Showing posts with label STORY. Show all posts
Showing posts with label STORY. Show all posts

Tuesday, 22 November 2016

+++++ಅಹ0ಭಾವ +++++++( ಸಣ್ಣ ಕಥೆ)

     ಆಕೆ ನೋಡುತ್ತಿದ್ದ0ತೆ ಆತ ಆಕೆಯಿ0ದ ದೂರವಾಗುತ್ತಿದ್ದ. ಕ್ರಮೇಣ ಆಕೆಯ ಕಣ್ಣಿ0ದ ಮರೆಯಾದ. ಆಕೆ ಕೇಳಿದ್ದು ಇಷ್ಟೆ " ಇಷ್ಟಕ್ಕೂ ನಾನು ನಿನಗೆ ಏನಾಗಬೇಕು?" . ಆಕೆಯ ಮನಸ್ಸು " ನೀನು ನನ್ನ ಸರ್ವಸ್ವ " ಎ0ದು ಕೇಳಲು ಹಾತೊರೆಯುತಿತ್ತು . ಆತನೋ ಅಪಾರ್ಥ ಮಾಡಿಕೊ0ಡು ವಾಗ್ವಾದಕ್ಕಿಳಿದ. ಆಕೆಯೂ ಮನಸ್ಸು ಬಿಚ್ಚಿ ಕೇಳಿದ ಕಾರಣ ಹೇಳಬಹುದಿತ್ತು. ಆತನೂ ಒಮ್ಮೆ ತಿರುಗಿ ನೋಡಿದರೆ ಆಕೆಯ ಕಣ್ಣ0ಚಿನ ಕ0ಬನಿ ಕಾಣಬಹುದಿತ್ತು. ಆಕೆಯೂ ಹೇಳಲಿಲ್ಲ, ಆತನೂ ತಿರುಗಿ ನೋಡಲಿಲ್ಲ. ಇಬ್ಬರಿಗೂ ಹಾಗೆ ಮಾಡಲು ಅಹ0ಭಾವ ಬಿಡಲಿಲ್ಲ. ಅಹ0ಭಾವದ ಕಾರಣ ಒಟ್ಟಿಗೆ ಅರಳಬೇಕಾಗಿದ್ದ ಹೂಗಳು ಅರಳುವ ಮು0ಚೆಯೇ ಮುದುಡಿ ಹೋದವು.
- ರೇವಿನಾ