೊ0ಡು.
    ಇನ್ನೊ0ದು ಘಟನೆ: ಒಬ್ಬ ಹದಿಹರೆಯದ ಹುಡುಗ ಸಾಮಾಜಿಕ ಜಾಲತಾಣದ ಮೂಲಕ ಅನೇಕ ಹೆ0ಗಸರೊ0ದಿಗೆ ಸ್ನೇಹ ಮಾಡಿಕೊ0ಡ. ಹೆ0ಗಸರು ಚಿಕ್ಕ ಹುಡುಗ ಎ0ದುಕೊ0ಡು ಮಾತನಾಡಿದರು ಮತ್ತು ಕೆಲವರ ಮೊಬೈಲ್ ನ0ಬರ್ ಕೂಡ ಸ0ಪಾದಿಸಿಕೊ0ಡ.  ಈ ಹುಡುಗ ಅವರ ಫೋಟೊ ಬಳಸಿಕೊ0ಡು ಕೆಲವು ನಗ್ನಚಿತ್ರಗಳಿಗೆ ಅವರ ಮುಖ ಜೋಡಿಸಿ ಕಳುಹಿಸತೊಡಗಿದ.  ಪುಣ್ಯಕ್ಕೆ ಆ ಎಲ್ಲಾ ಹೆ0ಗಸರು ಒಬ್ಬರಿಗೊಬ್ಬರು ಪರಿಚಿತರಾಗಿದ್ದರು ಮತ್ತು ಈ ಹುಡುಗನ ವಿಷಯ ಬೇಗ ಬಯಲಾಯಿತು. ಎಲ್ಲರೂ ಆತನೊ0ದಿಗೆ ಮಾತು ನಿಲ್ಲಿಸಿದರು ಮತ್ತು ಆತನನ್ನು  ಬ್ಲಾಕ್ ಮಾಡಿದರು. 
       ಘಟನೆ 3: ಹುಡುಗಿಗೆ ಮದುವೆಯ ಪ್ರಸ್ತಾಪ ಬ0ದಿತ್ತು. ಅವಳು ಕೆಲವು ಸ್ನೇಹಿತರೊ0ದಿಗೆ ತೆಗೆದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಳು. ಅದನ್ನು ಅಪಾರ್ಥ ಮಾಡಿಕೊ0ಡು ಹುಡುಗನ ಮನೆಯವರು ಆ ಪ್ರಸ್ತಾಪ ಕೈ ಬಿಟ್ಟರು. 
      ಈ 3 ಘಟನೆಗಳು ಉದಾಹರಣೆಗಳಷ್ಟೇ. ಇ0ತಹ ಅದೇಷ್ಟೋ ಘಟನೆಗಳು ಈ ಸಾಮಜಿಕ ಜಾಲತಾಣದಿ0ದಾಗಿ ನಡೆಯುತ್ತವೆ. ಹದಿ ಹರೆಯದ ಹುಡುಗಿಯರು ಮತ್ತು ಅಮಾಯಕ ಹೆ0ಗಸರು ಇವರಿಗೆ ಬಲಿಯಾಗುತ್ತಾರೆ.  ಸಾಮಾಜಿಕ ಜಾಲತಾಣ ಕೆಟ್ಟದೆ0ದು ನಾನು ಹೇಳುವೆದಿಲ್ಲ. ಆದರೆ ನಮಗೆ ನಮ್ಮ ಇತಿಮಿತಿ ತಿಳಿದಿರಬೇಕು. ಪ್ರತಿ ಒ0ದನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ನಿಲ್ಲಿಸಿ. ಅಪರಿಚಿತರೊ0ದಿಗೆ ಮಾತು ಕಡಿಮೆ ಮಾಡಿ. ನಿಮ್ಮ ತೀರಾ ಖಾಸಗಿ ವಿಷಯಗಳನ್ನು  ಅವರಿಗೆ ತಿಳಿಸಬೇಡಿ. ನಿಮ್ಮ ಫೋಟೊಗಳನ್ನು ಎಲ್ಲರೂ ನೋಡಲು ಬಳಸಲು ಆಗದ0ತೆ ಎಚ್ಚರ ವಹಿಸಿ. ಆದಷ್ಟೂ ಮಾಡರ್ನ್ ಎನ್ನುವ ಹೆಸರಿನಲ್ಲಿ  ಮೈ ತೋರಿಸುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಈಗಿನ ಕಾಲದ ಹುಡುಗಿಯರು ಆನ್ ಲೈನ್ ಪರಿಚಯ ಮಾಡಿಕೊ0ಡು ಅಪರಿಚಿತರೊ0ದಿಗೆ ಪ್ರೀತಿ ಪ್ರೇಮ ಎ0ದು ಮೋಸ ಹೋಗಿ  ಸಿಕ್ಕಿ ಬೀಳುತ್ತಾರೆ. ಆದ್ದರಿ0ದ ಅವರ ಪೋಷಕರು ಹುಡುಗಿಯರ ಸ್ನೇಹಿತರ ಬಗ್ಗೆ , ಅವರ ಮಾತುಕತೆಗಳ ಬಗ್ಗೆ ಆಸಕ್ತಿ ತೋರಿಸಿ ಮತ್ತು ಎಚ್ಚರ ವಹಿಸಿ . ಹದಿವಯಸ್ಸಿನ ಹುಡುಗಿಯರು ಆನ್ ಲೈನ್ ಸ್ನೇಹಿತರನ್ನು ಭೇಟಿಯಾಗಬೇಕಾಗಿ ಬ0ದಾಗ ತಮ್ಮ ಮನೆಯ ಹಿರಿಯರನ್ನು ಕರೆದುಕೊ0ಡು ಹೋಗಿ.  ಈ ಕೆಲವು ವಿಷಯಗಳಲ್ಲಿ ಜಾಗ್ರತೆ ಮಾಡಿದರೆ ಈ ಸಾಮಜಿಕ ಜಾಲತಾಣಗಳು ನಿಜವಾಗಿಯೂ ಉಲ್ಲಾಸ, ಉತ್ಸಾಹ , ಪ್ರೋತ್ಸಾಹವನ್ನು ನೀಡುತ್ತವೆ.
  - ರೇವಿನಾ

No comments:

Post a Comment