೧೩೧. ಕವನ ಬರೀಲಿಕ್ಕೆ ಏನಾಗಬೇಕ್ರೀ?
ನಾನು ಕೈ ನೀವು ಕಿವಿಯಾಗಬೇಕ್ರೀ
ನಾನು ನಾಲ್ಕು ಸಾಲು ಗೀಚ್ತೀನಿ
ನೀವ್ ಅದನ್ನು ಓದಿ ನಗಬೇಕ್ರಿ
ನಾನು ಕೈ ನೀವು ಕಿವಿಯಾಗಬೇಕ್ರೀ
ನಾನು ನಾಲ್ಕು ಸಾಲು ಗೀಚ್ತೀನಿ
ನೀವ್ ಅದನ್ನು ಓದಿ ನಗಬೇಕ್ರಿ
೧೩೨. ಸಮಯ ಕಳೆಯುವುದಕ್ಕಾಗಿ ಪ್ರಾರ0ಭಿಸಿದೆ
ಬರೆಯಲು ನಾನು ಕವಿತೆ
ಬರೆಯುತ್ತ ಬರೆಯುತ್ತಾ ಕೊನೆಗೆ
ಇನ್ನು ಬರೆಯುವುದೇನು ಎ0ದು ನನ್ನ ಚಿ0ತೆ
೧೩೩. ಕವಿ ಕವಿತೆ ಬರೆಯುವ
ಚಿತ್ರಕಾರ ಚಿತ್ರ ಬಿಡಿಸುವ
ಹಾಡುಗಾರ ಹಾಡು ಹಾಡುವ
ನಾವು ನೀವು ಸೇರಿ ಹರಟೆ ಹೊಡೆಯುವಾ
೧೩೪. ಎಲ್ಲಾರೂ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನಾನು ಕವನ ಬರೆಯುವುದು
ಸಮಯ ಕಳೆಯುವುದಕ್ಕಾಗಿ
೧೩೫. ಗುಣ ನೋಡಿ ಹೆಣ್ಣು ತರಬೇಕು
ಮನೆ ನೋಡಿ ಹೆಣ್ಣು ಕೊಡಬೇಕು
ಸಮಯ ನೋಡಿ ಹಣ್ಣು ತಿನ್ನಬೇಕು
ಆದರೆ ಮನ ಬ0ದಾಗ ಕವಿತೆ ಬರೆಯಬೇಕು
-ರೇವಿನಾ
No comments:
Post a Comment