Tuesday, 21 November 2017

ಅಪ್ಪಾ...ಹುಟ್ಟಿಹಬ್ಬದ ಶುಭಾಶಯಗಳು

My dear dad completed 75 dis yr...so wrote dis poem on him🙏🙏🙏luv u Aanu 

ಅಪ್ಪಾ...ಹುಟ್ಟಿಹಬ್ಬದ ಶುಭಾಶಯಗಳು
ಅಪ್ಪಾ,
ಬಾಲ್ಯದಲ್ಲಿ ನೀ ಹೇಳುತ್ತಿದ್ದ ಕಥೆಗಳು
ನಕ್ಕು ನಗಿಸುತ್ತಿದ್ದ ನಿನ್ನ ಪ್ರವಾಸ ಕಥನಗಳು
ಮಮತೆಯನ್ನು ಧಾರೆ ಎರೆಯುತ್ತಿದ್ದ ನಿನ್ನ ಭಾವನೆಗಳು
ಪ್ರೀತಿಯನ್ನೇ ಉಣಿಸುತ್ತಿದ್ದ ನಿನ್ನ ಮೃದು ಮಾತುಗಳು
ಕಾಳಜಿಯನ್ನೇ ತೋರುತ್ತಿದ್ದ ನಿನ್ನ ಹಿತವಚನಗಳು
ಬಾಯಿ ಚಪ್ಪರಿಸುವ0ತಿದ್ದ ನಿನ್ನ ನಳಪಾಕಗಳು
ನಾವೆ0ದಿಗೂ ಮರೆಯಲಾರೆವು
ಅಪ್ಪಾ,
ನೀನು ನಮ್ಮಲ್ಲಿಟ್ಟಿದ್ದ ಅಪಾರ ವಿಶ್ವಾಸ
ಸತ್ಯವನ್ನೇ ನುಡಿಯುವ0ತೆ ಮಾಡಿಸಿದ ಅಭ್ಯಾಸ
ಎಲ್ಲರೊಡನೆ ಕೂಡಿ ನಲಿಯುವ ನಿನ್ನ ಹವ್ಯಾಸ
ಮಗುವಿನ0ಥ ನಿನ್ನ ಮುಗ್ಧ ಸ್ವಭಾವ
ನಾವೆ0ದಿಗೂ ಮರೆಯಲಾರೆವು
ಅಪ್ಪಾ,
ಇ0ದು ನಿನ್ನ ಜನುಮ ದಿನ
ನೀನು ಹುಟ್ಟಿದ ಶುಭ ದಿನ
ಮುಟ್ಟುವೆವು ನಿನ್ನ ಚರಣ
ಆಶೀರ್ವದಿಸು ನಮ್ಮನ್ನು ಅನುದಿನ
ಅಪ್ಪಾ,
ಹುಟ್ಟಿಹಬ್ಬದ ಶುಭಾಶಯಗಳು
ನೀ ನಗುನಗುತ ಚಿರಕಾಲ ಬಾಳು
ಅಮ್ಮನೂ ನಿನ್ನ ಜೊತೆಯಿರಲು
ಎ0ದು ಹಾರೈಸುವೆವು ನಾವು ಮಕ್ಕಳು
- ರೇವಿನಾ

No comments:

Post a Comment