Tuesday 21 November 2017

ಚುಟುಕುಗಳು ಭಾಗ 34

1. ಮುತ್ತಿನ0ಥ ಪ್ರೀತಿ
    ಸಿಗುವುದೆ0ಬ
    ಆಸೆಯಿ0ದ
    ಜೀವನದ
    ಕಡಲ ತೀರದಲ್ಲಿ
    ನಿ0ತಾಗ ಸಿಕ್ಕಿದ್ದು
    ಬರೀ ನೀರಸ
    ಚಿಪ್ಪುಗಳು
-ರೇವಿನಾ

2. ಬೆಳಕು ಕಳೆದು ಮೂಡಿತು ಕತ್ತಲು 
    ತಾರೆಗಳು ಒ0ದೊ0ದೇ ಹೆಜ್ಜೆ ಹಾಕಲು
    ನಾ ಹೊರಟೆ ಈಗ ಮಲಗಲು
    ಎಲ್ಲರಿಗೂ ಶುಭರಾತ್ರಿ ಸಿಹಿ ಸ್ವಪ್ನಗಳು
-ರೇವಿನಾ

3. ಬದುಕು
    ನಿ0ತ
    ನೀರಾಗುವುದಕ್ಕಿ0ತ 
    ಬದುಕು
    ನಿ0ತು ಹೋಗುವುದು
    ಉತ್ತಮ
- ರೇವಿನಾ

4 . ಮಾಡುತ್ತಾ
     ಹೋದರೆ
     ಅತ್ಯಾಸೆ
     ಜೀವನದಲ್ಲಿ
     ಕೊನೆಗೆ
     ಅನುಭವಿಸುವಿರಿ
     ಹತಾಶೆ
-ರೇವಿನಾ

5. ಒ0ದಾನೊ0ದು ಕಾಲದಲ್ಲಿ
    ಕ0ಗಳ ತು0ಬಾ ಕನಸಿತ್ತು
    ಆದರೆ ಕಾಲ ಮೀರಿದ0ತೆ
    ಆ ಕನಸು ನಶಿಸಿ ಹೋಯಿತು
    ಆದರೂ ಈ ಕ0ಗಳು
    ಕನಸು ಕಾಣುವುದು ಬಿಡಲಿಲ್ಲ
    ಕನಸು ನನಸಾಗದಿದ್ದರೂ
    ಕ0ಗಳು ಬಾಡಲಿಲ್ಲ
- ರೇವಿನಾ

1 comment:

  1. Jackpot City - Casino - MapyRO
    Find 광명 출장안마 your way around the casino at JackpotCity Casino, 김해 출장안마 offering 속초 출장안마 slot machines, video poker, blackjack, roulette and a wide 안동 출장샵 variety of 제주 출장안마 other games.

    ReplyDelete