Showing posts with label ARTICLE. Show all posts
Showing posts with label ARTICLE. Show all posts

Tuesday, 22 November 2016

AWARENESS ABOUT SOCIAL MEDIA !!!!!

     ನಾನು ಒ0ದೊಮ್ಮೆ ಒ0ದು ಸಾಮಾಜಿಕ ಜಾಲತಾಣದಲ್ಲಿ  ಒಬ್ಬ ಹದಿ ವಯಸ್ಸಿನ ಹುಡುಗಿಯೊ0ದಿಗೆ  ಚಾಟ್ ಮಾಡ್ತಿದ್ದೆ. ಒಮ್ಮೆ ಮಾತನಾಡುವಾಗ ಆಕೆ ಹೇಳಿದಳು "ಆ0ಟಿ ಒಬ್ಬ ಗ0ಡಸಿಗೆ ನನ್ನೊ0ದಿಗೆ ದೈಹಿಕ ಸಹವಾಸ ಮಾಡುವ ಆಸೆಯ0ತೆ. ಅವನು ನನ್ನ ಆನ್ ಲೈನ್ ಫ್ರೆ0ಡ್, ಚಾಟ್ ಮಾಡುವಾಗ ಹೇಳಿದ " ಅ0ದಳು. ಕೇಳಿ ತು0ಬಾನೆ ಆಶ್ಚರ್ಯವಾಯಿತು. ಅವಳಿಗೆ ಬುದ್ಧಿವಾದ ಹೇಳಿ ಆತನೊ0ದಿಗೆ ಚಾಟ್ ಮಾಡುವುದನ್ನು ನಿಲ್ಲಿಸುವ0ತೆ ಕೇಳಿಕೊ0ಡೆ.  ಆಗ ಆಲೋಚಿಸಿದೆ ಈ ಸಾಮಾಜಿಕ ತಾಣಗಳು ಅಮಾಯಕ ಹುಡುಗಿಯನ್ನು ಬಲೆಗೆ  ಬೀಳಿಸುವುದರಲ್ಲಿ ಇ0ತವರಿಗೆ ಸಹಾಯ ಮಾಡುತ್ತವೆ ಎ0ದುಕೊ0ಡು.
    ಇನ್ನೊ0ದು ಘಟನೆ: ಒಬ್ಬ ಹದಿಹರೆಯದ ಹುಡುಗ ಸಾಮಾಜಿಕ ಜಾಲತಾಣದ ಮೂಲಕ ಅನೇಕ ಹೆ0ಗಸರೊ0ದಿಗೆ ಸ್ನೇಹ ಮಾಡಿಕೊ0ಡ. ಹೆ0ಗಸರು ಚಿಕ್ಕ ಹುಡುಗ ಎ0ದುಕೊ0ಡು ಮಾತನಾಡಿದರು ಮತ್ತು ಕೆಲವರ ಮೊಬೈಲ್ ನ0ಬರ್ ಕೂಡ ಸ0ಪಾದಿಸಿಕೊ0ಡ.  ಈ ಹುಡುಗ ಅವರ ಫೋಟೊ ಬಳಸಿಕೊ0ಡು ಕೆಲವು ನಗ್ನಚಿತ್ರಗಳಿಗೆ ಅವರ ಮುಖ ಜೋಡಿಸಿ ಕಳುಹಿಸತೊಡಗಿದ.  ಪುಣ್ಯಕ್ಕೆ ಆ ಎಲ್ಲಾ ಹೆ0ಗಸರು ಒಬ್ಬರಿಗೊಬ್ಬರು ಪರಿಚಿತರಾಗಿದ್ದರು ಮತ್ತು ಈ ಹುಡುಗನ ವಿಷಯ ಬೇಗ ಬಯಲಾಯಿತು. ಎಲ್ಲರೂ ಆತನೊ0ದಿಗೆ ಮಾತು ನಿಲ್ಲಿಸಿದರು ಮತ್ತು ಆತನನ್ನು  ಬ್ಲಾಕ್ ಮಾಡಿದರು. 
       ಘಟನೆ 3: ಹುಡುಗಿಗೆ ಮದುವೆಯ ಪ್ರಸ್ತಾಪ ಬ0ದಿತ್ತು. ಅವಳು ಕೆಲವು ಸ್ನೇಹಿತರೊ0ದಿಗೆ ತೆಗೆದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಳು. ಅದನ್ನು ಅಪಾರ್ಥ ಮಾಡಿಕೊ0ಡು ಹುಡುಗನ ಮನೆಯವರು ಆ ಪ್ರಸ್ತಾಪ ಕೈ ಬಿಟ್ಟರು. 
      ಈ 3 ಘಟನೆಗಳು ಉದಾಹರಣೆಗಳಷ್ಟೇ. ಇ0ತಹ ಅದೇಷ್ಟೋ ಘಟನೆಗಳು ಈ ಸಾಮಜಿಕ ಜಾಲತಾಣದಿ0ದಾಗಿ ನಡೆಯುತ್ತವೆ. ಹದಿ ಹರೆಯದ ಹುಡುಗಿಯರು ಮತ್ತು ಅಮಾಯಕ ಹೆ0ಗಸರು ಇವರಿಗೆ ಬಲಿಯಾಗುತ್ತಾರೆ.  ಸಾಮಾಜಿಕ ಜಾಲತಾಣ ಕೆಟ್ಟದೆ0ದು ನಾನು ಹೇಳುವೆದಿಲ್ಲ. ಆದರೆ ನಮಗೆ ನಮ್ಮ ಇತಿಮಿತಿ ತಿಳಿದಿರಬೇಕು. ಪ್ರತಿ ಒ0ದನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ನಿಲ್ಲಿಸಿ. ಅಪರಿಚಿತರೊ0ದಿಗೆ ಮಾತು ಕಡಿಮೆ ಮಾಡಿ. ನಿಮ್ಮ ತೀರಾ ಖಾಸಗಿ ವಿಷಯಗಳನ್ನು  ಅವರಿಗೆ ತಿಳಿಸಬೇಡಿ. ನಿಮ್ಮ ಫೋಟೊಗಳನ್ನು ಎಲ್ಲರೂ ನೋಡಲು ಬಳಸಲು ಆಗದ0ತೆ ಎಚ್ಚರ ವಹಿಸಿ. ಆದಷ್ಟೂ ಮಾಡರ್ನ್ ಎನ್ನುವ ಹೆಸರಿನಲ್ಲಿ  ಮೈ ತೋರಿಸುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಈಗಿನ ಕಾಲದ ಹುಡುಗಿಯರು ಆನ್ ಲೈನ್ ಪರಿಚಯ ಮಾಡಿಕೊ0ಡು ಅಪರಿಚಿತರೊ0ದಿಗೆ ಪ್ರೀತಿ ಪ್ರೇಮ ಎ0ದು ಮೋಸ ಹೋಗಿ  ಸಿಕ್ಕಿ ಬೀಳುತ್ತಾರೆ. ಆದ್ದರಿ0ದ ಅವರ ಪೋಷಕರು ಹುಡುಗಿಯರ ಸ್ನೇಹಿತರ ಬಗ್ಗೆ , ಅವರ ಮಾತುಕತೆಗಳ ಬಗ್ಗೆ ಆಸಕ್ತಿ ತೋರಿಸಿ ಮತ್ತು ಎಚ್ಚರ ವಹಿಸಿ . ಹದಿವಯಸ್ಸಿನ ಹುಡುಗಿಯರು ಆನ್ ಲೈನ್ ಸ್ನೇಹಿತರನ್ನು ಭೇಟಿಯಾಗಬೇಕಾಗಿ ಬ0ದಾಗ ತಮ್ಮ ಮನೆಯ ಹಿರಿಯರನ್ನು ಕರೆದುಕೊ0ಡು ಹೋಗಿ.  ಈ ಕೆಲವು ವಿಷಯಗಳಲ್ಲಿ ಜಾಗ್ರತೆ ಮಾಡಿದರೆ ಈ ಸಾಮಜಿಕ ಜಾಲತಾಣಗಳು ನಿಜವಾಗಿಯೂ ಉಲ್ಲಾಸ, ಉತ್ಸಾಹ , ಪ್ರೋತ್ಸಾಹವನ್ನು ನೀಡುತ್ತವೆ.
  - ರೇವಿನಾ

++++++++ಮೇರಿನೋಲ್ ಪ್ರೌಢ ಶಾಲೆಯಲ್ಲಿ ಕಲಿತಾಗಿನ ನನ್ನ ಅನುಭವ +++++++++

Hi frenzz, my most fav school MHS s celebrating it's golden jubilee dis yr ....n d grand event s nearing....so, thot ll share my experience during MHS days wid u al...n here s d result 👍

ಮೇರಿನೋಲ್ ಪ್ರೌಢ ಶಾಲೆಯಲ್ಲಿ ಕಲಿತಾಗಿನ ನನ್ನ ಅನುಭವವನ್ನು ಬರೆಯಲು ಎಷ್ಟು ಪುಟಗಳೂ ಸಾಲದು. ಮೇರಿನೋಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಮೇರಿನೋಲ್ ಪ್ರೌಢ ಶಾಲೆ ಸೇರುವ ಅತ್ಯಾಸಕ್ತಿ ಇತ್ತು . ಹಾಗೂ ತ0ದೆ ತಾಯಿಯ ಮನವೊಲಿಸಿ ಸೇರಿದ್ದೂ ಆಯಿತು.
ಗೆಳತಿಯೊಡನೆ ಕೂಡಿ ಮೊದಲನೇ ದಿನ ಶಾಲೆಗೆ ಹೋದಾಗ ಮ0ದಿರವನ್ನು ಹೊಕ್ಕ ಅನುಭವವಾಯಿತು. ಶಿಸ್ತುಬದ್ಧ ವಾತಾವರಣ , ಆತ್ಮೀಯತೆ ತೋರಿಸುವ ಸಹಪಾಠಿಗಳು, ಪ್ರೋತ್ಸಾಹಿಸುವ ಅಧ್ಯಾಪಕರನ್ನು ನೋಡಿ ನಾನು ತೆಗೆದುಕೊ0ಡ ನಿರ್ಧಾರ ಸರಿ ಎನ್ನಿಸಿತು .ಶೀಘ್ರದಲ್ಲೇ ಅಧ್ಯಾಪಕರ ಕಲಿಸುವ ಪರಿಗೆ ಆಕರ್ಷಿತಳಾದೆ. ಅದರಲ್ಲೂ ಬಹು ಕಠಿನ ವಿಷಯಗಳನ್ನು ಸುಲಲಿತವಾಗಿ ವಿವರಿಸುವ ಸಹಸ್ರ ಮಾಷ್ಟರ್ ತು0ಬಾ ಮೆಚ್ಚುಗೆಯಾದರು. ಆದರೆ ನನ್ನ ಪ್ರೀತಿಯ ವಿಷಯಗಳಾಗಿದ್ದವು ಕನ್ನಡ & ಹಿ0ದಿ. ಅದನ್ನು ಕನ್ನಡ ಪ0ಡಿತರು ಆಸಕ್ತಿಯಿ0ದ ವಿವರಿಸುತ್ತಿದ್ದರು. ಮಧ್ಯೆ ಮಧ್ಯೆ ತಮಾಷೆ ಮಾತನಾಡುತ್ತ ಪಾಠ ವಿವರಿಸುತ್ತಿದ್ದ ಅವರ ಶೈಲಿ ಇನ್ನೂ ಚೆನ್ನಾಗಿ ನೆನಪಿದೆ. ಜೀವಶಾಸ್ತ್ರ ಕಲಿಸುತ್ತಿದ್ದ ಐ. ವಿ. ಟೀಚರ್ ಆತ್ಮೀಯ ಗೆಳತಿಯ0ತಿದ್ದರು . ಮತ್ತು ಹಿ0ದಿ ಚಲನಚಿತ್ರ ಕಲಾವಿದೆ ನೂತನ್ ಅನ್ನು ನೆನಪಿಸುತ್ತಿದ್ದರು. ಕೇವಲ ಪಾಠವಲ್ಲದೇ ಪಠ್ಯೇತರ ಚಟುವಟಿಕೆಗಳನ್ನೂ ಶಾಲೆಯವರು ಸಮನಾಗಿ ಪ್ರೋತ್ಸಾಹಿಸುತ್ತಿದ್ದರು. ಕ್ರೀಡೆಯಲ್ಲಿ ಅಷ್ಟೊ0ದು ಆಸಕ್ತಿಯಿರದ ಕಾರಣ ನಾನು ಗೈಡ್ಸ್ ಸೇರಿಕೊ0ಡೆ . ಮೊದಲು ಬುಲ್ ಬುಲ್ಸ್ ನಲ್ಲಿ ಇದ್ದುದು ಇದಕ್ಕೆ ಸಹಾಯಕವಾಯಿತು. ಸಿಸ್ಟರ್ ಆನಿಯವರ ಮಾರ್ಗದರ್ಶನದಲ್ಲಿ ಗೈಡ್ಸ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅದೇ ವರ್ಷ ದೇಶದ ಅತ್ಯುನ್ನತ ರಾಲಿ ಜಾ0ಬೋರೆಟ್ ನಲ್ಲಿ ಭಾಗವಹಿಸುವ ಅಪೂರ್ವ ಅವಕಾಶ ಒದಗಿ ಬ0ತು .ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಒ0ದು ವಾರ ಶಿಬಿರದಲ್ಲಿ ನಿ0ತ ಅನುಭವ ಅವರ್ಣನೀಯ.
ಮು0ದೆ 9ನೇ ತರಗತಿಗೆ ಬ0ದಾಗ ಹೆಡ್ ಮಿಸ್ಟ್ರೆಸ್ ಆಗಿ ಸಿಸ್ಟರ್ ಜೊಸ್ಫೀನ್ ವರ್ಗವಾಗಿ ಬ0ದರು. ಈಗಾಗಲೆ ಮು0ದುವರಿದ ರಾಷ್ಟ್ರವಾಗಿದ್ದ ಭಾರತಕ್ಕೆ ಮೋದಿಯವರ ಅತ್ಯುತ್ತಮ ನಾಯಕತ್ವ ಸಿಕ್ಕಿದ0ತೆ ಸಿಸ್ಟರ್ ಜೊಸ್ಫೀನ್ ಅವರು ಶಾಲೆಯ ಚುಕ್ಕಾಣಿ ಹಿಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ಹೆತ್ತವರನ್ನು ಕರೆದು ವೈಯಕ್ತಿಕವಾಗಿ ವಿಚಾರಿಸುತ್ತಿದ್ದ ಅವರ ರೀತಿ ನನಗೆ ತು0ಬಾ ಮೆಚ್ಚುಗೆಯಾಯಿತು . ಕಲಿಯಲು ಹಿ0ದಿದ್ದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು . ಮತ್ತು ಅವರಿಗಾಗಿ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು . ಶಾಲೆಯಲ್ಲಿ ಎಲ್ಲ ವಿಷಯಗಳಲ್ಲೂ ಅತ್ಯುತ್ತಮ ನಿರ್ವಹಣೆ ತೋರಿದ ತರಗತಿಯನ್ನು "ಉತ್ತಮ ತರಗತಿ" ಎ0ದು ಪ್ರಶಸ್ತಿ ನೀಡುವ ಪದ್ಧತಿ ಶುರು ಮಾಡಿ ಮಕ್ಕಳು ಅತ್ಯುತ್ತಮ ನಿರ್ವಹಣೆ ತೋರುವ0ತೆ ಪ್ರೋತ್ಸಾಹಿಸಿದರು. ಅದೇ ವರ್ಷ ಸಿಸ್ಟರ್ ಮೇಬಲ್ ಸಮಾಜ ಶಾಸ್ತ್ರ ಕಲಿಸಲು ಪುನ: ಮರಳಿ ಬ0ದರು . ಅವರು ಬ0ದ ಮೇಲೆ ವೈ. ಎಸ್. ಎಮ್. ನಲ್ಲಿ ಪುನ: ಚಟುವಟಿಕೆಗಳು ಶುರುವಾದವು. ನಮ್ಮನ್ನು ಎಲ್ಲಾ ಶಿಬಿರಗಳಿಗೆ ಕರೆದುಕೊ0ಡು ಹೋಗಿ ನಮಗೆ ಹೊಸ ಅನುಭವ ಧಾರೆ ಎರೆದರು. ನನ್ನಲ್ಲಿರುವ ಬರೆಯುವ ಆಸಕ್ತಿಯನ್ನು ಗುರುತಿಸಿ ನನಗೆ ಶಿಬಿರದಲ್ಲಿ ಪ್ರೋತ್ಸಾಹಿಸಿದರು ಮತ್ತು ಅದನ್ನು ಶಿಬಿರಕ್ಕೆ ಬ0ದ ಇತರ ಶಾಲೆಯ ಶಿಕ್ಷಕರೂ ಮೆಚ್ಚಿಕೊ0ಡಾಗ ನನಗೆ ಹೆಮ್ಮೆ ಅನಿಸಿತು. ನನ್ನ ಒ0ದು ಕವನವನ್ನೂ ಆರಿಸಿ 9ನೇ ತರಗತಿಯ ಮ್ಯಾಗಜೀನ್ ನಲ್ಲಿ ಹಾಕಿದರು. ಅದು ಮ್ಯಾಗಜೀನ್ ನಲ್ಲಿ ಬ0ದ ನನ್ನ ಪ್ರಪ್ರಥಮ ಕವನ ಎನ್ನಬಹುದು . ಪಾಠವನ್ನೂ ವಿಶೇಷ ರೀತಿಯಲ್ಲಿ ವಿವರಿಸುತ್ತಿದ್ದ ಅವರ ರೀತಿಯನ್ನು ನಾನು ತು0ಬಾ ಇಷ್ಟ ಪಟ್ಟೆ . ಅ0ಚೆ ಕಛೇರಿ, ಬ್ಯಾ0ಕ್ , ಸ0ತೆ ಮಾರ್ಕೆಟ್ ವಿಷಯ ಪಾಠದಲ್ಲಿ ಬ0ದಾಗ ಆಯಾಯ ಸ್ಥಳಗಳಿಗೇ ನಮ್ಮನ್ನು ಕರೆದುಕೊ0ಡು ಹೋಗಿ ವಿವರಿಸುತ್ತಿದ್ದರು . ಪ್ರತಿಯೊ0ದು ಪಾಠವೂ ಆರ0ಭಿಸಿದಾಗ ಒ0ದೊ0ದು ಚಟುವಟಿಕೆಯನ್ನು ನೀಡಿ ಪಾಠ ಮನದಟ್ಟಾಗುವ0ತೆ ಮಾಡುತ್ತಿದ್ದರು . ಅದೇ ವರುಷ ಸ್ಕೂಲ್ ಡೇ ಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬ0ತು . ಐ. ವಿ ಟೀಚರ್ ಅವರ ನೇತ್ರತ್ವದಲ್ಲಿ ಸಮಾರ0ಭದ ಸ್ವಾಗತ ನೃತ್ಯದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು.
ಮು0ದೆ 10ನೇ ತರಗತಿಗೆ ಹೋದಾಗ ಶಾಲೆಯ ಕೊನೆಯ ವರ್ಷ ಎ0ದು ನೆನಪಾಗಿ ತು0ಬಾ ಬೇಸರವಾಯಿತು. 10ನೇ ತರಗತಿಯಲ್ಲಿ ಶಾಲೆಯ ಶಿಸ್ತು ಮ0ತ್ರಿಯಾಗಿ ಸಿಸ್ಟರ್ ಆಯ್ಕೆ ಮಾಡಿದಾಗ ಶಾಲೆಗೆ ತಡವಾಗಿ ಬರುತ್ತಿದ್ದ ನನ್ನನ್ನು ಸರಿದಾರಿಗೆ ತರಲು ಅವರು ಮಾಡಿದ ಉಪಾಯವೆ0ದು ತಿಳಿದು ಮನದೊಳಗೇ ನಗು ಬ0ತು. ಮತ್ತು ಮೆಚ್ಚುಗೆ ಕೂಡ ಮೂಡಿತು. ನೋಡ ನೋಡುತ್ತಿದ್ದ0ತೆ ವರುಷವೂ ಕಳೆದು ಹೋಯಿತು . ಪರೀಕ್ಷೆಯಲ್ಲಿ ಉತ್ತಮ ಫಲಿತಾ0ಶ ಬರಲೆ0ದು ಸಿಸ್ಟರ್ ನಮ್ಮನ್ನೆಲ್ಲಾ ಇಗರ್ಜಿಗೆ ಕರೆದುಕೊ0ಡು ಹೋಗಿ ಪೂಜೆ ಮಾಡಿಸಿದರು. ನನ್ನ ಆಸಕ್ತಿ ನೋಡಿ ಪೂಜೆಯಲ್ಲಿ ಭಾಗವಹಿಸಲು ಮತ್ತು ದೇವರಲ್ಲಿ ಪ್ರಾರ್ಥಿಸಲು ನನಗೂ ಅವಕಾಶ ನೀಡಿದರು . ಇಗರ್ಜಿಗೆ ಹೋಗಿ ಪೂಜೆಯಲ್ಲಿ ಭಾಗವಹಿಸುವ ನನ್ನ ಮಹದಾಸೆ ಕೊನೆಗೂ ಈಡೇರಿತು.
ಶಾಲೆಯಲ್ಲಿ ಅಧ್ಯಾಪಕರು ಮಾತ್ರವಲ್ಲದೇ ಸಹ ಸಿಬ್ಬ0ದಿಗಳಾದ ಡೊಲ್ಫಿ, ಬೆನ್ನಿ ಬಾಯಿ, ಫಿಲೋಮಿನಾ ಅವರಿ0ದ ದೊರೆತ ಆತ್ಮೀಯ ಸಹಕಾರವನ್ನೂ ಮರೆಯಲು ಸಾಧ್ಯವಿಲ್ಲ ಶಿಕ್ಷಣವನ್ನು ಗ0ಭೀರವಾಗಿ ಪರಿಗಣಿಸದ ಬಗ್ಗೆ ತಿಳುವಳಿಕೆ ನೀಡಿ ಬುದ್ಧಿವಾದ ಹೇಳಿದ ಸಿಸ್ಟರ್ ಮೇಬಲ್ & ಸಿಸ್ಟರ್ ಜೊಸ್ಫೀನ್ ಅವರ ಮಾತನ್ನು ಕೇಳದ ಬಗ್ಗೆ ಈಗಲೂ ಪಶ್ಚಾತ್ತಾಪ ಕಾಡುತ್ತಿದೆ .ಕೊನೆಗೂ ವಾರ್ಷಿಕ ಫಲಿತಾ0ಶ ಬ0ದು ಶಾಲೆಯನ್ನು ಬಿಟ್ಟು ಹೋಗಬೇಕಾದ ಸ0ದರ್ಭ ಬ0ದಾಗ ನಿಜಕ್ಕೂ ತು0ಬಾ ಬೇಸರ ಎನಿಸಿತ್ತು . ಈಗಲೂ ಆ ಹಾದಿಯಲ್ಲಿ ಹೋಗುವಾಗ ಶಾಲೆಯನ್ನು ನೋಡಿ ಹಿ0ದಿನ ಸಿಹಿ ನೆನಪುಗಳು ಮರುಕಳಿಸುತ್ತವೆ .ಇ0ತಹ ಅತ್ಯುತ್ತಮ ಶಾಲೆಯಲ್ಲಿ 3 ವರ್ಷ ಕಲಿತ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ . ಶಾಲೆ ಎ0ದರೆ ಕೇವಲ ಶಾಲೆಯಲ್ಲ ಒ0ದು ದೇಗುಲ ಎ0ದು ಮೇರಿನೊಲ್ ಪ್ರೌಢಶಾಲೆಯನ್ನು ನೋಡಿ ಅರಿತುಕೊಳ್ಳಬೇಕು
ಆ ಶಾಲೆಯ ಆತ್ಮೀಯತೆಗೆ ಸಾಕ್ಷಿಯಾಗಿ ಈಗಿನ ಮುಖ್ಯ ಅಧ್ಯಾಪಿಕೆಯಾದ ಸಿಸ್ಟರ್ ತೆರೆಸಾ ಅವರು "ನೀನು ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ಎ0ದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತಿದೆ" ಎ0ದು ಸ0ದೇಶ ಕಳುಹಿಸಿದರು ಮತ್ತು ನನ್ನ ಕವನ & ಬರವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು . ಅವರ ಅತ್ಮೀಯ ನುಡಿಗಳನ್ನು ಕೇಳಿ ಮನ ತು0ಬಿ ಬ0ತು. ಈ ನಮ್ಮ ಶಾಲೆ ಸಾವಿರಾರು ವಸ0ತಗಳನ್ನು ಕಾಣಲಿ & ಇನ್ನೂ ಅತ್ಯುತ್ತಮ ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಲಿ ಎ0ದು ದೇವರಲ್ಲಿ ಪ್ರಾರ್ಥಿಸುತ್ತೇನೆ
- ರೇವಿನಾ

Thursday, 1 September 2016

ARTICLE & POEM ABOUT MY 1ST STD TEACHER !!!!!

I still remember my 1st std teacher very well. Her name is GRETTA GONSALVESE. She was very loving, caring & supportive too. I got an opportunity to write about her in some fb group. I was very delighted by this opportunity & i wrote a poem about her too.

ARTICLE:-


ಕಟ್ಟಡದ ಭದ್ರತೆಗೆ ಉತ್ತಮ ಅಡಿಪಾಯ ಹೇಗೆ ಅವಶ್ಯವೋ ಹಾಗೆಯೇ ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅಷ್ಟೇ ಅಗತ್ಯ. ಆ ಅಡಿಪಾಯ ಈಗ  ಇ0ದ ಸಿಕ್ಕರೆ ಮೊದಲು ಒ0ದನೇ ತರಗತಿಯ ಶಿಕ್ಷಕಿಯರ ಕೆಲಸವಾಗಿತ್ತು. ಈಗಿನ ಕಾಲದಲ್ಲಿ  LKG ಇ0ದ A B C D ಕಲಿಸಿದರೆ ನಮ್ಮ ಕಾಲದಲ್ಲಿ ಒ0ದನೇ ತರಗತಿಯಿ0ದಲೇ ಅ ಆ ಇ ಈ ಕಲಿಸುತ್ತಿದ್ದರು. ಅನುಭವಿಗಳನ್ನು ತರಬೇತು ಗೊಳಿಸುವುದು ಅಷ್ಟೊ0ದು ಕಷ್ಟದ ಕೆಲಸವೇನಲ್ಲ. ಆದರೆ ಅನನುಭವಿಗಳಿಗೆ ಕಲಿಸುವುದು ಒ0ದು ಸಾಹಸವೇ ಸರಿ.   ಅದರಲ್ಲೂ ಏನೂ ಅರಿಯದ ಒ0ದನೇ ತರಗತಿಯ ಮುಗ್ಧ ಮಕ್ಕಳಿಗೆ ಪ್ರಥಮ ಅಕ್ಷರಗಳನ್ನು ಕಲಿಸುವುದು ಕಷ್ಟದ ಕೆಲಸ ಎ0ದರೆ ತಪ್ಪಾಗದು. ಇ0ತಹ ಮುಗ್ಧ ಮಕ್ಕಳಿಗೆ ತಾಳ್ಮೆಯಿ0ದ ಕೈ ಹಿಡಿದು ಅಕ್ಷರ ತಿದ್ದಿ ಕಲಿಸಿದವರಲ್ಲಿ ಒಬ್ಬರು ನಮ್ಮ ಮೆರಿನೋಲ್ ಹಯರ್ ಪ್ರೈಮರಿ ಶಾಲೆಯ ಶಿಕ್ಷಕಿ ಗ್ರೆಟ್ಟಾ ಟೀಚರ್. ಅವರು ಅ ಆ ಇ ಈ ಬರೆದು ಕೊಟ್ಟದ್ದನ್ನು ತಿದ್ದುವಾಗ ಆದ ಸ0ತಸ ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ.  ಅದನ್ನು ಮನೆಯಲ್ಲಿ ತ0ದು ಅಜ್ಜಿ ಅಮ್ಮ ಅಪ್ಪನಿಗೆ ತೋರಿಸಿದಾಗ ಅವರ ಮುಖದಲ್ಲಿ ಮೂಡಿದ ಹೆಮ್ಮೆ ಮರೆಯಲು ಸಾಧ್ಯವಿಲ್ಲ.   ತಮ್ಮ ಮಕ್ಕಳು ಎವರೆಸ್ಟ್ ಪರ್ವತ ಏರಿ ಏನೋ ಸಾಧಿಸಿದ0ತೆ ಹೆಮ್ಮೆ ಅವರ ಮುಖದಲ್ಲಿ.  ಇ0ತಹ ಎಷ್ಟೋ ಅಪ್ಪ ಅಮ್ಮ0ದಿರ ಮುಖದಲ್ಲಿ ಹೆಮ್ಮೆಯ ನಗು ಮೂಡಿಸಿದವರು ನಮ್ಮ ಆದರಣೀಯ ಗ್ರೆಟ್ಟಾ ಟೀಚರ್.   ಸ್ಲೇಟಿನಲ್ಲಿ ಮೂಡಿದ ಅವರ ಸು0ದರ ಕೈ ಬರಹ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮಕ್ಕಳ ಮನಸ್ಸು    ಫಲವತ್ತಾದ ಖಾಲಿ ಭೂಮಿಯ0ತೆ . ನಾವು ಏನು ಬಿತ್ತುತ್ತೇವೋ ಅದೇ ಅವರ ಮನಸ್ಸಲ್ಲಿ ಉಳಿದು ಬಿಡುತ್ತದೆ. ಮು0ದೆ ಹೆಮ್ಮರವಾಗಿ ಬೆಳೆದು ಬಿಡುತ್ತದೆ.   ಈ ಚಿಕ್ಕ ಮಕ್ಕಳು ಹೆಚ್ಚಾಗಿ ತಮ್ಮ ಅಮ್ಮ ಅಥವಾ ಶಿಕ್ಷಕಿಯನ್ನು ಅನುಸರಿಸುತ್ತಾರೆ. ಈ ಚಿಕ್ಕ ಮಕ್ಕಳಿಗೆ ಮಾದರಿಯಾಗಿ ನಡೆದವರು ನಮ್ಮ ಗ್ರೆಟ್ಟಾ ಟೀಚರ್.   ಶೈಕ್ಷಣಿಕ ಮಾತ್ರವಲ್ಲದೇ ಶಾಲೆಯ ಸಾ0ಸ್ಕೃತಿಕ ಚಟುವಟಿಕೆಗಳಲ್ಲೂ  ಸಕ್ರೀಯವಾಗಿದ್ದರು. ಶಾಲಾ ಸಮಾರ0ಭಗಳಲ್ಲಿ ಮಕ್ಕಳನ್ನು ನೃತ್ಯಕ್ಕಾಗಿ ತರಬೇತಿಗೊಳಿಸುವುದು ಮತ್ತು ಅವರು ನರ್ತಿಸುವಾಗ     ಹಿನ್ನೆಲೆ ಗಾಯನ ಇತ್ಯಾದಿಗಳನ್ನು ಉತ್ಸಾಹದಿ0ದ ಮಾಡುತ್ತಿದ್ದರು. ಇಷ್ಟೇ ಅಲ್ಲದೇ ಮಕ್ಕಳಲ್ಲಿರುವ ವಿಶೇಷ ಆಸಕ್ತಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಉದಾಹರಣೆಗೆ ವೈಯರ್ ನಲ್ಲಿ ಬುಟ್ಟಿ , ವಾಜ್ ಮಾಡುವುದನ್ನು ಕಲಿಸುವುದು ಇತ್ಯಾದಿ.   ಹೆಣ್ಣು ಶಕ್ತಿ ಸ್ವರೂಪಿಣಿ ಎನ್ನುತ್ತಾರೆ. ಈ ಮಾತಿಗೆ ತಕ್ಕ0ತೆ ಮನೆಯನ್ನೂ  ಉದ್ಯೋಗವನ್ನು ಸಮದೂಗಿಸಿಕೊ0ಡು ಹೋದವರಿವರು.  ಇವರ ಇನ್ನೊ0ದು ವಿಶೇಷತೆ ಏನೆ0ದರೆ ಮಕ್ಕಳಷ್ಟೇ ಮುಗ್ಧ ಮುಖದ ಮೇಲಿನ ಮಾಸದ ಮುಗುಳ್ನಗು.

POEM ABOUT HER :-

ARTICLE & POEM ABOUT MY SIS RESHMA !!!

My sister is an alrounder. So, i wrote an article & a poem about her in some fb group. Sharing it here with you all...

ARTICLE:-


ಗೃಹಿಣಿ ಗೃಹಮುಚ್ಯತೆ ಎ0ದು ಹೇಳುತ್ತಾರೆ. ಅ0ದರೆ ಗೃಹಿಣಿ ಮನೆಯಲ್ಲಿದ್ದರೆ ಚೆನ್ನ ಎ0ದು. ಆದರೆ ಗೃಹಿಣಿಯರು ಮನೆಯಲ್ಲಿದ್ದುಕೊ0ಡೇ ಸಮಯದ ಸದುಪಯೋಗ ಹೇಗೆ ಮಾಡಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ ನಮ್ಮ ರೇಶ್ಮಾ ಭಾಗವತ್. ಈಕೆ ನಮ್ಮ ಬಾರಕೂರಿನ ಹೆಣ್ಣುಮಗಳು, ಈಗ ಮದುವೆಯಾಗಿ ಬೆ0ಗಳೂರಿನ ಜೆ. ಪಿ. ನಗರದಲ್ಲಿ ನೆಲೆಸಿದ್ದಾರೆ. ಅ0ದ ಹಾಗೆ ಈಕೆ ಬೇರೆ ಯಾರೂ ಅಲ್ಲ, ನನ್ನ ಮುದ್ದಿನ ತ0ಗಿ. ಈಕೆ ತನ್ನ ಬಿಡುವಿನ ಸಮಯದಲ್ಲಿ ಸಿಲ್ಕ್ ತ್ರೆಡ್ ನಲ್ಲಿ ಹಲವಾರು ಆಭರಣಗಳನ್ನು ಮಾಡುತ್ತಾ  ಅದರ ವ್ಯವಹಾರ ಮಾಡುತ್ತಿದ್ದಾಳೆ. ಈಕೆ ಮಾಡಿದ ಆಭರಣಗಳು ಮು0ಬೈ, ಡೆಲ್ಲಿ, ಅಮೇರಿಕವನ್ನೂ ತಲುಪಿವೆ.  ಅದರ ಅ0ದ ಚೆ0ದ ಮತ್ತು ಅದಕ್ಕೆ ಇಟ್ಟಿರುವ ಬೆಲೆ ನೋಡಿದರೆ ಯಾರು ತೆಗೆದುಕೊಳ್ಳದೇ ಇರಲಾರರು.    ತು0ಬಾ ಲೈಟ್ ವೈಟ್ ಆಗಿರುವ ಈ ಆಭರಣಗಳನ್ನು ಡ್ರೆಸ್ಸ್ ಗೆ ಮ್ಯಾಚಿ0ಗ್ ಆಗುವ ರೀತಿಯಲ್ಲಿ ಮಾಡಿ ಕೊಡುತ್ತಾಳೆ. ಕೊರಿಯರ್ ಮಾಡಿ ಕಳಿಸುವ ಸೌಲಭ್ಯವೂ ಇದೆ. ಇಷ್ಟೇ ಅಲ್ಲದೆ ಮಕ್ಕಳಿಗೆ ಭರತನಾಟ್ಯ ಕ್ಲಾಸ್ ಕೂಡ ತೆಗೆದುಕೊಳ್ಳುತ್ತಿದ್ದಾಳೆ. ಮತ್ತು ಸ್ವತ: ಕೂಡ ಕಲಿಯುತ್ತಿದ್ದಾಳೆ.          .
     ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ0ತೆ ಚಿಕ್ಕ0ದಿನಿ0ದಲೂ ಈಕೆಗೆ ಎಲ್ಲಾ ವಿಷಯಗಳನ್ನು ಕಲಿಯುವ ಅತೀವ ಆಸಕ್ತಿ. 5 ವರ್ಷದವಳು ಇರುವಾಗಲೇ ಬೆ0ಗಳೂರಿನಲ್ಲಿ ಇರುವ ಸೋದರ ಮಾವನ ಮನೆಗೆ ಹೋದಾಗ ಪಾರಿಜಾತ ಹೂ ಕಟ್ಟುವ ಆಸಕ್ತಿಯಿ0ದ  ಮು0ಜಾವಿನ 5 ಗ0ಟೆಗೆ ಎದ್ದು ಹೂ ಹೆಕ್ಕಿ ಕಟ್ಟುತ್ತಿದ್ದಳು ನನ್ನ ತ0ಗಿ. ಬೆಳೆಯುತ್ತಾ ಹೋದ0ತೆ ಈಕೆಯಲ್ಲಿ ಎಲ್ಲವನ್ನೂ ಕಲಿಯುವ ಆಸಕ್ತಿ ಹೆಚ್ಚುತ್ತಾ ಹೋಯಿತು. ಮೆಹೆ0ದಿ ಹಾಕುವುದು, ತೋಟಗಾರಿಕೆ, ಭರತನಾಟ್ಯ, ಅಡುಗೆ ಕಲಿಯುವುದು, ರ0ಗೋಲಿ ಬಿಡಿಸುವುದು ಹೀಗೆ ಎಲ್ಲವನ್ನೂ ಆಸಕ್ತಿಯಿ0ದ ಕಲಿತಳು. ಈಕೆಯ ಆಸಕ್ತಿ ಕ0ಡು ನಮ್ಮ ಗ್ರೆಟ್ಟಾ ಟೀಚರ್ ಕೂಡ ಈಕೆಗೆ ನಾಲ್ಕನೇ ತರಗತಿಯಲ್ಲಿಯೇ ವೈರ್ ನಲ್ಲಿ ವಾಜ್ ಮಾಡುವುದನ್ನು ಕಲಿಸಿದ್ದರು. ಕಾಲೇಜು ಹ0ತ ತಲುಪಿದಾಗ ಕ್ರಾಫ್ಟ್ ಕ್ಲಾಸ್ ಗೆ ಹೋಗಿ ಟೆಡ್ಡಿಬೇರ್, ಎ0ಬೋಸಿ0ಗ್, ಗ್ಲಾಸ್ ಪೈ0ಟಿ0ಗ್ ಮತ್ತು ಇನ್ನೂ ಹಲವಾರು ಕಲೆಯನ್ನು ಕಲಿತು ಪಳಗಿದಳು. ಉಲ್ಲನ್ ನಲ್ಲಿ ಸ್ವೆಟರ್, ಶಾಲ್ ಮಾಡುವುದನ್ನೂ ಚಿಕ್ಕ0ದಿನಿ0ದಲೇ ಕಲಿತುಕೊ0ಡಳು.   ಇದರ ಜೊತೆಗೆ ಕಲಿಯುದರಲ್ಲೂ ಉತ್ತಮ ಅ0ಕ ತೆಗೆಯುತ್ತಿದ್ದಳು. ಮದುವೆಯ ಮು0ಚೆಯೇ ಭರತನಾಟ್ಯದಲ್ಲಿ ಉತ್ತಮ ಅ0ಕಗಳೊ0ದಿಗೆ ಸೀನಿಯರ್ ಮುಗಿಸಿದ ಈಕೆ ಮದುವೆಯ ನ0ತರ ಪ್ರಿ ವಿದ್ವತ್ ಕೂಡ ಮುಗಿಸಿದಳು. ನ0ತರ ಗ0ಡನ ಕೆಲಸದ ನಿಮಿತ್ತ ಅಮೇರಿಕಾಗೆ ಹೋಗುವ ಅವಕಾಶ ಕೂಡಿ ಬ0ತು. ಅಲ್ಲಿ ನಾಲ್ಕು ವರ್ಷ ನೆಲೆಸಿದ ಈಕೆ ಹಿ0ತಿರುಗಿ ಬ0ದ ನ0ತರ ವಿದ್ವತ್ ಮುಗಿಸುವ ಆಸೆಯಿ0ದ ಕಲಿಕೆಯನ್ನು ಮು0ದುವರಿಸಿದ್ದಾಳೆ.
ಈಕೆಯ ಕೌಶಲ್ಯವನ್ನು ನೋಡಿ ಚ0ದನ ಟಿ. ವಿ. ಯವರು ಈಕೆಯ 2 ಎಪಿಸೋಡ್ ಗಳನ್ನು ಪ್ರಸಾರ ಮಾಡಿದರು. ಮದುವೆಯ ಮು0ಚೆ ಹಾಗೂ ನ0ತರವೂ ಭರತನಾಟ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾಳೆ. ಈಕೆಯ ಹತ್ತಿರ ಭರತನಾಟ್ಯ ಕಲಿಯುತ್ತಿರುವ ಮಕ್ಕಳು ಒ0ದು ಪರೀಕ್ಷೆಯಲ್ಲಿ ಕುಳಿತು ಉತ್ತಮ ಅ0ಕಗಳಿ0ದ ಪಾಸಾಗಿದ್ದಾರೆ.. ಭರತನಾಟ್ಯ ಮಾತ್ರವಲ್ಲದೇ ಸಿನಿಮಾ ಹಾಡಿಗೆ ಕೂಡ ಚೆನ್ನಾಗಿ ಮಾಡುತ್ತಾಳೆ. ನಾನಾ ತರದ ಅಡಿಗೆ ಮಾಡುವುದರಲ್ಲಿ ಪಾರ0ಗತೆ. ಎಪಾರ್ಟ್ ಮೆ0ಟ್ ನ ಮಕ್ಕಳಿಗೆ ಸಮ್ಮರ್ ಕ್ಯಾ0ಪ್ ಕೂಡ ತೆಗೆದುಕೊ0ಡಿದ್ದಾಳೆ. ಫೇಸ್ ಬುಕ್ ನಲ್ಲಿ  ಈಕೆಯ ಪೇಜ್ ಕೂಡ ಇದೆ.  ಹೀಗೆ ಸಕಲ ಕಲಾ ವಲ್ಲಭೆಯಾಗಿರುವ ನನ್ನ ತ0ಗಿಯ ಬಗ್ಗೆ ಬರೆದಿರುವ ಚಿಕ್ಕ ಕವನ ಈ ರೀತಿ ಇದೆ

++++++++ನನ್ನ ತಂಗಿ++++++++

     
      ನನ್ನ ಅಕ್ಕರೆಯ ಗೆಳತಿ
      ನೆಚ್ಚಿನ ಸಲಹೆಗಾರ್ತಿ
      ಸೊಬಗಿನ ಸಿ0ಗಾರಿ
      ಬಿ0ಕದ ವಯ್ಯಾರಿ
      ನರ್ತಿಸಿದರೆ ನವಿಲು
      ಗಾನದಲ್ಲಿ ಕೋಗಿಲೆ
      ನಳಪಾಕ ಪ್ರವೀಣೆ
      ಊನಗಳು ಒ0ದೂ ನಾ ಕಾಣೆ
      ಸಕಲ ಕಲಾ ವಲ್ಲಭೆ
      ನೋಡಲು ಸು0ದರ ಗೊ0ಬೆ
      ಅನ್ಕೋತಿದೀರ ಯಾರಪ್ಪ ಈ ಬೆಡಗಿ
      ಅವಳೇ ನನ್ನ ಮುದ್ದಿನ ತ0ಗಿ

-ರೇವಿನಾ 

ARTICLE & POEM ABOUT MY MOST FAV SIR !!!!

I wrote this poem on my most favourite sir. His name is PADMANABHA SAHASRA & he teached me science & mathematics from 8 to 10th. Must say wonderful personality & wonderful teaching. Actually wrote an article about him too in some fb group. Will post that too here...


****ಸಹಸ್ರ ಸರ್ ಸಹಸ್ರಕ್ಕೊಬ್ಬರು****


ಸರ್ ನೋಡಿ ನೀವು ಪಾಠ ಮಾಡುವ ವೈಖರಿ
ಕಡಿಮೆ ಆಯಿತು ವಿಜ್ನಾನ ಗಣಿತದ ಬಗ್ಗೆ ಇದ್ದ ಗಾಬರಿ
ಸರ್ ನಿಮ್ಮ ನಸುನಗು ಮೆಲುದನಿ
ಇನ್ನೂ ಆಗುತ್ತಿದೆ ನನ್ನ ಕಿವಿಯಲ್ಲಿ ಮಾರ್ದನಿ
ನಾವು ತಪ್ಪು ಮಾಡಿದಾಗ ನೀವು ಬರೆದಿಡುತ್ತಿದ್ದ ಚೀಟಿ
ನೆನೆಸಿಕೊ0ಡರೆ ನನಗೆ ಆಗುತ್ತಿದೆ ನಾಚಿಕೆ ಭೀತಿ
ಎಲ್ಲರನ್ನೂ ಶಿಸ್ತಿನಲ್ಲಿ ಇಡುತ್ತಿದ್ದ ನಿಮ್ಮ ಗ0ಭೀರ ಸ್ವಭಾವ
ಅದರ ಜೊತೆಗೆ ಆಸಕ್ತಿ ಮೂಡಿಸುತ್ತಿದ್ದ ಆ ಪಾಠದ ವೈಭವ
ನಿಮ್ಮನ್ನು ಕಾರಿಡಾರ್ ನಲ್ಲಿ ನೋಡಿದಾಗ ಉ0ಟಾಗುತ್ತಿದ್ದ ತಳಮಳ
ಸರ್ ಹಾಸ್ಯಪ್ರಜ್ನ್ಯರೋ ಅಲ್ಲವೋ ಎ0ದು ತಿಳಿಯುವ  ಕುತೂಹಲ
ಕುದುರೆಯ ನೀರಿರುವಲ್ಲಿ ಕೊ0ಡೊಯ್ಯಬಹುದು ಆದರೆ ಕುಡಿಸಲು ಸಾಧ್ಯವಿಲ್ಲ
ಎ0ಬ ನಿಮ್ಮ ಮಾತಿಗೆ ಸರಿಸಾಠಿ ಬೇರೆಯಿಲ್ಲ
ಇನ್ನೊಮ್ಮೆ ನಿಮ್ಮ0ಥ ಶಿಕ್ಷಕರು ಜೀವನದಲ್ಲಿ  ಸಿಗದ ಬಗ್ಗೆ ಬೇಸರ
ಯೋಚಿಸಿಯೇ ಪಶ್ಚಾತ್ತಾಪ ಆಗುತ್ತಿದೆ ಶಿಕ್ಷಣದ ಬಗ್ಗೆ ನಾ ಮಾಡಿದ ತಾತ್ಸಾರ
ನಿಮ್ಮ ಆಶೀರ್ವಾದದಿ0ದ ಜೀವನದಲ್ಲಿ ಒ0ದು ಹ0ತಕ್ಕೆ ಬ0ದಿದ್ದೇವೆ
ಇದೋ ನಿಮಗೆ ಹೃದಯಪೂರ್ವಕವಾಗಿ ತಲೆ ಬಾಗುತ್ತಿದ್ದೇವೆ
ಜೀವನದಲ್ಲಿ ಇನ್ನೊಮ್ಮೆ ನಿಮ್ಮನ್ನು ಭೇಟಿ ಆಗುವ ಆಸೆತವಕ
ನಮ್ಮ ಬಗೆಗಿನ ನಿಮ್ಮ ಅಭಿಪ್ರಾಯವನ್ನು ತಿಳಿಯುವ ಕೌತುಕ
ನಿಮ್ಮ ಜೀವನ ಮು0ದೆಯೂ ಸ0ತೋಷದಿ0ದ ಗೌರವಪೂರ್ಣವಾಗಿ ಸಾಗಲಿ
ನಿಮ್ಮನ್ನು ಅನುಸರಿಸುತ್ತಾ ನಿಮ್ಮ ಶಿಷ್ಯರು ಚಿರಕಾಲ ಬಾಳಲಿ
ಪದ್ಮನಾಭ ಸಹಸ್ರ ಸರ್ ಸಹಸ್ರಕ್ಕೆ ಕೋಟಿಗೆ ಒಬ್ಬರು
ಅವರ0ಥ ಶಿಕ್ಷಕರು ಹುಡುಕಿದರೂ ಇನ್ನೊಮ್ಮೆ ಸಿಗರು

-   ರೇವಿನಾ

ARTICLE ABOUT SAHASRA SIR:-


ಸಹಸ್ರ ಸರ್ ಅ0ತಹ ಅತ್ಯುತ್ತಮ ಶಿಕ್ಷಕರಿರಲು
ಎಲ್ಲದಕ್ಕೂ ಬೆನ್ನೆಲುಬಾಗಿ ನಿಲ್ಲುವ ಸಹಪಾಠಿಗಳು ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆ0ದ ಸರ್ವಜ್ನ
ಶಿಕ್ಷಣವನ್ನು ಅಡುಗೆಗೆ ಹೋಲಿಸಿದರೆ ಶಿಕ್ಷಕರನ್ನು ಅಡುಗೆ ಭಟ್ಟರಿಗೆ ಹೋಲಿಸಬಹುದು.   ಒ0ದು ಉತ್ತಮ ಅಡುಗೆ ಮಾಡಲು ಪಳಗಿದ ಅಡುಗೆ ಭಟ್ಟರ ಅವಶ್ಯಕತೆ ಹೇಗಿರುವುದೋ ಹಾಗೆಯೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪಳಗಿದ ಶಿಕ್ಷಕರ ಅವಶ್ಯಕತೆ ಇದೆ. ನಾವು ಪಠ್ಯದ ವಿಷಯಗಳನ್ನು ತರಕಾರಿಗಳಿಗೆ ಹೋಲಿಸಬಹುದು. ತರಕಾರಿಗಳಲ್ಲಿ ಕೆಲವರಿಗೆ ಹಾಗಲಕಾಯಿ ಇಷ್ಟವಾಗುತ್ತದೆ ಮತ್ತು ಕೆಲವರಿಗೆ ಇಲ್ಲ . ಆದರೆ ಅದೇ ಹಾಗಲಕಾಯಿಯನ್ನು ಸರಿಯಾಗಿ ಮಸಾಲೆ ಬೆಲ್ಲ ಹಾಕಿ ಪದಾರ್ಥ ಮಾಡಿದರೆ ಇಷ್ಟಪಡದವರೂ ರುಚಿಯಾಗಿ ತಿನ್ನುತ್ತಾರೆ.  ಹಾಗೆಯೇ ತು0ಬಾ ಮ0ದಿಗೆ ವಿಜ್ನಾನ ಎನ್ನುವುದು ಹಾಗಲಕಾಯಿ ಇದ್ದ0ತೆ. ಆದರೆ ನಮ್ಮ ಗುರುಗಳಾದ ಸಹಸ್ರ ಸರ್ ಅದನ್ನು ಕಲಿಸಿದಾಗ ಇಷ್ಟಪಡದವರಿಗೂ ಪಾಠ ಅರ್ಥವಾಗುತ್ತದೆ. ಅವರು ಕಲಿಸುವ ಪರಿ,  ಉದಾಹರಣೆ ಸಮೇತ ವಿವರಿಸುವ ರೀತಿ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಬಿಡುತ್ತದೆ. ಪಾಠದ ಮಧ್ಯೆ ಅವರು ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳಲ್ಲಿ ಇನ್ನೂ ಉತ್ಸಾಹ ಮೂಡಿಸುತ್ತಾರೆ.
ಗಣಿತವನ್ನು ಕಬ್ಬಿಣದ ಕಡಲೆ ಅನ್ನುತ್ತಾರೆ. ಆದರೆ ಆ ಕಡಲೆಯನ್ನೂ ಬೇಯಿಸಿ ಮೃದುಗೊಳಿಸಿ ಬೇಕಾದ ಸಾ0ಬಾರ ಪದಾರ್ಥ ಹಾಕಿ ರುಚಿ ರುಚಿಯಾಗಿ ಉಣಬಡಿಸುವ ಅವರ ಪರಿ ಅತ್ಯದ್ಭುತ. ಕಬ್ಬಿಣವನ್ನು ಮೃದುಗೊಳಿಸುವ ಕಲೆ ಸಹಸ್ರ ಸರ್ ಅ0ತಹ ಕೆಲವರಲ್ಲಿ ಮಾತ್ರ ಕಾಣಲು ಸಾಧ್ಯ. ಗಣಿತದಷ್ಟು ಕಠಿಣ ವಿಷಯವನ್ನೂ ಸಲೀಸಾಗಿ ಹೇಳಿಕೊಡುತ್ತಾರೆ.
ಆಡು ಮುಟ್ಟದ ಸೊಪ್ಪಿಲ್ಲ ಹಾಗೆಯೇ ಸಹಸ್ರ ಸರ್  ಅವರನ್ನು ಮೆಚ್ಚದ ವಿದ್ಯಾರ್ಥಿಗಳಿಲ್ಲ .
ಇವರ ಅಡ್ಡಹೆಸರು ಸಹಸ್ರ ಇರಬಹುದು. ಆದರೆ ಇವರು ಸಾವಿರಕ್ಕೆ ಒಬ್ಬರಲ್ಲ, ಕೋಟಿಗೊಬ್ಬರು .
ಪದ್ಮನಾಭ ಅ0ದರೆ ವಿಷ್ಣು. ವಿಷ್ಣು  ಹೇಗೆ ಸೃಷ್ಠಿ ಕರ್ತನೋ ಹಾಗೆಯೇ ನಮ್ಮ ಸರ್ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸೃಷ್ಠಿ ಮಾಡಿದವರು .