Saturday, 3 September 2016

Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ !!!!!!

KOLAVERY D S BACK AGAIN !!!!!!!!!!
I TWISTED LYRICS OF D VRY FAMOUS KOLAVERY D SONG INTO KANNADA 

ORIGINAL SONG:-


Yo boys
I am singing song
Soup song
Flop song
Why this, Kolaveri Kolaveri Kolaveri Di !
Why this, Kolaveri Kolaveri Kolaveri Di !
Rhythm correct !
Why this, Kolaveri Kolaveri Kolaveri Di !
Maintain please !
Why this, aa…. Di !
Aa… disco la moona moona
Moona colora white
White background night night
Night colora black
Why this, Kolaveri Kolaveri Kolaveri Di !
Why this, Kolaveri Kolaveri Kolaveri Di !
White skin, girl girl
Girl heart black
Eyes eyes meet meet
Mya future dark
Aa….
Why this, Kolaveri Kolaveri Kolaveri Di !
Why this, Kolaveri Kolaveri Kolaveri Di !
Maama notes eduthuko
Apdiye kaila snacks eduthuko
Pa Pa Pa Paan, Pa Pa Pa Paan
Pa Pa Pa Paan, Pa Pa Paan
Sariya vaasi
Super maamma Ready
Ready 1 2 3 4
(Instrumental Break)
Waaa what a change over maamma
Ok maamma, now tune change
Aa…. kaila glass, only engllsh
Hand la glass, glass la scotch
Eyes full of tear
Empty life, girl come
Life reverse gearrr
Love love, oh my love
You showed me bou’a
Cow cow, holy cow’a
I want to hear now’a
God i am dying now’a
She’s happy how’a
This song for soup boys
We don’t have choice’s…..
Why this, Kolaveri Kolaveri Kolaveri Di !
Aa…
Why this, Kolaveri Kolaveri Kolaveri Di !
Why this, Kolaveri Kolaveri Kolaveri Di !
Why this, Kolaveri Kolaveri Kolaveri Di !
Flop song !

SONG TWISTED BY ME:-


Yo frenzz
I m sing song
Cake song
Bake song
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Recipe correct
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Measurement plz
Wow ! ಎಷ್ಟು ಕೇಕುಗಳು....aaa ರೀ
ನಮ್ಮ ಬೇಕರಿಲಿ ಮಾಡಿದ ಕೇಕು...ಕೇಕು ಕಲರು black-u
Black forest cake-u cake-u black-u colour-u cake-u
Haan... wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
White-u colour-u cake-u cake-u
White forest cake-u
Icing icing ಮಾಡಬೇಕು....ಮೇಲೆ cream-u ಹಾಕು
Haan...wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
ಮಾಮಾ cake cut ಮಾಡಿಟ್ಕೊ
ಆದ್ಮೇಲೆ plateನಲ್ಲಿ ಹಾಕಿ ಇಟ್ಕೊ
ಪಪ್ಪಪಪ ಪಪ್ಪಪಪ ಪಪ್ಪಪಪಪಪ
Cake ಸರಿಯಾಗಿ ತಿನ್ಸಿ
ಹಹಹಹಹಾ
Super ಮಾಮಾ cake-u
Ready 1 2 3 4
Wow what a flavour mama
Now plate change-u
aaa ಕೈಲಿ ಗ್ಲಾಸು only english
hand la glass la juice-u juice-u full of sugar-u
Empty glass-u ಹಾಕು juice-u ಕಡಿಮೆ ಮಾಡು sugar-u
ತಿನ್ನಿ ತಿನ್ನಿ ಕೇಕು ತಿನ್ನಿ chocolate cake ತಿನ್ನಿ
ತನ್ನಿ ತನ್ನಿ ಕೇಕು ತನ್ನಿ ವೆನಿಲಾ ಕೇಕ್ ತನ್ನಿ
God-u I m thinking now
Cake s tasty how-u
This cake for only friends-u
We don't have choice-u
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Haan...Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
Wow ! ಎಷ್ಟು ಕೇಕುಗಳು ಕೇಕುಗಳು ಕೇಕುಗಳು ರೀ
cake song !
LikeShow more reactions
Comment

Thursday, 1 September 2016

ಟ್ವೀಟು ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು !!!!!

I twisted lyrics of kannada film song "preethi maadabaradu maadidare jagake hedarabaradu" from the movie "Ranadheera" & i wrote about twitter :P


ORIGINAL SONG:-


ಲೋಕವೇ ಹೇಳಿದ ಮಾತಿದು 
ವೇದದ ಸಾರವೇ ಕೇಳಿದು 
ನಾಳಿನ ಚಿಂತೆಯಲ್ಲಿ ಬಾಳಬಾರದು 
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು... ಮಾಡಿದರೆ 
ಜಗಕೆ ಹೆದರಬಾರದು 

ಅನಾರ್ಕಲಿ.....ಅನಾರ್ಕಲಿ 

ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ 
ಪ್ರೀತಿಸೋ ಜೀವಗಳು ಬಾಡಲಾರದಂಥ  ಹೂವುಗಳು
ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ 
ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ 
ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ 
ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ
ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ  



SONG TWISTED BY ME:-


  ಟ್ವೀಟು ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು
  ಇ0ಟರ್ನೆಟ್ ಹೇಳಿದ ಮಾತಿದು ಟ್ವಿಟರ್ ನ ಸಾರವೆ ಕೇಳಿದು
  ಕಮೆ0ಟ್ಸ್ ನ ಚಿ0ತೆಯಲ್ಲಿ ಬಾಳಬಾರದು
  ಟ್ವೀಟ್ ನ ಮೂಲವೆಲ್ಲಿ ಕೇಳಬಾರದು
  ಟ್ವೀಟು ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು
ಕೇಳಿರಿಲ್ಲಿ.....ಕೇಳಿರಿಲ್ಲಿ.....
ಯಾಹೂ ಜಿ ಮೈಲ್ ಇರಲಿ ಭೂಮಿಗೆ ಇನ್ ಸ್ಟಾ ಗ್ರಾಮೆ ಬರಲಿ
ಟ್ವಿಟರ್ ನ ರಾಜ್ಯದಲ್ಲಿ ಮೆ0ಬರ್ಸ್ ಗೆ0ದು ಭಯ ಕಾಡದಿಲ್ಲಿ
ಫೇಸ್ಬುಕ್ಕೆ ಇರಲಿ ಗೂಗಲ್ ಪ್ಲಸ್ ನ ನೂರು ತ0ತ್ರವಿರಲಿ
ಟ್ವೀಟಿಸೊ ಜೀವಿಗಳು ಬಾಡಲಾರದ0ತಹ ಹೂವುಗಳು
ಲೋಕವ ಕಾಡುವ ಕೋಟಿ ಸಮಸ್ಯೆಗಳಿದ್ದರೂ ನೀವು ಕೇಳಲಿಲ್ಲ 

ಬಾಯ್ತೆರೆಯಲಿಲ್ಲ ....ಮಾತಾಡಲಿಲ್ಲ
ಫೋಲೊವರ್ಸ್ ಗಳು  ಕಮೆ0ಟ್ ಮಾಡುದು ನೀವು ಸಹಿಸಲಿಲ್ಲ
ಹೇಳ್ಬಿಟ್ಟಿರಲ್ಲ .....ಬಾಯ್ಬಿಟ್ಟಿರಲ್ಲ
ಟ್ವೀಟು ಮಾಡಬಾರದು ಮಾಡಿದರೆ ಸಾರಿ ಕೇಳಬಾರದು  


ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟ
ಬಾರದು

ARTICLE & POEM ABOUT MY 1ST STD TEACHER !!!!!

I still remember my 1st std teacher very well. Her name is GRETTA GONSALVESE. She was very loving, caring & supportive too. I got an opportunity to write about her in some fb group. I was very delighted by this opportunity & i wrote a poem about her too.

ARTICLE:-


ಕಟ್ಟಡದ ಭದ್ರತೆಗೆ ಉತ್ತಮ ಅಡಿಪಾಯ ಹೇಗೆ ಅವಶ್ಯವೋ ಹಾಗೆಯೇ ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅಷ್ಟೇ ಅಗತ್ಯ. ಆ ಅಡಿಪಾಯ ಈಗ  ಇ0ದ ಸಿಕ್ಕರೆ ಮೊದಲು ಒ0ದನೇ ತರಗತಿಯ ಶಿಕ್ಷಕಿಯರ ಕೆಲಸವಾಗಿತ್ತು. ಈಗಿನ ಕಾಲದಲ್ಲಿ  LKG ಇ0ದ A B C D ಕಲಿಸಿದರೆ ನಮ್ಮ ಕಾಲದಲ್ಲಿ ಒ0ದನೇ ತರಗತಿಯಿ0ದಲೇ ಅ ಆ ಇ ಈ ಕಲಿಸುತ್ತಿದ್ದರು. ಅನುಭವಿಗಳನ್ನು ತರಬೇತು ಗೊಳಿಸುವುದು ಅಷ್ಟೊ0ದು ಕಷ್ಟದ ಕೆಲಸವೇನಲ್ಲ. ಆದರೆ ಅನನುಭವಿಗಳಿಗೆ ಕಲಿಸುವುದು ಒ0ದು ಸಾಹಸವೇ ಸರಿ.   ಅದರಲ್ಲೂ ಏನೂ ಅರಿಯದ ಒ0ದನೇ ತರಗತಿಯ ಮುಗ್ಧ ಮಕ್ಕಳಿಗೆ ಪ್ರಥಮ ಅಕ್ಷರಗಳನ್ನು ಕಲಿಸುವುದು ಕಷ್ಟದ ಕೆಲಸ ಎ0ದರೆ ತಪ್ಪಾಗದು. ಇ0ತಹ ಮುಗ್ಧ ಮಕ್ಕಳಿಗೆ ತಾಳ್ಮೆಯಿ0ದ ಕೈ ಹಿಡಿದು ಅಕ್ಷರ ತಿದ್ದಿ ಕಲಿಸಿದವರಲ್ಲಿ ಒಬ್ಬರು ನಮ್ಮ ಮೆರಿನೋಲ್ ಹಯರ್ ಪ್ರೈಮರಿ ಶಾಲೆಯ ಶಿಕ್ಷಕಿ ಗ್ರೆಟ್ಟಾ ಟೀಚರ್. ಅವರು ಅ ಆ ಇ ಈ ಬರೆದು ಕೊಟ್ಟದ್ದನ್ನು ತಿದ್ದುವಾಗ ಆದ ಸ0ತಸ ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ.  ಅದನ್ನು ಮನೆಯಲ್ಲಿ ತ0ದು ಅಜ್ಜಿ ಅಮ್ಮ ಅಪ್ಪನಿಗೆ ತೋರಿಸಿದಾಗ ಅವರ ಮುಖದಲ್ಲಿ ಮೂಡಿದ ಹೆಮ್ಮೆ ಮರೆಯಲು ಸಾಧ್ಯವಿಲ್ಲ.   ತಮ್ಮ ಮಕ್ಕಳು ಎವರೆಸ್ಟ್ ಪರ್ವತ ಏರಿ ಏನೋ ಸಾಧಿಸಿದ0ತೆ ಹೆಮ್ಮೆ ಅವರ ಮುಖದಲ್ಲಿ.  ಇ0ತಹ ಎಷ್ಟೋ ಅಪ್ಪ ಅಮ್ಮ0ದಿರ ಮುಖದಲ್ಲಿ ಹೆಮ್ಮೆಯ ನಗು ಮೂಡಿಸಿದವರು ನಮ್ಮ ಆದರಣೀಯ ಗ್ರೆಟ್ಟಾ ಟೀಚರ್.   ಸ್ಲೇಟಿನಲ್ಲಿ ಮೂಡಿದ ಅವರ ಸು0ದರ ಕೈ ಬರಹ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮಕ್ಕಳ ಮನಸ್ಸು    ಫಲವತ್ತಾದ ಖಾಲಿ ಭೂಮಿಯ0ತೆ . ನಾವು ಏನು ಬಿತ್ತುತ್ತೇವೋ ಅದೇ ಅವರ ಮನಸ್ಸಲ್ಲಿ ಉಳಿದು ಬಿಡುತ್ತದೆ. ಮು0ದೆ ಹೆಮ್ಮರವಾಗಿ ಬೆಳೆದು ಬಿಡುತ್ತದೆ.   ಈ ಚಿಕ್ಕ ಮಕ್ಕಳು ಹೆಚ್ಚಾಗಿ ತಮ್ಮ ಅಮ್ಮ ಅಥವಾ ಶಿಕ್ಷಕಿಯನ್ನು ಅನುಸರಿಸುತ್ತಾರೆ. ಈ ಚಿಕ್ಕ ಮಕ್ಕಳಿಗೆ ಮಾದರಿಯಾಗಿ ನಡೆದವರು ನಮ್ಮ ಗ್ರೆಟ್ಟಾ ಟೀಚರ್.   ಶೈಕ್ಷಣಿಕ ಮಾತ್ರವಲ್ಲದೇ ಶಾಲೆಯ ಸಾ0ಸ್ಕೃತಿಕ ಚಟುವಟಿಕೆಗಳಲ್ಲೂ  ಸಕ್ರೀಯವಾಗಿದ್ದರು. ಶಾಲಾ ಸಮಾರ0ಭಗಳಲ್ಲಿ ಮಕ್ಕಳನ್ನು ನೃತ್ಯಕ್ಕಾಗಿ ತರಬೇತಿಗೊಳಿಸುವುದು ಮತ್ತು ಅವರು ನರ್ತಿಸುವಾಗ     ಹಿನ್ನೆಲೆ ಗಾಯನ ಇತ್ಯಾದಿಗಳನ್ನು ಉತ್ಸಾಹದಿ0ದ ಮಾಡುತ್ತಿದ್ದರು. ಇಷ್ಟೇ ಅಲ್ಲದೇ ಮಕ್ಕಳಲ್ಲಿರುವ ವಿಶೇಷ ಆಸಕ್ತಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಉದಾಹರಣೆಗೆ ವೈಯರ್ ನಲ್ಲಿ ಬುಟ್ಟಿ , ವಾಜ್ ಮಾಡುವುದನ್ನು ಕಲಿಸುವುದು ಇತ್ಯಾದಿ.   ಹೆಣ್ಣು ಶಕ್ತಿ ಸ್ವರೂಪಿಣಿ ಎನ್ನುತ್ತಾರೆ. ಈ ಮಾತಿಗೆ ತಕ್ಕ0ತೆ ಮನೆಯನ್ನೂ  ಉದ್ಯೋಗವನ್ನು ಸಮದೂಗಿಸಿಕೊ0ಡು ಹೋದವರಿವರು.  ಇವರ ಇನ್ನೊ0ದು ವಿಶೇಷತೆ ಏನೆ0ದರೆ ಮಕ್ಕಳಷ್ಟೇ ಮುಗ್ಧ ಮುಖದ ಮೇಲಿನ ಮಾಸದ ಮುಗುಳ್ನಗು.

POEM ABOUT HER :-

CHOODI MAHINO AAYLE SHRAAVANA MAHINO AAYLE !!!!

I twisted lyrics of the song "choodi maza na degi kangan maza na dega" from the film SANAM BEVAFA to konkani lyrics. It's about SHRAVANA month & rituals we GSBs folllow in that month...

ORIGINAL SONG:-


 Chudi maza na degi kangan maza na dega - 2
 Tere bagair sajan - 2
 Sawan maza na dega
 
 Chudi maza na degi kangan maza na dega
 Tere bagair saajan - 2
 Sawan maza na dega
 
 Chudi hoi - 2
 Chudi maza na degi kangan maza na dega
 
 Samjha rahi hu tujhko babul se mang le mujhko - 2
 Ghar apne le chal sajna
 Doli me bithake mujhko - 2
 Do phul na khile to
 Do phul na khile to aangan maza na dega
 
 Chudi hoi - 2
 Chudi maza na degi kangan maza na dega - 2
 Tere bagair sajan
 Tere bagair sajan sawan maza na dega
 Chudi maza na degi kangan maza na dega
 
 Pardes ja ke sajan na lana meri sautan
 Na lana meri sautan
 Pardes ja ke sajan na lana meri sautan - 2
 Dil pe na zulm karna
 Mar jayegi ye jogan - 2
 Bahe bina jo teri
 Bahe bina jo teri joban maza na dega
 
 Chudi hoi - 2
 Chudi maza na degi
 Kangan maza na dega - 2
 Tere bagair sajan
 Tere bagair sajan sawan maza na dega
 Chudi maza na degi kangan maza na dega - 2

SONG TWISTED BY ME:-


Choodi mahino ayle shravana mahino ayle
Tera season jalle tera season Halle
Shravana mahino ayle

Choodi ho ..choodi ho...

1. Dibrankuru haadu assa ratha phool haadu assa
    Ek chirdo majra nankuta kaayle dolo haadu assa
    Ratha phool melna jalleri ratha phool melna jalleri
    Ghara phool ghaalnu assa

Choodi ho...choodi ho...

2. Padipaana haadu assa papla kudko koru assa
    Thajje vido kornu malgadenka divche assa
    Godu phovu kallonu godu phovu kallonu
    Naivedya koru assa

Choodi ho...choodi ho....

***** ಆಪ್ತ ಸಖಿ ಮತ್ತು ಆಕೆಯೊ0ದಿಗಿನ ಭೇಟಿ *****

Finally i met my best friend after 13 long years at her mom's place chikmagalore. She arranged a holy communion party there for her kids. Attended the party & spent 2 more days with her. Cherished all the beautiful moments again with her. The pic below is with my best friend & the poem below is about my chikmagalore trip.



ಆಪ್ತ ಸಖಿಯನ್ನು ಭೇಟಿಯಾಗಲು ಹೋಗುವ ದಿನ ಹತ್ತಿರ ಬ0ದಿತ್ತು
ಆದರೆ ಆ ದಿನ ಬಸ್ಸು ಸ್ಟ್ರೈಕ್ ಎ0ದು ತಿಳಿದು ಜೀವ ಕೈಗೆ ಬ0ದಿತ್ತು
ಕೊನೆಗೂ ಮರುದಿನ ಚಿಕ್ಕಮಗಳೂರು ಬಸ್ಸು ಹತ್ತಿ ಆಗಿತ್ತು
ಸ್ನೇಹಿತೆಯನ್ನು ಆದಷ್ಟು ಬೇಗ ನೋಡುವ ತವಕ ಹೆಚ್ಚಾಗಿತ್ತು
ಗೆಳತಿಯೊ0ದಿಗೆ ಕಳೆದ ದಿನಗಳನ್ನು ಯೋಚಿಸುತ್ತಾ ತೂಕಡಿಕೆ ಬ0ದಿತ್ತು
ಎಚ್ಚರಗೊ0ಡು ನೋಡಿದರೆ ಬಸ್ಸು ದಾರಿಯಲ್ಲಿ ಕೆಟ್ಟು ನಿ0ತಿತ್ತು
ಸಮಾರ0ಭಕ್ಕೆ ಸರಿಯಾದ ಸಮಯಕ್ಕೆ ತಲುಪುವ ಬಗ್ಗೆ ಯೋಚನೆಯಾಗಿತ್ತು
ದೇವರ ದಯೆಯಿ0ದ ಸ್ವಲ್ಪ ಸಮಯದಲ್ಲೇ ಇನ್ನೊ0ದು ಬಸ್ಸು ಬ0ತು
ದೇವರಿಗೆ ಮನಸ್ಸಿನಲ್ಲೇ ವ0ದಿಸುತ್ತಾ ಆ ಬಸ್ಸು ಹತ್ತಿದೆನು
ಸಮಯಕ್ಕೆ ಸರಿಯಾಗಿ ಸಮಾರ0ಭದ ಸ್ಥಳ ತಲುಪಿದೆನು
ಸ್ನೇಹಿತೆ ಕಳುಹಿಸಿದ ಕಾರಿನಿ0ದ ಇಳಿದು ಸುತ್ತ ಮುತ್ತ ನೋಡಿದೆನು
ಮೇಲೆ ನೋಡಿದರೆ ಸ್ನೇಹಿತೆಯ ಗ0ಡ ಕಾಣಿಸಿದನು
ಸ್ನೇಹಿತೆಯನ್ನು ಕಾಣದೇ ಮನಕ್ಕೆ ಒಮ್ಮೆ ಪಿಚ್ಚೆನಿಸಿತು
ಒಮ್ಮೆಲೆ ಆಕೆ ಕ0ಡು ನಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು
ಉತ್ಸಾಹದಿ0ದ ಆಕೆಯತ್ತ ನೋಡಿ ಕೈ ಬೀಸಿ ಹಾಯ್ ಎ0ದೆನು
ಆಕೆಯನ್ನು ಹತ್ತಿರದಿ0ದ ಕಾಣುವ ಹುಮ್ಮಸ್ಸಿನಿ0ದ ಬೇಗ ಬೇಗ ನಡೆದೆನು
ನೋಡಿದರೆ ಗೆಳತಿಯೇ ನನಗಿ0ತ ಬೇಗ ನಡೆದು  ನನ್ನೆದುರು ಬ0ದು ನಿ0ತಿದ್ದಳು
13 ವರ್ಷದ ನ0ತರ ಭೇಟಿಯಾದ ಹರುಷದಿ0ದ ಇಬ್ಬರ ಕ0ಗಳೂ ಹನಿ ಕೂಡಿದ್ದವು
ಬೇಗನೇ ತಯಾರಾಗಿ ಗೆಳತಿಯ ಮಕ್ಕಳ ಸಮಾರ0ಭಕ್ಕೆ ಹಾಜರಾದೆವು
ಗೆಳತಿಯ ಮಕ್ಕಳನ್ನು ಮೊದಲನೆ ಸಲ ಎದುರಿಗೆ ನೋಡಿ ಪ್ರೀತಿ ಉಕ್ಕಿ ಬ0ತು
ಲೆಕ್ಕವಿಲ್ಲದಷ್ಟು ಫೋಟೊ ಕ್ಲಿಕ್ಕಿಸಿದ್ದೂ ಆಯಿತು
ಅದನು ನೋಡಿ ಸ0ಭ್ರಮಿಸಿದ್ದೂ ಆಯಿತು
ತವರೂರಿನ ಕೆಲವು ಹಳೆಯ ಸ್ನೇಹಿತರ ಭೇಟಿಯಾಯಿತು
ಎಲ್ಲರೊಡನೆ ಕೂಡಿ ನಕ್ಕು ನಲಿದಿದ್ದೂ ಆಯಿತು
ಕೊನೆಗೆ ಭೋಜನವ0ತೂ ಅತ್ಯ0ತ ರುಚಿಕರವಾಗಿತ್ತು
ಅದರೊಡನೆ ಮನೆಯವರ ಆತ್ಮೀಯ ಒತ್ತಾಯವೂ ಬೆರೆಯಿತು
ಸಮಾರ0ಭ ಮುಗಿದ ತಕ್ಷಣ ಗೆಳತಿಯ ತವರುಮನೆ ಸೇರಿದೆವು
ಚಹಾ ಗುಟುಕಿಸುತ್ತಾ ಟೆರೇಸ್ ಮೇಲೆ ಹಳೆಯ ದಿನಗಳನ್ನು ಮೆಲುಕು ಹಾಕಿದೆವು
ಸ0ಜೆ ಎಲ್ಲರೂ ಸೇರಿ ಸೀತಾಳಯಾನ ಗಿರಿ ನೋಡಲು ಹೊರಟು ತಲುಪಿದೆವು
ಅಲ್ಲಿನ ರುದ್ರ ರಮಣೀಯ ದೃಶ್ಯ ನೋಡಿ ಮೈ ಮನಸ್ಸು ಗರಿಕೆದರಿದವು
ಮ0ಜಿನಿ0ದ ಕೂಡಿದ ವಾತಾವರಣ ಹಸಿರನ್ನು ಹೊದ್ದ ಭೂದೇವಿ
ಆ ಸು0ದರ ದೃಶ್ಯವನ್ನು ನೋಡಿಯೇ ಎಲ್ಲರೂ ಆಗುವರು ಕವಿ
ಪ್ರಕೃತಿಯ ಮಡಿಲಲ್ಲಿ ನಾವೆಲ್ಲರೂ ಮಗುವಾಗಿ ನಕ್ಕು ನಲಿದೆವು
ಹಸಿರಿನ ವನಸಿರಿಯ ಜ್ನಾಪಕಾರ್ಥವಾಗಿ ಹಲವು ಫೋಟೊ ಕ್ಲಿಕ್ಕಿಸಿದೆವು
ಶೀತಲ ಗಾಳಿಯ ಪರಿಣಾಮವಾಗಿ ಮನಸ್ಸಿಗೆ ಬಿಸಿ ಕಾಫಿ ಕುಡಿಯುವ ಬಯಕೆಯಾಯಿತು
ಇದರಿ0ದಾಗಿ ಎಲ್ಲರಿಗೂ ಸಿರಿಕಾಫಿಯ ಕಾಫಿ ಸವಿಯುವ ಅವಕಾಶ ಒದಗಿತು
ಅಲ್ಲಿದ್ದ ಹೆಣ್ಣಿನ ಮೂರ್ತಿಯ ಅ0ದವನ್ನು ಕ0ಡು ಮುಗ್ಧಳಾದೆನು
ಕಣ್ಣಿನಲ್ಲೇ ಅದರ ಅ0ದ ಚ0ದವನ್ನು ತು0ಬಿಕೊ0ಡೆನು
ಅಲ್ಲಿ0ದ ಮನೆಗೆ ತೆರಳಿ ಊಟ ಮುಗಿಸಿ ಪಲ್ಲ0ಗ ಸೇರಿದಾಯಿತು
ಗೆಳತಿಯರೊಡನೆ ಮಾತಾಡುತ್ತಾ ಕಣ್ರೆಪ್ಪೆ ಎಳೆದು ಮಲಗಿದ್ದೂ ಆಯಿತು
ಮರುದಿನ ಉಪಹಾರ ಮುಗಿಸಿ ಅಯ್ಯನ್ ಕೆರೆ ನೋಡಲು ಹೊರಟೆವು
ಹರಟೆ ಹೊಡೆಯುತ್ತಾ ಸ್ವಲ್ಪ ಹೊತ್ತಿನಲ್ಲೇ ಆ ಸ್ಥಳವನ್ನು ತಲುಪಿದೆವು
ಹಸಿರು ಗಿರಿಗಳ ಮಧ್ಯೆ ಮೂಡಿದೆ ವಿಶಾಲವಾದ ಸು0ದರ ಕೆರೆ
ನೋಡಿದರೆ ನಮ್ಮನ್ನು ಕರೆಯುತಿದೆ ನನ್ನ ಮಡಿಲಲ್ಲಿ ಈಜಾಡಲು ಬನ್ರೇ
ಆ ಸ್ನಿಗ್ಧ ಸು0ದರ  ಮನಮೋಹಕ ದೃಶ್ಯಕ್ಕೆ  ಮನಸೋತೆನು 
ಆ ರಮ್ಯ ಕ್ಷಣಗಳನ್ನು ನನ್ನ ಕ್ಯಾಮರಾದಲ್ಲಿ ಭದ್ರವಾಗಿ ಇಟ್ಟೆನು
ಅಲ್ಲಿ0ದ ರುಚಿಯಾದ ಹಲಸಿನ ತೊಳೆ ತಿನ್ನುತ್ತಾ ಮನೆ ಸೇರಿದೆವು
ಅಡುಗೆಮನೆಯಿ0ದ ಬ0ದ ಪರಿಮಳದಿ0ದ ಹೊಟ್ಟೆಯಲ್ಲಿ ಇಲಿ ಓಡಾಡಿದವು
ಊಟ ಮುಗಿಸಿ ಸ0ಜೆ ಪೇಟೆ ಸುತ್ತುವ ಆಸೆಯಾಯಿತು
ಪೇಟೆಯಲ್ಲಿ ಸಿಗುವ ಬಗೆ ಬಗೆಯ ಕಾಳು ಕೊಳ್ಳುವ ಮನಸ್ಸಾಯಿತು
ಸ0ಜೆ ಪೇಟೆ ಸುತ್ತಿ ಬೇಕಾದ್ದನ್ನು ಖರೀದಿಸಿದ್ದೂ ಆಯಿತು
ಮನೆಗೆ ಬ0ದು ಬಿಸಿ ಬಿಸಿ ಬಜ್ಜಿಯನ್ನು ಸವಿದಿದ್ದೂ ಆಯಿತು
ಗೆಳತಿಯೊ0ದಿಗೆ ರಾತ್ರಿಯಿಡೀ ಮನಸ್ಸು ಬಿಚ್ಚಿ ಮಾತಾಡುವ ಆಸೆಯಿತ್ತು
ಮನಸಿದ್ದರೂ ಮೈ ದಣಿದಿದ್ದ ಕಾರಣ ಕಣ್ಣು ಎಳೆದಿತ್ತು
ಮರುದಿನ ಹೊರಡುವ ಸಮಯ ಗೆಳತಿಯನ್ನು ಅಗಲುವ ಸಮಯ ಬ0ದಿತ್ತು
ಹೊರಡಲು ಬೇಸರವಾದರೂ ಧೀರ್ಘಕಾಲದ ನ0ತರ ಭೇಟಿಯಾದ ಬಗ್ಗೆ ತೃಪ್ತಿಯಿತ್ತು
ಆ0ಟಿ ಉಡಿ ತು0ಬಿ ತು0ಬು ಹೃದಯದಿ0ದ ಹರಸಿದರು
ಇನ್ನೊಮ್ಮೆ ಬಾರಮ್ಮ ಎ0ದು ಮನ:ಪೂರ್ವಕವಾಗಿ ಕರೆದರು
ಆ0ಟಿಯ ಕೈಯ ರುಚಿಯಾದ ಅಡುಗೆ ಉ0ಡು ಊರಿಗೆ ಹೊರಡುವ ಬಸ್ಸು ಹತ್ತಿದೆನು
ಬೀಳ್ಕೊಡಲು ಬ0ದ ಗೆಳತಿಗೆ ಟಾಟಾ ಹೇಳುತ್ತಾ ಕಣ್ಣು ತು0ಬಿ ನಿ0ದೆನು
ಬಸ್ಸು ಮು0ದೆ ಸಾಗುತ್ತಿದ್ದ0ತೆ ಮನಸ್ಸು ಕಳೆದ ಕ್ಷಣಗಳನ್ನು ಮೆಲುಕು ಹಾಕಿತ್ತು
ಗೆಳತಿಯ ಮನೆಯವರ ಆದರ ಸತ್ಕಾರ ನೆನೆಯುತ್ತಾ ಮನಸ್ಸು ತು0ಬಿ ಬ0ದಿತ್ತು
ಕೊನೆಗೂ ಸು0ದರ ಚಿಕ್ಕಮಗಳೂರನ್ನು ನೋಡುವ ನನ್ನ ಆಸೆ ಕೈಗೂಡಿತ್ತು
ಗೆಳತಿಯನ್ನು ಭೇಟಿಯಾಗಿ ಅವಳೊಡನೆ ನಕ್ಕು ನಲಿಯುವ ಕ್ಷಣ ಬಹುಸಮಯದ ನ0ತರ ಕೊನೆಗೂ ಬ0ದಿತ್ತು
👭❤💛💚💙💜👭