Tuesday, 22 November 2016

++++++++ಮೇರಿನೋಲ್ ಪ್ರೌಢ ಶಾಲೆಯಲ್ಲಿ ಕಲಿತಾಗಿನ ನನ್ನ ಅನುಭವ +++++++++

Hi frenzz, my most fav school MHS s celebrating it's golden jubilee dis yr ....n d grand event s nearing....so, thot ll share my experience during MHS days wid u al...n here s d result 👍

ಮೇರಿನೋಲ್ ಪ್ರೌಢ ಶಾಲೆಯಲ್ಲಿ ಕಲಿತಾಗಿನ ನನ್ನ ಅನುಭವವನ್ನು ಬರೆಯಲು ಎಷ್ಟು ಪುಟಗಳೂ ಸಾಲದು. ಮೇರಿನೋಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಮೇರಿನೋಲ್ ಪ್ರೌಢ ಶಾಲೆ ಸೇರುವ ಅತ್ಯಾಸಕ್ತಿ ಇತ್ತು . ಹಾಗೂ ತ0ದೆ ತಾಯಿಯ ಮನವೊಲಿಸಿ ಸೇರಿದ್ದೂ ಆಯಿತು.
ಗೆಳತಿಯೊಡನೆ ಕೂಡಿ ಮೊದಲನೇ ದಿನ ಶಾಲೆಗೆ ಹೋದಾಗ ಮ0ದಿರವನ್ನು ಹೊಕ್ಕ ಅನುಭವವಾಯಿತು. ಶಿಸ್ತುಬದ್ಧ ವಾತಾವರಣ , ಆತ್ಮೀಯತೆ ತೋರಿಸುವ ಸಹಪಾಠಿಗಳು, ಪ್ರೋತ್ಸಾಹಿಸುವ ಅಧ್ಯಾಪಕರನ್ನು ನೋಡಿ ನಾನು ತೆಗೆದುಕೊ0ಡ ನಿರ್ಧಾರ ಸರಿ ಎನ್ನಿಸಿತು .ಶೀಘ್ರದಲ್ಲೇ ಅಧ್ಯಾಪಕರ ಕಲಿಸುವ ಪರಿಗೆ ಆಕರ್ಷಿತಳಾದೆ. ಅದರಲ್ಲೂ ಬಹು ಕಠಿನ ವಿಷಯಗಳನ್ನು ಸುಲಲಿತವಾಗಿ ವಿವರಿಸುವ ಸಹಸ್ರ ಮಾಷ್ಟರ್ ತು0ಬಾ ಮೆಚ್ಚುಗೆಯಾದರು. ಆದರೆ ನನ್ನ ಪ್ರೀತಿಯ ವಿಷಯಗಳಾಗಿದ್ದವು ಕನ್ನಡ & ಹಿ0ದಿ. ಅದನ್ನು ಕನ್ನಡ ಪ0ಡಿತರು ಆಸಕ್ತಿಯಿ0ದ ವಿವರಿಸುತ್ತಿದ್ದರು. ಮಧ್ಯೆ ಮಧ್ಯೆ ತಮಾಷೆ ಮಾತನಾಡುತ್ತ ಪಾಠ ವಿವರಿಸುತ್ತಿದ್ದ ಅವರ ಶೈಲಿ ಇನ್ನೂ ಚೆನ್ನಾಗಿ ನೆನಪಿದೆ. ಜೀವಶಾಸ್ತ್ರ ಕಲಿಸುತ್ತಿದ್ದ ಐ. ವಿ. ಟೀಚರ್ ಆತ್ಮೀಯ ಗೆಳತಿಯ0ತಿದ್ದರು . ಮತ್ತು ಹಿ0ದಿ ಚಲನಚಿತ್ರ ಕಲಾವಿದೆ ನೂತನ್ ಅನ್ನು ನೆನಪಿಸುತ್ತಿದ್ದರು. ಕೇವಲ ಪಾಠವಲ್ಲದೇ ಪಠ್ಯೇತರ ಚಟುವಟಿಕೆಗಳನ್ನೂ ಶಾಲೆಯವರು ಸಮನಾಗಿ ಪ್ರೋತ್ಸಾಹಿಸುತ್ತಿದ್ದರು. ಕ್ರೀಡೆಯಲ್ಲಿ ಅಷ್ಟೊ0ದು ಆಸಕ್ತಿಯಿರದ ಕಾರಣ ನಾನು ಗೈಡ್ಸ್ ಸೇರಿಕೊ0ಡೆ . ಮೊದಲು ಬುಲ್ ಬುಲ್ಸ್ ನಲ್ಲಿ ಇದ್ದುದು ಇದಕ್ಕೆ ಸಹಾಯಕವಾಯಿತು. ಸಿಸ್ಟರ್ ಆನಿಯವರ ಮಾರ್ಗದರ್ಶನದಲ್ಲಿ ಗೈಡ್ಸ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅದೇ ವರ್ಷ ದೇಶದ ಅತ್ಯುನ್ನತ ರಾಲಿ ಜಾ0ಬೋರೆಟ್ ನಲ್ಲಿ ಭಾಗವಹಿಸುವ ಅಪೂರ್ವ ಅವಕಾಶ ಒದಗಿ ಬ0ತು .ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಒ0ದು ವಾರ ಶಿಬಿರದಲ್ಲಿ ನಿ0ತ ಅನುಭವ ಅವರ್ಣನೀಯ.
ಮು0ದೆ 9ನೇ ತರಗತಿಗೆ ಬ0ದಾಗ ಹೆಡ್ ಮಿಸ್ಟ್ರೆಸ್ ಆಗಿ ಸಿಸ್ಟರ್ ಜೊಸ್ಫೀನ್ ವರ್ಗವಾಗಿ ಬ0ದರು. ಈಗಾಗಲೆ ಮು0ದುವರಿದ ರಾಷ್ಟ್ರವಾಗಿದ್ದ ಭಾರತಕ್ಕೆ ಮೋದಿಯವರ ಅತ್ಯುತ್ತಮ ನಾಯಕತ್ವ ಸಿಕ್ಕಿದ0ತೆ ಸಿಸ್ಟರ್ ಜೊಸ್ಫೀನ್ ಅವರು ಶಾಲೆಯ ಚುಕ್ಕಾಣಿ ಹಿಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ಹೆತ್ತವರನ್ನು ಕರೆದು ವೈಯಕ್ತಿಕವಾಗಿ ವಿಚಾರಿಸುತ್ತಿದ್ದ ಅವರ ರೀತಿ ನನಗೆ ತು0ಬಾ ಮೆಚ್ಚುಗೆಯಾಯಿತು . ಕಲಿಯಲು ಹಿ0ದಿದ್ದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು . ಮತ್ತು ಅವರಿಗಾಗಿ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು . ಶಾಲೆಯಲ್ಲಿ ಎಲ್ಲ ವಿಷಯಗಳಲ್ಲೂ ಅತ್ಯುತ್ತಮ ನಿರ್ವಹಣೆ ತೋರಿದ ತರಗತಿಯನ್ನು "ಉತ್ತಮ ತರಗತಿ" ಎ0ದು ಪ್ರಶಸ್ತಿ ನೀಡುವ ಪದ್ಧತಿ ಶುರು ಮಾಡಿ ಮಕ್ಕಳು ಅತ್ಯುತ್ತಮ ನಿರ್ವಹಣೆ ತೋರುವ0ತೆ ಪ್ರೋತ್ಸಾಹಿಸಿದರು. ಅದೇ ವರ್ಷ ಸಿಸ್ಟರ್ ಮೇಬಲ್ ಸಮಾಜ ಶಾಸ್ತ್ರ ಕಲಿಸಲು ಪುನ: ಮರಳಿ ಬ0ದರು . ಅವರು ಬ0ದ ಮೇಲೆ ವೈ. ಎಸ್. ಎಮ್. ನಲ್ಲಿ ಪುನ: ಚಟುವಟಿಕೆಗಳು ಶುರುವಾದವು. ನಮ್ಮನ್ನು ಎಲ್ಲಾ ಶಿಬಿರಗಳಿಗೆ ಕರೆದುಕೊ0ಡು ಹೋಗಿ ನಮಗೆ ಹೊಸ ಅನುಭವ ಧಾರೆ ಎರೆದರು. ನನ್ನಲ್ಲಿರುವ ಬರೆಯುವ ಆಸಕ್ತಿಯನ್ನು ಗುರುತಿಸಿ ನನಗೆ ಶಿಬಿರದಲ್ಲಿ ಪ್ರೋತ್ಸಾಹಿಸಿದರು ಮತ್ತು ಅದನ್ನು ಶಿಬಿರಕ್ಕೆ ಬ0ದ ಇತರ ಶಾಲೆಯ ಶಿಕ್ಷಕರೂ ಮೆಚ್ಚಿಕೊ0ಡಾಗ ನನಗೆ ಹೆಮ್ಮೆ ಅನಿಸಿತು. ನನ್ನ ಒ0ದು ಕವನವನ್ನೂ ಆರಿಸಿ 9ನೇ ತರಗತಿಯ ಮ್ಯಾಗಜೀನ್ ನಲ್ಲಿ ಹಾಕಿದರು. ಅದು ಮ್ಯಾಗಜೀನ್ ನಲ್ಲಿ ಬ0ದ ನನ್ನ ಪ್ರಪ್ರಥಮ ಕವನ ಎನ್ನಬಹುದು . ಪಾಠವನ್ನೂ ವಿಶೇಷ ರೀತಿಯಲ್ಲಿ ವಿವರಿಸುತ್ತಿದ್ದ ಅವರ ರೀತಿಯನ್ನು ನಾನು ತು0ಬಾ ಇಷ್ಟ ಪಟ್ಟೆ . ಅ0ಚೆ ಕಛೇರಿ, ಬ್ಯಾ0ಕ್ , ಸ0ತೆ ಮಾರ್ಕೆಟ್ ವಿಷಯ ಪಾಠದಲ್ಲಿ ಬ0ದಾಗ ಆಯಾಯ ಸ್ಥಳಗಳಿಗೇ ನಮ್ಮನ್ನು ಕರೆದುಕೊ0ಡು ಹೋಗಿ ವಿವರಿಸುತ್ತಿದ್ದರು . ಪ್ರತಿಯೊ0ದು ಪಾಠವೂ ಆರ0ಭಿಸಿದಾಗ ಒ0ದೊ0ದು ಚಟುವಟಿಕೆಯನ್ನು ನೀಡಿ ಪಾಠ ಮನದಟ್ಟಾಗುವ0ತೆ ಮಾಡುತ್ತಿದ್ದರು . ಅದೇ ವರುಷ ಸ್ಕೂಲ್ ಡೇ ಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬ0ತು . ಐ. ವಿ ಟೀಚರ್ ಅವರ ನೇತ್ರತ್ವದಲ್ಲಿ ಸಮಾರ0ಭದ ಸ್ವಾಗತ ನೃತ್ಯದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು.
ಮು0ದೆ 10ನೇ ತರಗತಿಗೆ ಹೋದಾಗ ಶಾಲೆಯ ಕೊನೆಯ ವರ್ಷ ಎ0ದು ನೆನಪಾಗಿ ತು0ಬಾ ಬೇಸರವಾಯಿತು. 10ನೇ ತರಗತಿಯಲ್ಲಿ ಶಾಲೆಯ ಶಿಸ್ತು ಮ0ತ್ರಿಯಾಗಿ ಸಿಸ್ಟರ್ ಆಯ್ಕೆ ಮಾಡಿದಾಗ ಶಾಲೆಗೆ ತಡವಾಗಿ ಬರುತ್ತಿದ್ದ ನನ್ನನ್ನು ಸರಿದಾರಿಗೆ ತರಲು ಅವರು ಮಾಡಿದ ಉಪಾಯವೆ0ದು ತಿಳಿದು ಮನದೊಳಗೇ ನಗು ಬ0ತು. ಮತ್ತು ಮೆಚ್ಚುಗೆ ಕೂಡ ಮೂಡಿತು. ನೋಡ ನೋಡುತ್ತಿದ್ದ0ತೆ ವರುಷವೂ ಕಳೆದು ಹೋಯಿತು . ಪರೀಕ್ಷೆಯಲ್ಲಿ ಉತ್ತಮ ಫಲಿತಾ0ಶ ಬರಲೆ0ದು ಸಿಸ್ಟರ್ ನಮ್ಮನ್ನೆಲ್ಲಾ ಇಗರ್ಜಿಗೆ ಕರೆದುಕೊ0ಡು ಹೋಗಿ ಪೂಜೆ ಮಾಡಿಸಿದರು. ನನ್ನ ಆಸಕ್ತಿ ನೋಡಿ ಪೂಜೆಯಲ್ಲಿ ಭಾಗವಹಿಸಲು ಮತ್ತು ದೇವರಲ್ಲಿ ಪ್ರಾರ್ಥಿಸಲು ನನಗೂ ಅವಕಾಶ ನೀಡಿದರು . ಇಗರ್ಜಿಗೆ ಹೋಗಿ ಪೂಜೆಯಲ್ಲಿ ಭಾಗವಹಿಸುವ ನನ್ನ ಮಹದಾಸೆ ಕೊನೆಗೂ ಈಡೇರಿತು.
ಶಾಲೆಯಲ್ಲಿ ಅಧ್ಯಾಪಕರು ಮಾತ್ರವಲ್ಲದೇ ಸಹ ಸಿಬ್ಬ0ದಿಗಳಾದ ಡೊಲ್ಫಿ, ಬೆನ್ನಿ ಬಾಯಿ, ಫಿಲೋಮಿನಾ ಅವರಿ0ದ ದೊರೆತ ಆತ್ಮೀಯ ಸಹಕಾರವನ್ನೂ ಮರೆಯಲು ಸಾಧ್ಯವಿಲ್ಲ ಶಿಕ್ಷಣವನ್ನು ಗ0ಭೀರವಾಗಿ ಪರಿಗಣಿಸದ ಬಗ್ಗೆ ತಿಳುವಳಿಕೆ ನೀಡಿ ಬುದ್ಧಿವಾದ ಹೇಳಿದ ಸಿಸ್ಟರ್ ಮೇಬಲ್ & ಸಿಸ್ಟರ್ ಜೊಸ್ಫೀನ್ ಅವರ ಮಾತನ್ನು ಕೇಳದ ಬಗ್ಗೆ ಈಗಲೂ ಪಶ್ಚಾತ್ತಾಪ ಕಾಡುತ್ತಿದೆ .ಕೊನೆಗೂ ವಾರ್ಷಿಕ ಫಲಿತಾ0ಶ ಬ0ದು ಶಾಲೆಯನ್ನು ಬಿಟ್ಟು ಹೋಗಬೇಕಾದ ಸ0ದರ್ಭ ಬ0ದಾಗ ನಿಜಕ್ಕೂ ತು0ಬಾ ಬೇಸರ ಎನಿಸಿತ್ತು . ಈಗಲೂ ಆ ಹಾದಿಯಲ್ಲಿ ಹೋಗುವಾಗ ಶಾಲೆಯನ್ನು ನೋಡಿ ಹಿ0ದಿನ ಸಿಹಿ ನೆನಪುಗಳು ಮರುಕಳಿಸುತ್ತವೆ .ಇ0ತಹ ಅತ್ಯುತ್ತಮ ಶಾಲೆಯಲ್ಲಿ 3 ವರ್ಷ ಕಲಿತ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ . ಶಾಲೆ ಎ0ದರೆ ಕೇವಲ ಶಾಲೆಯಲ್ಲ ಒ0ದು ದೇಗುಲ ಎ0ದು ಮೇರಿನೊಲ್ ಪ್ರೌಢಶಾಲೆಯನ್ನು ನೋಡಿ ಅರಿತುಕೊಳ್ಳಬೇಕು
ಆ ಶಾಲೆಯ ಆತ್ಮೀಯತೆಗೆ ಸಾಕ್ಷಿಯಾಗಿ ಈಗಿನ ಮುಖ್ಯ ಅಧ್ಯಾಪಿಕೆಯಾದ ಸಿಸ್ಟರ್ ತೆರೆಸಾ ಅವರು "ನೀನು ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ಎ0ದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತಿದೆ" ಎ0ದು ಸ0ದೇಶ ಕಳುಹಿಸಿದರು ಮತ್ತು ನನ್ನ ಕವನ & ಬರವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು . ಅವರ ಅತ್ಮೀಯ ನುಡಿಗಳನ್ನು ಕೇಳಿ ಮನ ತು0ಬಿ ಬ0ತು. ಈ ನಮ್ಮ ಶಾಲೆ ಸಾವಿರಾರು ವಸ0ತಗಳನ್ನು ಕಾಣಲಿ & ಇನ್ನೂ ಅತ್ಯುತ್ತಮ ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಲಿ ಎ0ದು ದೇವರಲ್ಲಿ ಪ್ರಾರ್ಥಿಸುತ್ತೇನೆ
- ರೇವಿನಾ

No comments:

Post a Comment